Vignesh gift to Nayanthara : ಲೇಡಿ ಸೂಪರ್‌ ಸ್ಟಾರ್‌ ನಟಿ ನಯನತಾರಾ ಹುಟ್ಟುಹಬ್ಬ ನವೆಂಬರ್ 18 ರಂದು ಜರುಗಿತು. ಅವರ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ನಟ ನಟಿಯರು ಅವರಿಗೆ ವಿಶ್‌ ಮಾಡಿದ್ದರು. ಇದೀಗ ಬರ್ತ್‌ಡೇ ಆಗಿ ಎರಡು ವಾರದ ನಂತರ ವಿಘ್ನೇಶ್ ಶಿವನ್ ನೀಡಿದ ಬಿಗ್‌ ಸರ್ಪ್ರೈಸ್ ನೋಡಿ ನಯನಾ ಶಾಕ್‌ ಆಗಿದ್ದಾರೆ. ಅಲ್ಲದೆ, ಉಡುಗೂರೆಯ ಬೆಲೆ ಕೇಳಿ ನೆಟ್ಟಿಗರು ದಂಗಾಗಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ನಯನತಾರ ಹುಟ್ಟು ಹಬ್ಬಕ್ಕೆ ವಿಘ್ನೇಶ್‌ ಐಷಾರಾಮಿ ಕಾರನ್ನು ಬುಕ್ ಮಾಡಿದ್ದಾರಂತೆ. ಆದರೆ ಅಂತಹ ಕಾರುಗಳು ಬುಕ್ ಮಾಡಿದ ತಕ್ಷಣ ಬರುವುದಿಲ್ಲ. ಹೀಗಾಗಿ ಸ್ವಲ್ಪ ಸಮಯ ತೆಗೆದುಕೊಂಡಿದೆ. ಹುಟ್ಟುಹಬ್ಬದ ಎರಡು ವಾರಗಳ ನಂತರ ಉಡುಗೊರೆ ಬಂದಿದ್ದು, ಆ ಐಷಾರಾಮಿ ಕಾರನ್ನು ನೋಡಿ ನಯನ ಬೆಚ್ಚಿ ಬೀದ್ದಿದ್ದಾರೆ. ಐಷಾರಾಮಿ ಬೆಂಜ್ ಮೇಬ್ಯಾಕ್ ಕಾರನ್ನು ವಿಘ್ನೇಶ್‌ ಉಡುಗೊರೆಯಾಗಿ ನೀಡಿದ್ದಾರೆ. 


ಪ್ರಭಾಸ್‌, ಶಾರುಖ್‌ಗೆ ಟಕ್ಕರ್‌ ಕೊಡ್ತಾರಾ ಡಿಬಾಸ್‌..! ʼಸಲಾರ್‌ʼ ʼಡಂಕಿʼಗೆ ʼಕಾಟೇರʼ ಕಂಟಕ


ಪತಿ ನೀಡಿರುವ ಗಿಫ್ಟ್‌ ಕುರಿತು ನಯನ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ, ವೆಲ್‌ಕಮ್ ಹೋಮ್ ಬ್ಯೂಟಿ.. ಮೈ ಡಿಯರ್ ಪತಿ.. ಥ್ಯಾಂಕ್ಸ್ ಫಾರ್ ಎ ನೈಸ್ ಬರ್ತ್ ಡೇ ಗಿಫ್ಟ್.. ಲವ್ ಯೂ.. ಎಂದು ಶೀರ್ಷಿಕೆ ಬರೆದುಕೊಂಡು ಪತಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.


ಇನ್ನು ನಯನತಾರ ಹಂಚಿಕೊಂಡಿರುವ ಫೋಟೋದಲ್ಲಿ ಕಾರನ್ನು ಸಂಪೂರ್ಣವಾಗಿ ತೋರಿಸಲಾಗಿಲ್ಲ. ಇದರಿಂದ ಕೆಲವರಿಗೆ ಈ ಕಾರು ಯಾವುದು.. ಯಾವ ಬ್ರ್ಯಾಂಡ್ ಅಂತ ಗೊತ್ತಾಗುತ್ತಿಲ್ಲ.. ಎಂದು ನೆಟ್ಟಿಗರು ಕಾಮೆಂಟ್‌ ಮೂಲಕ ಹೇಳುತ್ತಿದ್ದಾರೆ. ಅಲ್ಲದೆ ತಮಗೆ ತಿಳಿದ ಇತರೆ ಎಲ್ಲಾ ಕಾರುಗಳ ಮಾದರಿ ಮತ್ತು ಬ್ರ್ಯಾಂಡ್‌ಗಳ ಹೆಸರು ಕಾಮೆಂಟ್‌ ಮಾಡುತ್ತಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.