Vikrant Rona Collection: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಇಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. 3200 ಸ್ಕ್ರೀನ್‌ಗಳಲ್ಲಿ ತೆರೆ ಕಂಡಿದೆ. ಎಲ್ಲೆಡೆಯಿಂದ ಭರ್ಜರಿ ರಿಸ್ಪಾನ್ಸ್‌ ಬರುತ್ತಿದೆ. ಹಾಗಾದರೆ ಕಿಚ್ಚ ಸುದೀಪ್ ಸಿನಿಮಾ ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಹಿಂದಿಯಲ್ಲಿ ಈಗಾಗಲೇ 70 ಲಕ್ಷ ರೂಪಾಯಿಯಷ್ಟು ಟಿಕೆಟ್ ಸೋಲ್ಡ್‌ಔಟ್, ಕನ್ನಡದ ಬಹುತೇಕ ಶೋಗಳು ಹೌಸ್‌ಫುಲ್‌ ಆಗಿವೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕಿಚ್ಚ ಸುದೀಪ್‌ಗಾಗಿ ಸ್ಪೆಷಲ್‌ ಜಾಕೆಟ್‌ ತಂದ ಅಭಿಮಾನಿ..! ಯಾಕೆ ಗೊತ್ತಾ..?


ಹಿಂದಿಯಲ್ಲಿ ಸಲ್ಮಾನ್ ಖಾನ್ ವಿಕ್ರಾಂತ್‌ ರೋಣ ಸಿನಿಮಾ ವಿತರಣೆ ಹಕ್ಕು ಪಡೆದಿದ್ದಾರೆ. ತೆಲುಗು, ತಮಿಳು ಭಾಷೆಯಲ್ಲಿಯೂ ಕೂಡ ಈ ಚಿತ್ರ ಉತ್ತಮ ಓಪನಿಂಗ್‌ ಪಡೆದಿದೆ. ಸಿನಿಮಾದ ಮೊದಲ ವಿಮರ್ಶೆ ಬರುತ್ತಿದ್ದಂತೆ ಕೇರಳದಲ್ಲಿ ಶೋಗಳು ಬುಕ್‌ ಆಗಲು ಆರಂಭಿಸಿವೆ.


ವಿಕ್ರಾಂತ್‌ ರೋಣ ಮೊದಲ ದಿನ ಭಾರತದಲ್ಲಿ 40 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಕಿಚ್ಚ ಸುದೀಪ್‌ ಸಿನಿಮಾಗೆ ಫ್ಯಾಮಿಲಿ ವೀಕ್ಷಕರ ಸಂಖ್ಯೆ ಸಹ ಹೆಚ್ಚಾಗಿದೆ. ಇದೇ ಕಾರಣಕ್ಕೆ ಮಲ್ಟಿಫ್ಲೆಕ್ಸ್‌ನಲ್ಲಿ ಸಿನಿಮಾ ನೋಡುವವರು ಹೆಚ್ಚಾಗಿದ್ದಾರೆ. 


ವಿಕ್ರಾಂತ್​ ರೋಣ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಸುದೀಪ್‌, ಜಾಕ್ವೆಲಿನ್‌ ಫರ್ನಾಂಡೀಸ್‌, ನಿರೂಪ್​ ಭಂಡಾರಿ, ನೀತಾ ಅಶೋಕ್ ನಟಿಸಿದ್ದು ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿದೆ. ಶಾಲಿನಿ ಆರ್ಟ್ಸ್ ಬ್ಯಾನರ್​ ಅಡಿ ಜಾಕ್​ ಮಂಜು ಚಿತ್ರ ನಿರ್ಮಾಣ ಮಾಡಿದ್ದು, ಅಲಂಕಾರ್​ ಪಾಂಡಿಯನ್​ ಸಹ-ನಿರ್ಮಾಪಕರಾಗಿದ್ದಾರೆ. 


ಇದನ್ನೂ ಓದಿ: ವಿಕ್ರಾಂತ್ ರೋಣ : ಸಂಸದರು, ಉನ್ನತ ಅಧಿಕಾರಿಗಳಿಗಾಗಿ ದೆಹಲಿಯಲ್ಲಿ ಪ್ರೀಮಿಯರ್ ಶೋ


ಬಾಲಿವುಡ್‌, ಟಾಲಿವುಡ್‌ ಸೇರಿದಂತೆ ಭಾರತ ಸಿನಿರಂಗದ ಖ್ಯಾತನಾಮರು ವಿಕ್ರಾಂತ್‌ ರೋಣನಿಗೆ ಸಾಥ್‌ ನೀಡಿದ್ದಾರೆ. ಅನೂಪ್‌ ಭಂಡಾರಿ ನಿರ್ದೇಶನದ ಈ ಸಿನಿಮಾ ಮೂಲಕ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಡುತ್ತಿದ್ದಾರೆ. ರಕೇಲ್‌ ಡಿಕೋಸ್ಟ ಉರ್ಫ್‌ ಗಡಂಗ್‌ ರಕ್ಕಮ್ಮನಾಗಿ ತೆರೆ ಮೇಲೆ ಅವರು ಕಾಣಿಸಿಕೊಂಡಿದ್ದಾರೆ. ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಸುದೀಪ್‌ ಅವರೇ ಡಬ್‌ ಮಾಡಿದ್ದಾರೆ. ಇಷ್ಟೆಲ್ಲ ವಿಶೇಷತೆ ಹೊಂದಿರುವ ಈ ಸಿನಿಮಾ ಸದ್ಯ ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.