ನವದೆಹಲಿ: ಖ್ಯಾತ ಬಾಲಿವುಡ್ ಸೂಪರ್ ಸ್ಟಾರ್ ಅಜಯ್ ದೇವಗನ್, ಸೈಫ್ ಅಲಿ ಖಾನ್ ಹಾಗೂ ಕಾಜೋಲ್ ಅಭಿನಯದ ಅವರ ಮುಂಬರುವ ಚಿತ್ರ 'ತಾನಾಜಿ: ದಿ ಅನ್ಸಂಗ್ ವಾರಿಯರ್' ಅನ್ನು ಅಭಿಮಾನಿಗಳು ಬಹು ನಿರೀಕ್ಷೆಯಿಂದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಆದರೆ, ಚಿತ್ರ ಬಿಡುಗಡೆಗೂ ಮುನ್ನವೇ ತನ್ನ ಅಭಿಮಾನಿಗಳನ್ನು ಖುಷಿಪಡಿಸಲು ಮುಂದಾಗಿರುವ ಅಜಯ್ ದೇವಗನ್ ಚಿತ್ರದ ಎರಡನೆಯ ಜಬರ್ದಸ್ತ್ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.


COMMERCIAL BREAK
SCROLL TO CONTINUE READING


ಕೆಲವೇ ಗಂಟೆಗಳ ಹಿಂದೆ ಅಜಯ್ ದೇವಗನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಟ್ರೈಲರ್ ಅನ್ನು ಶೇರ್ ಮಾಡಿದ್ದಾರೆ. ಶೇರ್ ಮಾಡಿದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ #TanhajiTrailer2 ತನ್ನ ಟ್ರೆಂಡ್ ಆರಂಭಿಸಿದೆ. ಮೊದಲ ಟ್ರೈಲರ್ ನಲ್ಲಿ ಯುದ್ಧ ಹಾಗೂ ಯುದ್ಧನೀತಿಗಳನ್ನು ಕೇಳಿದ ವೀಕ್ಷಕರಿಗೆ ಈ ಟ್ರೈಲರ್ ನಲ್ಲಿ ತಾನಾಜಿಯ ಬೇರೆ ರೂಪವೇ ಕಂಡುಬಂದಿದೆ.



ಈ ಟ್ರೈಲರ್ ನಲ್ಲಿ ಸೈಫ್ ಅಲಿಖಾನ್ ಹಾಗೂ ಕಾಜೋಲ್ ಅವರ ಹಲವಾರು ದೃಶ್ಯಗಳನ್ನು ತೋರಿಸಲಾಗಿದೆ. ಇಡೀ ಟ್ರೈಲರ್ ನಲ್ಲಿ ಹುಮ್ಮಸ್ಸು, ಧೈರ್ಯ ಹಾಗೂ ಭಾವನೆಗಳ ಜಬರ್ದಸ್ತ್ ಒಗ್ಗರಣೆ ಹಾಕಲಾಗಿದೆ. ಹೇಗೆ ಮೊಘಲರು ಕೊಂಡಾಣಾ ಕೋಟೆಯ ಮೇಲೆ ಅಧಿಪತ್ಯ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಈ ಟ್ರೈಲರ್ ನಲ್ಲಿ ತೋರಿಸಲಾಗಿದೆ. ಇನ್ನೊಂದೆಡೆ ಮರಾಠಾ ಸೇನೆ ಕೊಂಡಾಣಾ ಕೋಟೆಯ ಮೇಲೆ ಕೇಸರಿ ಬಾವುಟ ಹಾರಿಸಲು ಆಂದೋಲನ ನಡೆಸುತ್ತಿರುವುದು ಕಂಡುಬಂದಿದೆ. ಈ ಚಿತ್ರ 10 ಜನವರಿ 2020ಕ್ಕೆ ಬೆಳ್ಳಿ ಪರದೆಯ ಮೇಲೆ ರಿಲೀಸ್ ಆಗಲಿದೆ.