Thalapathy Vijay Remuneration: ನಟ ವಿಜಯ್ ಅವರನ್ನು ಅವರ ಅಭಿಮಾನಿಗಳು ಪ್ರೀತಿಯಿಂದ 'ದಳಪತಿ' ಎಂದು ಕರೆಯುತ್ತಾರೆ. ನಟ ದಳಪತಿ ವಿಜಯ್ ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಪ್ರಮುಖ ತಾರೆಗಳಲ್ಲಿ ಒಬ್ಬರು. ಅವರ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗುತ್ತಿವೆ. ನಟ ವಿಜಯ್ ಸದ್ಯ ಚಿತ್ರರಂಗದಲ್ಲಿ ಸ್ಟಾರ್‌ ನಟನಾಗಿದ್ದಾರೆ. ಇದೀಗ ‘ದಳಪತಿ 69’ ಚಿತ್ರಕ್ಕೆ ನಟ ವಿಜಯ್ ಪಡೆಯಲಿರುವ ಸಂಭಾವನೆ ಎಷ್ಟು ಎಂಬ ಮಾಹಿತಿ ಹೊರಬಿದ್ದಿದೆ. 


COMMERCIAL BREAK
SCROLL TO CONTINUE READING

ಇದುವರೆಗೂ ತಮಿಳು ಚಿತ್ರರಂಗದ ನಾಯಕ ನಟನಾಗಿ ಖ್ಯಾತಿ ಪಡೆದಿದ್ದ ನಟ ವಿಜಯ್ ಸಿನಿಪಯಣ ಸದ್ಯದಲ್ಲೇ ಮುಗಿಯಲಿದೆ. ಕಾರಣ ವಿಜಯ್ ಅವರು ರಾಜಕೀಯ ಪಕ್ಷವನ್ನು ಆರಂಭಿಸಿದ್ದಾರೆ. ಕೆಲವು ದಿನಗಳ ಹಿಂದೆ (ಫೆಬ್ರವರಿ 2) ನಟ ವಿಜಯ್ ತಮ್ಮ ರಾಜಕೀಯ ಪಕ್ಷವನ್ನು ಚುನಾವಣಾ ಆಯೋಗದಲ್ಲಿ ನೋಂದಾಯಿಸಲು ದೆಹಲಿಗೆ ಹೋಗಿದ್ದರು ಮತ್ತು ತಮ್ಮ ರಾಜಕೀಯ ಪಕ್ಷವನ್ನು ಪರಿಚಯಿಸಿದರು. ಇದಕ್ಕೆ ಜನ ಮತ್ತು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಿಜಯ್ ಅವರ ರಾಜಕೀಯ ಪ್ರವೇಶಕ್ಕೆ ರಾಜಕೀಯ ಪಕ್ಷದ ಮುಖಂಡರು ಮತ್ತು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.


ಇದನ್ನೂ ಓದಿ: Sandalwood Actor: ಕೋಟಿ ಸಂಭಾವನೆ ಪಡೆದ ಕನ್ನಡದ ಮೊದಲ ಹೀರೋ ಇವರು..! 


ಈ ನಡುವೆ ನಟ ವಿಜಯ್ ಸದ್ಯ ವೆಂಕಟ್ ಪ್ರಭುವಿನ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಪಾಂಡಿಚೇರಿಯಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಈ ಚಿತ್ರದ ಡಿಜಿಟಲ್ ಹಕ್ಕುಗಳು ರೂ. 125 ಕೋಟಿಗೆ ಮಾರಾಟವಾಗಿದೆ ಎನ್ನಲಾಗಿದೆ. ಅದೂ ಅಲ್ಲದೆ ಹಿಂದಿ ವರ್ಷನ್ 25 ಕೋಟಿವರೆಗೂ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಈ ಸಿನಿಮಾ ಮುಗಿದ ನಂತರ ರಾಜಕೀಯಕ್ಕೆ ಎಂಟ್ರಿ ಕೊಡಲು ಕಾಯುತ್ತಿರುವ ವಿಜಯ್ ಅವರು ದಳಪತಿ 69 ಚಿತ್ರದ ಮೂಲಕ ತಮ್ಮ ಸಿನಿಮಾ ವೃತ್ತಿ ಜೀವನಕ್ಕೆ ಅಂತ್ಯ ಹಾಡುವುದಾಗಿ ಘೋಷಿಸಿದ್ದಾರೆ.


ಇತ್ತೀಚೆಗೆ ಕಾರ್ತಿಕ್ ಸುಬ್ಬರಾಜ್ ದಳಪತಿ 69 ಅನ್ನು ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗಿತ್ತು, ನಂತರ ನಿರ್ದೇಶಕ ವಿನೋದ್ ದಳಪತಿ 69 ಅನ್ನು ನಿರ್ದೇಶಿಸುತ್ತಾರೆ ಎಂಬ ವರದಿಗಳು ಬಂದವು, ಆದರೆ ನಿರ್ದೇಶಕರು ಯಾರು ಎಂಬ ಅಧಿಕೃತ ಪ್ರಕಟಣೆ ಇನ್ನೂ ಬಿಡುಗಡೆಯಾಗಿಲ್ಲ. ಆದರೆ ನಿರ್ದೇಶಕರು ಯಾರೇ ಆಗಲಿ ಡಿವಿವಿ ಚಿತ್ರವನ್ನು ನಿರ್ಮಿಸಲಿದ್ದಾರೆ. ಕಂಪನಿಯು ಈಗ ವಿಜಯ್ ಅವರ ದಳಪತಿ 69 ಅನ್ನು ನಿರ್ಮಿಸುವುದು ಖಚಿತವಾಗಿದೆ.


ಈ ವೇಳೆ GOAT ಚಿತ್ರದಲ್ಲಿ ನಟಿಸಿ ಸದ್ಯ 200 ಕೋಟಿ ಸಂಭಾವನೆ ಪಡೆಯುತ್ತಿರುವ ವಿಜಯ್ ದಳಪತಿ 69 ಸಂಭಾವನೆ ಎಷ್ಟು ಎಂಬ ಮಾಹಿತಿ ವೈರಲ್‌ ಆಗುತ್ತಿದೆ. ಅದರಂತೆ ಈಗ ದಳಪತಿ 69ಕ್ಕೆ ವಿಜಯ್ 250 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರಕ್ಕಾಗಿ ವಿಜಯ್ 250 ಕೋಟಿ ಪಡೆದರೆ, ಅವರು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುತ್ತಾರೆ. 


ಇದನ್ನೂ ಓದಿ: Sai Pallavi: ರಾಮಾಯಣ ಸಿನಿಮಾದಿಂದ ಸಾಯಿ ಪಲ್ಲವಿ ಔಟ್? ಸೀತೆಯಾಗಿ ಶ್ರೀದೇವಿ ಪುತ್ರಿ!? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.