ವಿಜಯ್, ರಜನಿಕಾಂತ್, ಪ್ರಭಾಸ್ ಮೂವರು ಅಲ್ಲ.. ದಕ್ಷಿಣ ಭಾರತದ ಶ್ರೀಮಂತ ಸೂಪರ್ ಸ್ಟಾರ್ ಈತ
Richest superstar of South: ಸೌತ್ ಸೂಪರ್ ಸ್ಟಾರ್ಗಳ ಕುರಿತಾದ ಮಾಹಿತಿಗಳು ಇತ್ತೀಚೆಗೆ ಸೋಷಿಯಲ್ ಮಿಡಿಯಾದ ತುಂಬೆಲ್ಲ ಹರಿದಾಡುತ್ತಿವೆ.. ಅದೇ ರೀತಿ ಇದೀಗ ದಕ್ಷಿಣ ಭಾರತದ ಶ್ರೀಮಂತ ಸೂಪರ್ ಸ್ಟಾರ್ ಬಗ್ಗೆ ಸುದ್ದಿಯೊಂದು ವೈರಲ್ ಆಗಿದೆ..
Nagarjun: ದಕ್ಷಿಣ ಭಾರತದ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ಗೂ ಅಚ್ಚರಿ ಮೂಡಿಸುವಷ್ಟು ಯಶಸ್ಸನ್ನು ಗಳಿಸಿವೆ. ಇದು ನಾಯಕ ನಟರ ಸಂಭಾವನೆಯಲ್ಲಿ ಭಾರಿ ಹೆಚ್ಚಳಕ್ಕೆ ಕಾರಣವಾಗಿದೆ. ಈಗಲೂ ಯಶಸ್ವಿಯಾಗಿರುವ ಹಿರಿಯ ಸೂಪರ್‌ಸ್ಟಾರ್‌ಗಳ ಬ್ರ್ಯಾಂಡ್ ಮೌಲ್ಯವು ದೊಡ್ಡದಾಗಿದೆ. ಅವರಲ್ಲಿ ಹಲವರು ಚಲನಚಿತ್ರಗಳಲ್ಲಿ ನಟಿಸುವುದರಿಂದ ಪಡೆಯುವ ಸಂಭಾವನೆಯ ಹೊರತಾಗಿ ಬಹು ಆದಾಯದ ಮೂಲಗಳನ್ನು ಹೊಂದಿದ್ದಾರೆ.
ಪ್ರಸ್ತುತ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾದ ವಿಜಯ್, ರಜನಿಕಾಂತ್, ಪ್ರಭಾಸ್ ಅಥವಾ ಕಮಲ್ ಹಾಸನ್ ಆಸ್ತಿಯ ವಿಷಯದಲ್ಲಿ ಮೊದಲ ಸ್ಥಾನದಲ್ಲಿಲ್ಲ.
ಇದನ್ನೂ ಓದಿ-ಪದ್ಮಶ್ರೀ ಪುರಸ್ಕೃತ ನಟಿಗೆ ಅವಮಾನ..13 ಚಿತ್ರಗಳಿಂದ ಆಕೆಯನ್ನು ತೆಗೆದು ಹಾಕಿದ್ದು ಯಾಕೆ ಗೊತ್ತಾ?
ಹೌದು ಕೆಲವು ವರದಿಗಳ ವರದಿಯ ಪ್ರಕಾರ, ಅಕ್ಕಿನೇನಿ ನಾಗಾರ್ಜುನ ದಕ್ಷಿಣ ಭಾರತದ ಶ್ರೀಮಂತ ನಟ. ನಾಗಾರ್ಜುನ ಅವರು 1986 ರಲ್ಲಿ ವಿಕ್ರಮ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮೂರೂವರೆ ದಶಕಗಳ ವೃತ್ತಿಜೀವನದಲ್ಲಿ ಅವರು 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಟಿಸಿದ ಚಿತ್ರಗಳ ಗಾತ್ರಕ್ಕೆ ಅನುಗುಣವಾಗಿ ಪ್ರಸ್ತುತ 9 ರಿಂದ 20 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ..
ಅವರು ಅನ್ನಪೂರ್ಣ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಚಲನಚಿತ್ರ ನಿರ್ಮಾಪಕರೂ ಆಗಿದ್ದಾರೆ. ರಿಯಲ್ ಎಸ್ಟೇಟ್ ನಲ್ಲಿ ಸಾಕಷ್ಟು ಹೂಡಿಕೆ ಮಾಡಿರುವ ನಾಗಾರ್ಜುನ, ಒಂದು ಕಾಲದಲ್ಲಿ ಐಎಸ್ ಎಲ್ ನಲ್ಲಿ ಕೇರಳ ಕ್ಲಬ್ ಆಗಿದ್ದ ಕೇರಳ ಬ್ಲಾಸ್ಟರ್ಸ್ ನಲ್ಲೂ ಹೂಡಿಕೆ ಮಾಡಿದ್ದರು.
ಅವರು ಹೈದರಾಬಾದ್‌ನಲ್ಲಿ ದೊಡ್ಡ ಕನ್ವೆನ್ಷನ್ ಸೆಂಟರ್ ಅನ್ನು ಹೊಂದಿದ್ದಾರೆ ಮತ್ತು ಅನೇಕ ಬ್ರಾಂಡ್‌ಗಳ ರಾಯಭಾರಿಯಾಗಿದ್ದಾರೆ. ಐಷಾರಾಮಿ ಜೀವನ ನಡೆಸುತ್ತಿರುವ ನಾಗಾರ್ಜುನ ಅವರ ಹತ್ತಿರ ಐಷಾರಾಮಿ ಕಾರುಗಳ ದೊಡ್ಡ ಸಂಗ್ರಹವಿದೆ. ಹೈದರಾಬಾದ್‌ನಲ್ಲಿರುವ ಅವರ ಬಂಗಲೆಯ ಬೆಲೆ 45 ಕೋಟಿ. ಕೋಟ್ಯಂತರ ಮೌಲ್ಯದ ಖಾಸಗಿ ಜೆಟ್ ಕೂಡ ಇವರು ಹೊಂದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.