ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ಕಿಡ್ನಾಪ್ ಮಾಡುತ್ತೇನೆ : ವಿಜಯ್ ಶಾಂಕಿಂಗ್ ಹೇಳಿಕೆ
Kushi movie : ಟಾಲಿವುಡ್ ನಟ ವಿಜಯ್ ದೇವರಕೊಂಡ ಖುಷಿ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದೆ. ಚನೈನಲ್ಲಿ ನಡೆದ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಲೈಗರ್ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ ಅವರನ್ನು ಕಿಡ್ನಾಪ್ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ.
Vijay devarakonda on Anirudh : ನಟ ವಿಜಯ್ ದೇವರಕೊಂಡ ಮತ್ತು ನಟಿ ಸಮಂತಾ ಅಭಿನಯದ ಖುಷಿ ಚಿತ್ರದ ಬಿಡುಗಡೆಗೆ ರೆಡಿಯಾಗಿದೆ. ಇತ್ತೀಚಿಗೆ ಈ ಚಿತ್ರದ ಪ್ರಚಾರ ಕಾರ್ಯ ಚೆನ್ನೈನ ವಡಪಳನಿ ಪ್ರಸಾದ್ ಲೇಬಲ್‌ನಲ್ಲಿ ನಡೆಸಲಾಯಿತು. ಈ ವೇಳೆ ವಿಜಯ್ ದೇವರಕೊಂಡ ಮ್ಯೂಜಿಕ್ ಡೈರೆಕ್ಟರ್ ಅನಿರುದ್ಧ ಅವರನ್ನು ಅಪಹರಣ ಮಾಡುವುದಾಗಿ ಹೇಳಿಕೆ ನೀಡಿದ್ದು, ವೈರಲ್ ಆಗಿದೆ.
ಕಾರ್ಯಕ್ರಮದ ವೇದಿಕೆ ಮೇಲೆ ʼಖುಷಿʼ ಸಿನಿಮಾ ಬಗ್ಗೆ ನಟ ವಿಜಯ್ ದೇವರಕೊಂಡ ಮಾತನಾಡಿ, ತಮ್ಮ ಸಿನಿಮಾ ಖುಷಿ ಸೆಪ್ಟೆಂಬರ್ 1ಕ್ಕೆ ಬಿಡುಗಡೆಯಾಗಲಿದೆ. ಎಲ್ಲರೂ ನೋಡಬೇಕು, ನಿಮಗೆ ಖುಷಿಯಾಗುತ್ತದೆ ಅಂತ ತಮಿಳಿನಲ್ಲಿ ಸಿನಿ ಪ್ರೇಕ್ಷಕರಿಗೆ ರೌಡಿ ಬೇಬಿ ಮನವಿ ಮಾಡಿದರು.
ಇದನ್ನೂ ಓದಿ:ಯೋಗಿ ಜೀ ಕಾಲಿಗೆ ಬಿದ್ದಿದ್ದಕ್ಕೆ ಟ್ರೋಲ್..! ಮುಟ್ಟಿನೋಡಿಕೊಳ್ಳುವಂತೆ ಉತ್ತರಿಸಿದ ತಲೈವಾ
ಈ ಚಿತ್ರದಲ್ಲಿ ನಾಯಕ ಮಣಿರತ್ನಂ ಅಭಿಮಾನಿಯಾಗಿದ್ದು, ಚಿತ್ರದಲ್ಲಿ ಮಾತ್ರವಲ್ಲ, ನಮ್ಮ ಚಿತ್ರದ ನಿರ್ದೇಶಕರೂ ಮಣಿರತ್ನಂ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ. ಅಲ್ಲದೆ, ನನಗೆ ತಮಿಳಿನ ಅನೇಕ ನಟರು, ನಿರ್ದೇಶಕರು ಇಷ್ಟ. ತಮಿಳುನಾಡಿನಿಂದ ಯಾರನ್ನಾದರೂ ಕಿಡ್ನಾಪ್ ಮಾಡಬೇಕಾದರೆ ಸಂಗೀತ ಸಂಯೋಜಕ ಅನಿರುದ್ಧ್ ಅವರನ್ನು ಖಂಡಿತಾ ಕಿಡ್ನಾಪ್ ಮಾಡುತ್ತೇನೆ ಅಂತ ತಮಾಷೆ ಮಾಡಿದರು.
ಶಿವ ನಿರ್ವಾಣ ನಿರ್ದೇಶನದ ಖುಷಿ ಚಿತ್ರ ಲವ್ ಸ್ಟೋರಿ ಆಧಾರಿತವಾಗಿದ್ದು, ವಿಜಯ್ ದೇವರಕೊಂಡ ಸಮಂತಾ ನಟಿಸಿದ್ದಾರೆ. ಜಯರಾಮ್, ಸಚಿನ್ ಕೇತಕರ್, ಮುರಳಿ ಶರ್ಮಾ, ಲಕ್ಷ್ಮಿ, ರೋಹಿಣಿ, ಶರಣ್ಯ ಪ್ರದೀಪ್ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.