Khushi Movie : ರಿಲೀಸ್‌ಗೂ ಮುಂಚೆ ಅಭಿಮಾನಿಗಳ ಮನ ಗೆದ್ದ ʼಖುಷಿʼ ಸಿನಿಮಾ ಇಂದು ಚಿತ್ರ ಮಂದಿರಗಳಲ್ಲಿ ತೆರೆಕಂಡಿದೆ. ದಕ್ಷಿಣ ಭಾರತದ ಹೆಸರಾಂತ ನಟ-ನಟಿ ವಿಜಯ ದೇವರಕೊಂಡ ಹಾಗೂ ಸಮಂತಾ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಬಿಗ್‌ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ ಪೈರಸಿ ಭೂತಕ್ಕೆ ಬಲಿಯಾಗಿದ್ದು, ಹಲವು ವೆಬ್‌ ಸೈಟ್‌ಗಳಲ್ಲಿ ಸಿನಿಮಾದ ಹೆಚ್‌ಡಿ ವಿಡಿಯೋ ಲೀಕ್‌ ಆಗಿದೆ. 


COMMERCIAL BREAK
SCROLL TO CONTINUE READING

ಇತ್ತೀಚಿನ ವರದಿಗಳ ಪ್ರಕಾರ ಸಮಂತಾ ಮತು ವಿಜಯ ದೇವರಕೊಂಡ ಅವರ ಸಿನಿಮಾ ಹೆಚ್‌ಡಿಯಲ್ಲಿ ಟೆಲಿಗ್ರಾಂ, ತಮಿಳ್‌ ರಾಕರ್ಸ, ಆನ್‌ಲೈನ್ ಮೂವಿ ವಾಚಸ್‌, 123ಮೂವಿಸ್‌, 123ಮೂವಿರೂಲ್ಸ್‌, ಫಿಲ್ಮಿಜಿಲ್ಲಾ ಹೀಗೆ ಹಲವಾರು ಪೈರಸಿ ವೆಬ್‌ಸೈಟ್‌ಗಳ ಮೂಲಕ ಲೀಕ್‌ ಆಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಕಳೆದವಾರ ತೆರೆಕಂಡ ಡ್ರೀಮ್‌ ಗರ್ಲ್‌ 2, ಅಕೇಲಿ ಸಿನಿಮಾಗಳೂ ಕೂಡ ಲೀಕ್‌ ಆಗಿದ್ದವು. 


ಇದನ್ನೂ ಓದಿ:  ರಶ್ಮಿಕಾ ಮಂದಣ್ಣ ಈಗ ಮೂಗುತಿ ಸುಂದರಿ, ಮದುವೆಗೆ ರೆಡಿಯಾಗ್ತಿದ್ದೀರಾ ಎಂದ ನೆಟ್ಟಿಜನ್!!
 
ಈ ಹಿಂದೆಯೂ ಕೂಡ ಬಿಗ್‌ ಬಜೆಟ್‌ ಸಿನಿಮಾಗಳು ಪೈರಸಿಗೆ ಬಲಿಯಾಗಿದ್ದವು. ಸನ್ನಿ ಡಿಯೋಲ್‌ ಹಾಗೂ ಅಮೀಷ್‌ ಪಟೇಲ್‌ ಅವರ ʼಗದಾರ್‌ 2ʼ, ʼರಾಕಿ ರಾಣಿ ಕೀ ಪ್ರೇಮ ಕಹಾನಿʼ, ಸಲ್ಮಾನ್‌ ಖಾನ್ ಅವರ ʼಕಿಸಿ ಕಾ ಬೈ ಕಿಸಿ ಕಾ ಜಾನ್‌ʼ, ಶಾರುಖ್‌ ಖಾನ್‌ ಅವರ ʼಪಠಾಣ್‌ʼ, ಅಜಯ ದೇವಗನ್‌ ಅವರ ʼಬೋಲಾʼ ಮತ್ತು ಕಾರ್ತಿಕ ಆರ್ಯನ್‌ ಅವರ ಇತ್ತೀಚಿಗೆ ತೆರೆ ಕಂಡ ʼಸತ್ಯ ಪ್ರೇಮ ಕಿ ಕಥಾʼ ಸಿನಿಮಾ ಹಲವಾರು ಜಾಲತಾಣಗಳ ಮೂಲಕ ಲೀಕ್‌ ಆಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.