ನವದೆಹಲಿ: ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ ಎಂದಾಕ್ಷಣ ಪಡ್ಡೆ ಹುಡುಗರಿಂದ ಹಿಡಿದು ಮುದುಕರವರೆಗೂ ಸನ್ನಿ ಹಿಡಿಯದೇ ಇರದು... ಇದೀಗ ಈ ಮಾದಕ ಬೆಡಗಿ ಕೂಲಿ ನಂ.1 ಚಿತ್ರದ ಹಾಡಿಗೆ ಇತ್ತೀಚೆಗೆ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ಬಾಲಿವುಡ್ ಮಾದಕ ಬೆಡಗಿ ಎಂದೇ ಹೆಸರಾಗಿರುವ ಸನ್ನಿ ಲಿಯೋನ್ ತಮ್ಮ ಡ್ಯಾನ್ಸ್ ಗಳಿಂದಾಗಿಯೇ ಹಲವರ ನಿದ್ದೆಗೆಡಿಸಿದ್ದರು. ಇದೀಗ ತಮ್ಮ ಹೊಸ ಚಿತ್ರವೊಂದರ ಶೂಟಿಂಗ್ ವೇಳೆಯಲ್ಲಿ ಬಾಲಿವುಡ್‍ನ ಜನಪ್ರಿಯ ಹಾಡು ಕೂಲಿ ನಂ.1 ಚಿತ್ರದ `ಮೇ ತೋ ರಸ್ತೆ ಸೆ ಜಾ ರಹಾ ಥಾ’ ಹಾಡಿಗೆ ಸೂಪರ್ ಆಗಿ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳನ್ನು ಮತ್ತಷ್ಟು ಸೆಳೆದಿದ್ದಾರೆ. ಈ ಡ್ಯಾನ್ಸ್ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಶೇರ್ ಮಾಡಿದ್ದು, 7 ಲಕ್ಷಕ್ಕೂ ಅಧಿಕ ಮಂದಿ ವೀಡಿಯೋ ವೀಕ್ಷಿಸಿದ್ದಾರೆ.