Vijay Devarkonda : ಮದುವೆ ಕನಸು ಬಿಚ್ಚಿಟ್ಟ ರೌಡಿ ಬಾಯ್..!
Vijay Devarkonda about his Marriage : ಖುಷಿ ಚಿತ್ರದ ʼಆರಾಧ್ಯಾʼ ಸಾಂಗ್ ರಿಲೀಸ್ ಆಗಿ ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ಸಮಯದಲ್ಲಿ ಹಾಡಿನ ಬಗ್ಗೆ ಸ್ಪೇಷಲ್ ವಿಡಿಯೋ ಮಾಡಿ ವಿಜಯ್ ದೇವರಕೊಂಡ ಮಾತನಾಡಿದ್ದು ಅದರಲ್ಲಿ ನಟ ತಮ್ಮ ಮದುವೆಯ ಕುರಿತು ಮಾತನಾಡಿದ್ದಾರೆ.
Vijay Devarkonda Kushi Film Release Date : ಲೈಗರ್ ಸಿನಿಮಾ ಸೋಲಿನಿಂದ ನಟ ವಿಜಯ್ ದೇವರಕೊಂಡ ಇನ್ನು ಹೊರಬಂದಿಲ್ಲ. ಸದ್ಯ ಸಮಂತಾ ಜೊತೆ ನಟಿಸಿರುವ ʼಖುಷಿʼ ಚಿತ್ರದ ಹಾಡುಗಳು ರಿಲೀಸ್ ಆಗುತ್ತಿವೆ. ಇದೀಗ ಚಿತ್ರದ 2 ನೇ ಸಾಂಗ್ ರಿಲೀಸ್ ಆಗಿದ್ದು, ಸಾಕಷ್ಟು ಸೌಂಡ್ ಮಾಡುತ್ತಿದೆ.
ಇನ್ನು ಈ ಚಿತ್ರಕ್ಕೆ ಶಿವ ನಿರ್ವಾಣ್ ನಿರ್ದೇಶನ ಹಾಗೂ ಹೇಶಮ್ ಅಬ್ದುಲ್ ವಹಾಬ್ ಮ್ಯೂಸಿಕ್ ದೊರೆತಿದೆ. ಸದ್ಯ ಸಿದ್ ಶ್ರೀರಾಮ್ ಹಾಗೂ ಚಿನ್ಮಯಿ ಶ್ರೀಪಾದ ಹಾಡಿರುವ ಸಿನಿಮಾದ ʼಆರಾಧ್ಯಾʼ ಸಾಂಗ್ ಬಿಡುಗಡೆಯಾಗಿ ಬಾರೀ ಸದ್ದು ಮಾಡುತ್ತಿದೆ. ಮದುವೆಯಾದ ನವದಂಪತಿಯ ಪ್ರೀತಿ, ಪ್ರೇಮ, ಸಾಕಷ್ಟು ರೋಮ್ಯಾಂಟಿಕ್ ಸೀನ್‌ಗಳನ್ನು ಈ ಹಾಡಿನಲ್ಲಿ ತೋರಿಸಲಾಗಿದೆ.
ಈ ʼಖುಷಿʼ ಸಿನಿಮಾ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದ್ದು, ಕನ್ನಡದಲ್ಲಿ ನಾಗೇಂದ್ರ ಪ್ರಸಾದ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಈ ಆರಾಧ್ಯಾ ಸಾಂಗ್ ಬಗ್ಗೆ ವಿಷೇಶ ವಿಡಿಯೋ ಮಾಡಿ ಮಾತನಾಡಿದ ವಿಜಯ್ ಹಾಡಿನ ಸಾಹಿತ್ಯ ಸಂಗೀತ ಹಾಗೂ ಸನ್ನಿವೇಶದ ಕುರಿತು ಮಾತನಾಡಿದ್ದಾರೆ. "ನಾನು ಮದುವೆಯಾದರೆ ನನ್ನ ವೈವಾಹಿಕ ಜೀವನ ಹೀಗೆಯೇ ಇರಬೇಕು ಎಂದು ಆಸೆಗಳಿವೆ.." ಎಂದಿದ್ದಾರೆ
ಈ ಬಗ್ಗೆ ಮುಂದುವರೆದು ಮಾತನಾಡಿದ ವಿಜಯ್ "ನನಗೆ ಇನ್ನು ಮದುವೆಯಾಗಿಲ್ಲ, ಮದುವೆ ಆದರೆ ನನ್ನ ಲೈಫ್ ʼಆರಾದ್ಯʼ ಹಾಡಿನ ತರ ಬಹಳ ಕ್ಯೂಟ್ ಆಗಿ ಇರಬೇಕು" ಇಷ್ಟೇ ಅಲ್ಲ, "ನನಗೆ ಇನ್ನು ಮದುವೆಯಾಗಿಲ್ಲ, ಆದರೆ ಆರಾದ್ಯ ಹಾಡಿನಲ್ಲಿ ತೋರಿಸಿರುವ ಹಲವು ದೃಶ್ಯಗಳು ನನ್ನ ನಿಜ ಜೀವನದಲ್ಲಿ ನಡೆದಿರುವಂತದ್ದು, ನಿಜವಾಗಿ ಹೇಳುವುದಾದರೇ ನನ್ನ ಜೀವನದಲ್ಲಿ ನಡೆದ ಕೆಲವು ದೃಶ್ಯಗಳಿಂದ ಆರಾದ್ಯ ಸಾಂಗ್‌ನ್ನು ಮಾಡಲಾಗಿದೆ. ಎಂದು ಹೇಳಿದ್ದಾರೆ.
ಇನ್ನು ಈ ಮಾತಿಗೆ ಕೆಲವರು ಅಯ್ಯೋ ಮದುವೆ ಆಗ್ದೆನೇ ಮದುವೆ ನಂತರ ಕಥೆ ಹೇಗೆ ನಡೆಯುತ್ತೇ ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ. ಲೈಗರ್ ನಂತರ ಸ್ಯಾಮ್ ಜೊತೆಯಾಗಿ ಮತ್ತೆ ಪ್ರೇಕ್ಷಕರ ಮುಂದೆ ಬರಲು ವಿಜಯ್ ದೇವಕರಕೊಂಡ ಸಜ್ಜಾಗಿದ್ದಾರೆ. ಇನ್ನು ಈ ʼಖುಷಿʼ ಸಿನಿಮಾ ಸೆಪ್ಟಂಬರ್ 1ಕ್ಕೆ ತೆರೆಗೆ ಬರಲಿದೆ.
ಇದನ್ನೂ ಓದಿ-Sudeep: ಸುದೀಪ್ ಮೇಲಿನ ಆರೋಪಗಳ ಹಿಂದೆ ಸೂರಪ್ಪ ಬಾಬು ಕೈವಾಡ? ವೀರಕಪುತ್ರ ಶ್ರೀನಿವಾಸ ಬಟಾ ಬಯಲು ಮಾಡಿದ್ರು ಆ ಸತ್ಯ.!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.