ದೇವರಕೊಂಡ ಲವ್ ಫೇಲ್ಯೂರ್ ಸ್ಟೋರಿ ಬಹಿರಂಗ..! ಸತ್ಯ ಬಿಚ್ಚಿಟ್ಟ ನಟ
Anand Devarakonda love story : ಆ ಯುವತಿಯ ಮೇಲೆ ಅನೇಕ ನಿರೀಕ್ಷೆಗಳೊಂದಿಗೆ ಆನಂದ್ ತನ್ನ ಕುಟುಂಬವನ್ನು ಬಿಟ್ಟು ಚಿಕಾಗೋಗೆ ಹುಡುಗಿಗಾಗಿ ಹೋಗಿದ್ದರು. ಆದರೆ ಅಲ್ಲಿಗೆ ಹೋದ ಬಳಿಕ ಬಾಲಕಿಯ ಬಗ್ಗೆ ಸತ್ಯಾಂಶ ತಿಳಿದು ಸಹಿಸಲಾಗದೆ ಮನೆಗೆ ಹಿಂತಿರುಗಿದ್ದರು..
Anand Devarakonda love story : ಯುವ ನಟ ಆನಂದ ದೇವರಕೊಂಡ ʼದೊರೆಸಾನಿʼ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಸಿನಿರಂಗದಲ್ಲಿ ಉತ್ತಮ ಕೆರಿಯರ್ ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದ ನಟ ʼಬೇಬಿʼ ಚಿತ್ರದ ಮೂಲಕ ಸೌತ್ ಸಿನಿ ಪ್ರೇಕ್ಷಕರಿಗೆ ಪರಿಚಯವಾದರು. ಈ ಸಿನಿಮಾದಲ್ಲಿ ಲವ್ ಫೇಲ್ಯೂರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಆನಂದ್ ಅದ್ಭುತವಾಗಿ ನಟಿಸಿದ್ದರು.
ರೌಡಿ ಹೀರೋ ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಪ್ಯಾನ್ಸ್ ಫಾಲೋವಿಂಗ್ ಹೊಂದಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ವಿಜಯ್ ಕಿರಿಯ ಸಹೋದರ ಆನಂದ್ ದೇವರಕೊಂಡ ಸಹ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟು ಸ್ಟಾರ್ ಹೀರೋ ಆಗಿ ಮಿಂಚಿದ್ದಾರೆ. ಇತ್ತೀಚಿಗೆ ಆನಂದ್ ನಟನೆಯ ಬೇಬಿ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ಆನಂದ್ ಸಹಜ ಅಭಿನಯದಿಂದ ಪ್ರೇಕ್ಷಕರ ಮನಗೆದ್ದರು. ಆದರೆ, ಸಿನಿಮಾ ಹಿಟ್ ಆದ ಸಂಪೂರ್ಣ ಕ್ರೆಡಿಟ್ ನಾಯಕಿ ವೈಷ್ಣವಿ ಚೈತನ್ಯ ಅವರ ಪಾಲಾಗಿದ್ದರಿಂದ ಆನಂದ್‌ಗೆ ಹೆಚ್ಚಿನ ಕ್ರೆಡಿಟ್ ಸಿಕ್ಕಿಲ್ಲ.
ಇದನ್ನೂ ಓದಿ:ತಿಳಿ ಗುಲಾಬಿ ಬಣ್ಣದ ಮೂಲಕ ಎಲ್ಲರಿಗೂ ವ್ಯಾಲೆಂಟೆನ್ಸ್ ಡೇ ವಿಶ್ಸ್ ಎಂದ ಗಾಯಕಿ
ಬೇಬಿ ಸಿನಿಮಾದಲ್ಲಿ ಲವ್ ಫೇಲ್ಯೂರ್ ಬಾಯ್ ಪಾತ್ರದಲ್ಲಿ ಆನಂದ್ ತುಂಬಾ ಸಹಜವಾಗಿ ನಟಿಸಿದ್ದರು. ಆನಂದ್ ಆ ಪಾತ್ರದಲ್ಲಿ ಜೀವಿಸಿದ್ದರು ಅಂದ್ರೆ ತಪ್ಪಾಗಲ್ಲ. ಈ ಪಾತ್ರವನ್ನು ಇಷ್ಟು ನೈಜವಾಗಿ ನಟ ಹೇಗೆ ನಿರ್ವಹಿಸಿದ ಎನ್ನುವ ರಹಸ್ಯ ಇದೀಗ ಬಯಲಾಗಿದೆ. ಆನಂದ್ ಪ್ರೇಮ ವೈಫಲ್ಯವೇ ಅವರನ್ನು ಇಷ್ಟು ಅದ್ಭುತವಾಗಿ ನಟಿಸುವಂತೆ ಮಾಡಿತ್ತು ಎನ್ನುವ ವಿಚಾರ ತಿಳಿದು ಬಂದಿದೆ.. ಈ ಕುರಿತು ಅವರೇ ಮಾಹಿತಿ ನೀಡಿದ್ದಾರೆ.
ಆನಂದ್ ತಮ್ಮ ಶಾಲಾ ದಿನಗಳಲ್ಲಿ ಹುಡುಗಿಯೊಬ್ಬಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರಂತೆ. ಆದ್ರೆ ಬಾಲಕಿ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ಹೋದಾಗ ಆಕೆಯನ್ನು ಬಿಟ್ಟಿರಲಾದರೆ ಆನಂದ್ ಕೂಡ ಆಕೆಯ ಜೊತೆ ವಿದೇಶಕ್ಕೆ ತೆರಳಿದ್ದರು. ಚಿಕಾಗೋದ ಐದು ಪ್ರಮುಖ ಕಾಲೇಜುಗಳಿಗೆ ಅರ್ಜಿ ಸಲ್ಲಿಸಿದರು. ಅಂತಿಮವಾಗಿ ಕಾಲೇಜು ಒಂದರಲ್ಲಿ ಸೀಟು ಪಡೆದರು. ಇಷ್ಟು ಕಷ್ಟಪಟ್ಟು ಊರು ಬಿಟ್ಟು ಹೋಗಿದ್ದ ಆನಂದ್ ಲವ್ ಬ್ರೇಕ್ ಅಪ್ ಆಯ್ತು.
ಇದನ್ನೂ ಓದಿ: ತಿಳಿ ಗುಲಾಬಿ ಬಣ್ಣದ ಮೂಲಕ ಎಲ್ಲರಿಗೂ ವ್ಯಾಲೆಂಟೆನ್ಸ್ ಡೇ ವಿಶ್ಸ್ ಎಂದ ಗಾಯಕಿ
ಅನೇಕ ನಿರೀಕ್ಷೆಗಳೊಂದಿಗೆ ಆನಂದ್ ತನ್ನ ಸ್ನೇಹಿತರನ್ನು ಮತ್ತು ಕುಟುಂಬವನ್ನು ಬಿಟ್ಟು ಚಿಕಾಗೋಗೆ ಹುಡುಗಿಗಾಗಿ ಹೋಗಿದ್ದರು. ಆದರೆ ಅಲ್ಲಿಗೆ ಹೋದ ಬಳಿಕ ತನ್ನ ಪ್ರೇಯಸಿಯ ಬಗ್ಗೆ ಸತ್ಯಾಂಶ ತಿಳಿದು ಸಹಿಸಲಾಗದೆ ಮನೆಗೆ ಮರಳಿದ್ದರು. ಅವರಿಗೆ ಬ್ರೇಕಪ್ ನೋವಿನಿಂದ ಹೊರಬರಲು ನಾಲ್ಕೈದು ವರ್ಷ ಸಮಯ ಬೇಕಾಯಿತಂತೆ. ಇದರಿಂದಲೇ ಆನಂದ್ ಆ ಹುಡುಗಿಯನ್ನು ಎಷ್ಟು ಇಷ್ಟ ಪಟ್ಟಿದ್ದರು ಅಂತ ಗೊತ್ತಾಗುತ್ತೆ ಅಲ್ವಾ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.