Vijay devarakonda on Rashmika video: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಳ್ಳೆಯ ಸ್ನೇಹಿತರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಇಬ್ಬರ ನಡುವೆ ಲವ್‌ ಇದೆ ಎಂಬುವುದು ನೆಟ್ಟಿಗರ ಅಭಿಪ್ರಾಯ. ಈ ಕುರಿತು ಹಲವು ಸುಳ್ಳು ಸುದ್ದಿಗಳೂ ಸಹ ಹಬ್ಬಿದ್ದವು. ಈ ಬಗ್ಗೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಮಧ್ಯ ರಶ್ಮಿಕಾ ಡೀಪ್‌ ಫೇಕ್‌ ವಿಡಿಯೋ ವೈರಲ್‌ ಆದ ಬೆನ್ನಲ್ಲೆ ನಟ ವಿಜಯ್‌ ಪ್ರತಿಕ್ರಿಯೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಕಳೆದ ಎರಡು ದಿನಗಳಿಂದ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿರುವುದು ಗೊತ್ತೇ ಇದೆ. ಬ್ರಿಟಿಷ್ ಭಾರತೀಯ ಹುಡುಗಿ ಜಾರಾ ಪಟೇಲ್ ವಿಡಿಯೋಗೆ ಎಐ ತಂತ್ರಜ್ಞಾನ ಬಳಸಿ ರಶ್ಮಿಕಾ ಅವರ ಮುಖವನ್ನು ಹಾಕಿ ಕಿಡಿಗೇಡಿಗಳು ವೈರಲ್‌ ಮಾಡಿದ್ದರು.


ಇದನ್ನೂ ಓದಿ:ನಟನೆಗೆ ಕಾಲಿಟ್ರಾ ಕಾಂಗ್ರೆಸ್‌ ನಾಯಕಿ ʼಸೋನಿಯಾ ಗಾಂಧಿ.ʼ.? ಪೋಸ್ಟರ್‌ ವೈರಲ್‌


ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೆ ಅಮಿತಾಬ್ ಬಚ್ಚನ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಆರೋಪಿಗಳನ್ನು ಪತ್ತೆ ಹಚ್ಚಿ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಮಿತಾಬ್ ಒತ್ತಾಯಿಸಿದ್ದರು. ಅನೇಕ ಭಾರತೀಯ ಚಿತ್ರರಂಗದ ನಟ ನಟಿಯರು ಸಹ ಈ ಕುರಿತು ಧ್ವನಿ ಎತ್ತಿದ್ದರು. ಎಐ ತಂತ್ರಜ್ಞಾನದಿಂದ ಎಷ್ಟು ಹಾನಿಯಾಗಲಿದೆ ಎಂದು ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದರು.


ಸಂಜು ವೆಡ್ಸ್‌ ಗೀತಾ-2 ನಲ್ಲಿ ಚೇತನ್‌ ಅಹಿಂಸಾ: ಹಾಗಾದ್ರೆ ಡೈರೆಕ್ಟರ್‌ ನಾಗಶೇಖರ್‌ ಹೇಳಿದ್ದೇನು?


ಸರ್ಕಾರದ ಆದೇಶ ಬೆನ್ನಲ್ಲೆ ನಟ ವಿಜಯ ದೇವರಕೊಂಡ ಕೂಡ ಪ್ರತಿಕ್ರಿಯಿಸಿದ್ದಾರೆ. ಸರ್ಕಾರ ಇಂತಹ ನಿರ್ಧಾರ ತೆಗೆದುಕೊಂಡಿರುವುದು ಸಂತಸದ ವಿಷಯ.. ಮತ್ತೊಮ್ಮೆ ರೀತಿಯ ಘಟನೆ ಯಾವ ಮಹಿಳೆಗೂ ಆಗಬಾರದು. ಮೇಲಾಗಿ ಇಂತಹ ವಿಷಯಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಲು ಇಲಾಖೆಯನ್ನು ಸ್ಥಾಪಿಸಬೇಕು.. ಈ ರೀತಿಯ ಕೃತ್ಯ ಎಸಗುವವರಿಗೆ ಶಿಕ್ಷೆಯಾಗಬೇಕು.. ಆಗ ಮಹಿಳೆಯರಿಗೆ ರಕ್ಷಣೆ ಸಿಗುತ್ತದೆ' ಎಂದು ವಿಜಯ್ ಒತ್ತಾಯಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.