Vikrant Rona Box Office Collection : 'ವಿಕ್ರಾಂತ್‌ ರೋಣ' ರಿಲೀಸ್‌ ಆಗಿ ಇನ್ನೇನು 1 ತಿಂಗಳು ಕಂಪ್ಲೀಟ್ ಆಗಲಿದೆ. ಆದರೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಸಿನಿಮಾ ಹವಾ ಒಂಚೂರು ಕಡಿಮೆ ಆಗಿಲ್ಲ. ಎಲ್ಲೆಲ್ಲೂ ಅಬ್ಬರಿಸುತ್ತಿರುವ 'ವಿಕ್ರಾಂತ್‌ ರೋಣ' ₹200 ಕೋಟಿ ಕ್ಲಬ್‌ ಸೇರಿದೆ. ಈ ಮೂಲಕ ₹200 ಕೋಟಿ ಕ್ಲಬ್‌ ಸೇರಿದ ಕನ್ನಡ ಸಿನಿಮಾ ಇಂಡಸ್ಟ್ರಿಯ 2ನೇ ಸಿನಿಮಾ ಎಂಬ ಹೆಗ್ಗಳಿಕೆಗೂ 'ವಿಕ್ರಾಂತ್‌ ರೋಣ'  ಪಾತ್ರವಾಗಿದೆ. ಅಷ್ಟಕ್ಕೂ 'ವಿಕ್ರಾಂತ್‌ ರೋಣ' ಸಿನಿಮಾ ಈವರೆಗೂ ಕಲೆಕ್ಷನ್‌ ಮಾಡಿರುವ ಒಟ್ಟು ಮೊತ್ತ ಎಷ್ಟು ಅನ್ನೋ ಡೀಟೇಲ್ಸ್‌ ಮುಂದಿದೆ ಓದಿ.


COMMERCIAL BREAK
SCROLL TO CONTINUE READING

ಕನ್ನಡ ಸಿನಿಮಾಗಳ ತಾಕತ್ತು ಇಡೀ ಜಗತ್ತಿಗೇ ಗೊತ್ತಾಗಿದೆ. ಹೀಗಾಗಿ ಕನ್ನಡದ ಸಿನಿಮಾಗಳು ಸಪ್ತಸಾಗರ ದಾಟಿವೆ, ಎಲ್ಲೆಲ್ಲೂ ಕನ್ನಡದ ಕಂಪು ಹರಿಸುತ್ತಿವೆ ಸ್ಯಾಂಡಲ್‌ವುಡ್‌ ಸಿನಿಮಾಗಳು. ಇದೇ ರೀತಿ ಕನ್ನಡಿಗ ಕಿಚ್ಚ ಸುದೀಪ್‌ ಅವರ 'ವಿಕ್ರಾಂತ್‌ ರೋಣ' ಕೂಡ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಈಗಾಗಲೇ ಬಾಕ್ಸ್‌ ಆಫಿಸ್‌ನಲ್ಲಿ ₹210 ಕೋಟಿ ಕಲೆಕ್ಷನ್‌ ಮಾಡಿರುವ ಈ ಚಿತ್ರ ₹250 ಕೋಟಿ ಕ್ಲಬ್‌ ಸೇರಲು ದಾಪುಗಾಲು ಇಡುತ್ತಿದೆ.


ಇದನ್ನೂ ಓದಿ : Taapsee Pannu : ತಾಪ್ಸಿ ಪನ್ನುಗೆ ಇದು ಬೇಕಿತ್ತಾ : ಪ್ರೇಕ್ಷಕರಿಗೆ ಚಾಲೆಂಜ್‌ ಹಾಕಿದಕ್ಕೆ ಸಿನಿಮಾ ತೋಪು!


ಈಗಲೂ ಹವಾ..!


ಈಗಾಗಲೇ ₹200 ಕೋಟಿ ಗಡಿ ದಾಟಿ ಹೊಸ ಇತಿಹಾಸ ಬರೆದಿರುವ ನಟ ಸುದೀಪ್‌ ಅವರ ಸಿನಿಮಾ, ಇದೀಗ ಜಗತ್ತಿನ ಮೂಲೆ ಮೂಲೆಯಲ್ಲೂ ಸದ್ದು ಮಾಡ್ತಿದೆ. ಈಗಾಗಲೇ ಹಾಲಿವುಡ್‌ ಅಂಗಳಕ್ಕೆ ಎಂಟ್ರಿಯಾದ ಮೊಟ್ಟಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಯನ್ನ 'ವಿಕ್ರಾಂತ್‌ ರೋಣ' ಪಡೆದಿದ್ದು, ಕೋಟಿ ಕೋಟಿ ಭಾರತೀಯರು ಹಾಗೂ ಜಗತ್ತಿನಾದ್ಯಂತ ಇರುವ ಕಿಚ್ಚ ಸುದೀಪ್‌ ಅವರ ಅಭಿಮಾನಿಗಳು ಸಿನಿಮಾ ಕಣ್ತುಂಬಿಕೊಂಡಿದ್ದಾರೆ. ಇನ್ನು ಸಿನಿಮಾ ರಿಲೀಸ್‌ ಆಗಿ 1 ತಿಂಗಳು ಕಂಪ್ಲೀಟ್‌ ಆಗುತ್ತಾ ಬಂದ್ರು 'ವಿಕ್ರಾಂತ್‌ ರೋಣ' ಹವಾ ಕಡಿಮೆ ಆಗಿಲ್ಲ.


₹300 ಕೋಟಿ ಕ್ಲಬ್‌..?


ಸ್ಯಾಂಡಲ್‌ವುಡ್‌ ಸಿನಿಮಾಗಳ ಗತ್ತು ಏನೆಂದು ಜಗತ್ತಿಗೇ ಗೊತ್ತು. ಅದರಲ್ಲೂ ಕನ್ನಡ ಸಿನಿಮಾ ರಂಗದ ಪಾಲಿಗೆ ಕಿಚ್ಚ ಸುದೀಪ್‌ 'ವಿಕ್ರಾಂತ್‌ ರೋಣ' ಸಖತ್‌ ಸ್ಪೆಷಲ್.‌ ಯಾಕಂದ್ರೆ ಕನ್ನಡಿಗರ ಸಿನಿಮಾ ಇದೇ ಮೊದಲ ಬಾರಿ ಹಾಲಿವುಡ್‌ಗೆ ಎಂಟ್ರಿ ಕೊಟ್ಟು, ಅದ್ಧೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಎಲ್ಲೆಲ್ಲೂ ಅಬ್ಬರ ತೋರುತ್ತಿರುವ ಕಿಚ್ಚ ಸುದೀಪ್‌ 'ವಿಕ್ರಾಂತ್‌ ರೋಣ' ಭರ್ಜರಿ ಕಲೆಕ್ಷನ್‌ ಕೂಡ ಮಾಡಿದೆ. ಅದರಲ್ಲೂ ರಿಲೀಸ್‌ ಆದ 27ನೇ ದಿನವೂ 'ವಿಕ್ರಾಂತ್‌ ರೋಣ'ನ ಅಬ್ಬರ ಇನ್ನೂ ಹಾಗೇ ಇದೆ. ₹200 ಕೋಟಿ ಕ್ಲಬ್‌ ಸೇರಿ ಹೊಸ ದಾಖಲೆ ಬರೆದಿದೆ ಕನ್ನಡಿಗರ 'ವಿಕ್ರಾಂತ್‌ ರೋಣ' ಸಿನಿಮಾ.‌ ಅಲ್ಲದೆ ₹300 ಕೋಟಿ ಕ್ಲಬ್‌ ಸೇರುವ ನಿರೀಕ್ಷೆಯನ್ನೂ ಹುಟ್ಟುಹಾಕಿದೆ.


ಇದನ್ನೂ ಓದಿ : ಹೊಸ ಲುಕ್‌ನಲ್ಲಿ ‘ಅವತಾರ್-1’ ಜಗತ್ತಿನಾದ್ಯಂತ ಗ್ರ್ಯಾಂಡ್ ರೀ ಎಂಟ್ರಿ: ಕಾರಣ ಗೊತ್ತಾ..?


ಬಾಲಿವುಡ್‌ ಸಿನಿಮಾಗಳಿಗೆ ದಕ್ಷಿಣ ಭಾರತದ ಚಿತ್ರಗಳು ಅದರಲ್ಲೂ ಕನ್ನಡದ ಸಿನಿಮಾಗಳು ಸೆಡ್ಡು ಹೊಡೆಯುತ್ತಿವೆ. ಈಗಾಗಲೇ ಸಾಲುಸಾಲು ಸೋಲಿನಿಂದ  ಕಂಗೆಟ್ಟ ಬಾಲಿವುಡ್‌ ವಿಕ್ರಾಂತ್‌ ರೋಣ ಎದುರು ಯಾವುದೇ ಬಿಗ್‌ ಬಜೆಟ್‌ ಸಿನಿಮಾ ರಿಲೀಸ್‌ ಮಾಡಲಿಲ್ಲ. ಈ ಮೂಲಕ ಬಾಲಿವುಡ್‌ನ ಹಲವು ಸ್ಟಾರ್ಸ್‌ ಬಚಾವ್‌ ಆಗಿದ್ದಾರೆ. ಹಲವು ದಿನಗಳ ಕಾಲ ಕನ್ನಡಿಗರ 'ವಿಕ್ರಾಂತ್‌ ರೋಣ' ಇದೇ ರೀತಿ ಭರ್ಜರಿ ಕಲೆಕ್ಷನ್‌ ಮಾಡುವ ಲಕ್ಷಣಗಳಿದ್ದು, ಈ ಪರಿಸ್ಥಿತಿ ಬಾಲಿವುಡ್‌ಗೆ ನಡುಕ ತರಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.