Nora Fatehi Bold Video - ತನ್ನ ಸಿಜ್ಲಿಂಗ್ ಡ್ಯಾನ್ಸ್ ಮೂವ್‌ಗಳ ಹೊರತಾಗಿ, ತನ್ನ ಬೋಲ್ಡ್‌ನೆಸ್‌ಗಾಗಿ ಸುದ್ದಿ ಮಾಡುತ್ತಿರುವ ನಟಿ ನೋರಾ ಫತೇಹಿ (Nora Fatehi) ಇತ್ತೀಚೆಗೆ ಹಲವು ರೀತಿಯ ಕಾರಣಗಳಿಂದ ಸುದ್ದಿಯಲ್ಲಿದಾಳೆ. ಈಕೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರಿ ವೈರಲ್ (Nora Fatehi Viral Video) ಆಗುತ್ತಿದ್ದು, ಅದರಲ್ಲಿ ಆಕೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾಳೆ. ಈ ವೀಡಿಯೋದಲ್ಲಿ ಆಕೆ ಬೋಲ್ಡ್ ಅವತಾರದಲ್ಲಿ ರಿವಿಲಿಂಗ್ ಡ್ರೆಸ್ ಧರಿಸಿದ್ದಾರೆ. ಆಕೆಯ ಈ ಸ್ಟೈಲ್ ಮತ್ತೊಮ್ಮೆ ಅಭಿಮಾನಿಗಳನ್ನು ಮತ್ತೊಮ್ಮೆ ಹುಚ್ಚೆಬ್ಬಿಸಿದೆ. ಅವಳ ಈ ಅವತಾರ ಕಂಡು ಹಲವು ಅಭಿಮಾನಿಗಳಿಗೆ ಆಕೆಯ ಮೇಲೆ ಚಿತ್ರಿಸಲಾದ ಹಾಡು 'ಹಾಯ್ ಗರ್ಮೀ' ಸ್ಮೃತಿಪಟಲಕ್ಕೆ ಮರುಕಳಿಸಿದೆ.


COMMERCIAL BREAK
SCROLL TO CONTINUE READING

ವೈರಲ್ ಅದ ವಿಡಿಯೋ (Nora Fatehi Airport Video)
ನೋರಾ ಫತೇಹಿ ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾಳೆ. ಈ ಸಂದರ್ಭದಲ್ಲಿ  ನೋರಾಳನ್ನು ಗಮನಿಸಿದ ಪಾಪರಾಜಿಗಳು ಅವಳನ್ನು ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿಯಲು ಧಾವಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ನೋರಾ ಅವರ ಹಾಟ್ ಸ್ಟೈಲ್ ಕೂಡ ಕಂಡುಬಂದಿದೆ, ಅವರು ಬಿಳಿ ಬಣ್ಣದ ಟಿ-ಪೀಸ್ ಡ್ರೆಸ್ ಧರಿಸಿದ್ದಳು. ಇದರೊಂದಿಗೆ ಪೀಚ್ ಕಲರ್ ಬ್ಯಾಗ್ ಅನ್ನು ಕೈಯಲ್ಲಿ ಹಿಡಿದುಕೊಂಡಿದ್ದಳು. ಹೈ ಹೀಲ್ಸ್‌ನೊಂದಿಗೆ, ನೋರಾ ತನ್ನ ಮುಖವನ್ನು ಮಾಸ್ಕ್ ಮತ್ತು ಸನ್‌ಗ್ಲಾಸ್‌ನಿಂದ ಮುಚ್ಚಿಕೊಂಡಿರುವುದು ಕಂಡುಬಂದಿದೆ. ನೋರಾ ಕೈಯಲ್ಲಿ ಫೋನ್ ಹಿಡಿದು ಕ್ಯಾಮರಾ ಮುಂದೆ ಪೋಸ್ ನೀಡುತ್ತಿರುವುದು ಕಂಡು ಬಂತು. ವೈರಲ್ ಆಗುತ್ತಿರುವ ನೋರಾಳ ಈ ವಿಡಿಯೋವನ್ನು (Nora Fatehi Trending Video) ನೀವೂ ಒಮ್ಮೆ ನೋಡಿ.


ಇದನ್ನೂ ಓದಿ-ಮುಂದಿನ ವರ್ಷ ಈ ದಿನಾಂಕದಂದು ಸಪ್ತಪದಿ ತುಳಿಯಲಿರುವ ರಣಬೀರ್ - ಆಲಿಯಾ ಭಟ್



ಇದನ್ನೂ ಓದಿ-Viral video: ಕೋಳಿಯನ್ನು ರೇಗಿಸಿದ ಬಾಲಕ, ನಂತರ ನಡೆದದ್ದನ್ನು ನೋಡಿ ನೀವು ಹೊಟ್ಟೆ ಹಿಡಿದು ನಗುವಿರಿ


ಅಭಿಮಾನಿಗಳು ಹೇಳಿದ್ದೇನು?
ಪ್ರಸ್ತುತ ನೋರಾ ಫತೇಹಿಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಹಲ್ ಚಲ್ ಸೃಷ್ಟಿಸಿದೆ. ವಿಡಿಯೋಗೆ ಅಭಿಮಾನಿಗಳು ತಾಬಡ್ ತೋಡ್ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ವಿಡಿಯೋ ಮೇಲೆ ಸಿಕ್ಕ ಕೆಲ ಕಾಮೆಂಟ್ ಗಳ ಕುರಿತು ಹೇಳುವುದಾದರೆ, ಹಲವರು 'ಹಾಯ್ ಗರ್ಮೀ' ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಂದೆಡೆ ಏರ್ಪೋರ್ಟ್ ನಲ್ಲಿ ಬೋಲ್ಡ್ ಡ್ರೆಸ್ ನಲ್ಲಿ ಕಾಣಿಸಿಕೊಂಡದ್ದಕ್ಕಾಗಿ ಕೆಲವರು ಟ್ರೋಲ್ ಕೂಡ ಮಾಡಿದ್ದಾರೆ. ಇನ್ನೂ ಕೆಲವರು ನೋರಾಳ ಶಾಂದಾರ್ ಸ್ಟೈಲ್ ಗೆ ಕಾಂಪ್ಲಿಮೆಂಟ್ ಕೂಡ ನೀಡಿದ್ದಾರೆ. 


ಇದನ್ನೂ ಓದಿ-ಜೈಲಿನಿಂದ ಹೊರ ಬಂದ ನಂತರ ಮೊದಲ ಬಾರಿಗೆ ಪತ್ನಿ shilpa shetty ಜೊತೆ ಕ್ಯಾಮರಾ ಕಣ್ಣಿಗೆ ಬಿದ್ದ ರಾಜ್ ಕುಂದ್ರಾ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ