'ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಂದ್ರೆ ಸುಮ್ಮನೇನಾ..? ನೋ ವೇ ಚಾನ್ಸೇ ಇಲ್ಲ.' ಹೀಗೆ ಕಿಚ್ಚ ಸುದೀಪ್‌ ಅಭಿಮಾನಿಗಳು ಕಾಲರ್‌ ಮೇಲೆತ್ತಿ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಯಾಕಂದ್ರೆ ಸುದೀಪ್‌ ಅವರ ಬಹುನಿರೀಕ್ಷಿತ 'ವಿಕ್ರಾಂತ್‌ ರೋಣ' ಅಧಿಕೃತವಾಗಿ ₹200 ಕೋಟಿ ಕ್ಲಬ್‌ಗೆ ಸೇರ್ಪಡೆಯಾಗಿದೆ. ಈ ಕುರಿತು ಜಗತ್ತಿನ ಅತಿದೊಡ್ಡ ಓಟಿಟಿ ಪ್ಲಾಟ್‌ಫಾರಂ 'ZEE5' ಸಂಸ್ಥೆ ಅಧಿಕೃತ ಘೋಷಣೆ ಮೊಳಗಿಸಿದೆ.


COMMERCIAL BREAK
SCROLL TO CONTINUE READING

'ವಿಕ್ರಾಂತ್‌ ರೋಣ' ರಿಲೀಸ್‌ ಆಗಿ ಇನ್ನೇನು 1 ತಿಂಗಳು ಕಂಪ್ಲೀಟ್ ಆಗುತ್ತಿರುವ ಹೊತ್ತಲ್ಲೇ ಕೋಟಿ ಕೋಟಿ ಕನ್ನಡಿಗರಿಗೆ ಸಿಹಿಸುದ್ದಿ ಸಿಕ್ಕಿದೆ. ಸೆ.2ರ ಶುಕ್ರವಾರ ಕಿಚ್ಚ ಸುದೀಪ್ 49ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ಶುಭ ಸಂದರ್ಭದಲ್ಲಿ‌ ZEE5 ಕಿಚ್ಚ ಸುದೀಪ್ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದೆ.‌ ಸೆಪ್ಟೆಂಬರ್ 2ರಿಂದಲೇ ZEE5ನಲ್ಲಿ ‘ವಿಕ್ರಾಂತ್ ರೋಣ’ ಸ್ಟ್ರೀಮಿಂಗ್ ಆಗಲಿದೆ. ಸಾವಿರಾರು ಬಿಗ್ ಸ್ಕ್ರೀನ್‌ನಲ್ಲಿ 3D ‘ವಿಕ್ರಾಂತ್ ರೋಣ’ ಕಣ್ತುಂಬಿಕೊಂಡಿದ್ದ ಅಭಿಮಾನಿಗಳಿಗೆ ಇದೀಗ ಮತ್ತೊಂದು ಗ್ರೇಟ್‌ ನ್ಯೂಸ್‌ ಸಿಕ್ಕಿದೆ. ಇದೇ ಪ್ರೋಮೋದಲ್ಲಿ  'ZEE5' ಸಂಸ್ಥೆ 'ವಿಕ್ರಾಂತ್‌ ರೋಣ' ಗಳಿಸಿರುವ ಒಟ್ಟು ಮೊತ್ತ ಎಷ್ಟೆಂಬ ವಿಚಾರನ್ನು ಸ್ಪಷ್ಟಪಡಿಸಿದೆ.


Jammu Kashmir : ಕಾಶ್ಮೀರದಲ್ಲಿ ಸೆರೆ ಸಿಕ್ಕ ಉಗ್ರ.. ಪಾಕ್ ಸೇನೆಯ ಹಸ್ತಕ್ಷೇಪಕ್ಕೆ ಕೊಟ್ಟ ಸಾಕ್ಷ್ಯ


₹200 ಕೋಟಿ ಕ್ಲಬ್‌: 
ಕನ್ನಡ ಸಿನಿಮಾಗಳ ತಾಕತ್ತು ಇಡೀ ಜಗತ್ತಿಗೇ ಗೊತ್ತಾಗಿದೆ. ಹೀಗಾಗಿ ಕನ್ನಡದ ಸಿನಿಮಾಗಳು ಸಪ್ತಸಾಗರ ದಾಟಿವೆ, ಎಲ್ಲೆಲ್ಲೂ ಕನ್ನಡದ ಕಂಪು ಹರಿಸುತ್ತಿವೆ ಸ್ಯಾಂಡಲ್‌ವುಡ್‌ ಸಿನಿಮಾಗಳು. ಇದೇ ರೀತಿ ಕನ್ನಡಿಗ ಕಿಚ್ಚ ಸುದೀಪ್‌ ಅವರ 'ವಿಕ್ರಾಂತ್‌ ರೋಣ' ಕೂಡ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಈಗಾಗಲೇ ಬಾಕ್ಸ್‌ ಆಫಿಸ್‌ನಲ್ಲಿ ₹210 ಕೋಟಿ ಕಲೆಕ್ಷನ್‌ ಮಾಡಿರುವ ಈ ಚಿತ್ರ ₹250 ಕೋಟಿ ಕ್ಲಬ್‌ ಸೇರಲು ದಾಪುಗಾಲು ಇಡುತ್ತಿದೆ.


ಈಗಲೂ ಹವಾ..!


ಈಗಾಗಲೇ ₹200 ಕೋಟಿ ಗಡಿ ದಾಟಿ ಹೊಸ ಇತಿಹಾಸ ಬರೆದಿರುವ ನಟ ಸುದೀಪ್‌ ಅವರ ಸಿನಿಮಾ, ಇದೀಗ ಜಗತ್ತಿನ ಮೂಲೆ ಮೂಲೆಯಲ್ಲೂ ಸದ್ದು ಮಾಡ್ತಿದೆ. ಈಗಾಗಲೇ ಹಾಲಿವುಡ್‌ ಅಂಗಳಕ್ಕೆ ಎಂಟ್ರಿಯಾದ ಮೊಟ್ಟಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಯನ್ನ 'ವಿಕ್ರಾಂತ್‌ ರೋಣ' ಪಡೆದಿದ್ದು, ಕೋಟಿ ಕೋಟಿ ಭಾರತೀಯರು ಹಾಗೂ ಜಗತ್ತಿನಾದ್ಯಂತ ಇರುವ ಕಿಚ್ಚ ಸುದೀಪ್‌ ಅವರ ಅಭಿಮಾನಿಗಳು ಸಿನಿಮಾ ಕಣ್ತುಂಬಿಕೊಂಡಿದ್ದಾರೆ. ಇನ್ನು ಸಿನಿಮಾ ರಿಲೀಸ್‌ ಆಗಿ 1 ತಿಂಗಳು ಕಂಪ್ಲೀಟ್‌ ಆಗುತ್ತಾ ಬಂದ್ರು 'ವಿಕ್ರಾಂತ್‌ ರೋಣ' ಹವಾ ಕಡಿಮೆ ಆಗಿಲ್ಲ.


₹300 ಕೋಟಿ ಕ್ಲಬ್‌..?


ಸ್ಯಾಂಡಲ್‌ವುಡ್‌ ಸಿನಿಮಾಗಳ ಗತ್ತು ಏನೆಂದು ಜಗತ್ತಿಗೇ ಗೊತ್ತು. ಅದರಲ್ಲೂ ಕನ್ನಡ ಸಿನಿಮಾ ರಂಗದ ಪಾಲಿಗೆ ಕಿಚ್ಚ ಸುದೀಪ್‌ 'ವಿಕ್ರಾಂತ್‌ ರೋಣ' ಸಖತ್‌ ಸ್ಪೆಷಲ್.‌ ಯಾಕಂದ್ರೆ ಕನ್ನಡಿಗರ ಸಿನಿಮಾ ಇದೇ ಮೊದಲ ಬಾರಿ ಹಾಲಿವುಡ್‌ಗೆ ಎಂಟ್ರಿ ಕೊಟ್ಟು, ಅದ್ಧೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಎಲ್ಲೆಲ್ಲೂ ಅಬ್ಬರ ತೋರುತ್ತಿರುವ ಕಿಚ್ಚ ಸುದೀಪ್‌ 'ವಿಕ್ರಾಂತ್‌ ರೋಣ' ಭರ್ಜರಿ ಕಲೆಕ್ಷನ್‌ ಕೂಡ ಮಾಡಿದೆ. ಅದರಲ್ಲೂ ರಿಲೀಸ್‌ ಆದ 27ನೇ ದಿನವೂ 'ವಿಕ್ರಾಂತ್‌ ರೋಣ'ನ ಅಬ್ಬರ ಇನ್ನೂ ಹಾಗೇ ಇದೆ. ₹200 ಕೋಟಿ ಕ್ಲಬ್‌ ಸೇರಿ ಹೊಸ ದಾಖಲೆ ಬರೆದಿದೆ ಕನ್ನಡಿಗರ 'ವಿಕ್ರಾಂತ್‌ ರೋಣ' ಸಿನಿಮಾ.‌ ಅಲ್ಲದೆ ₹300 ಕೋಟಿ ಕ್ಲಬ್‌ ಸೇರುವ ನಿರೀಕ್ಷೆಯನ್ನೂ ಹುಟ್ಟುಹಾಕಿದೆ.


ಇದನ್ನೂ ಓದಿ: ಸಿದ್ದರಾಮೋತ್ಸವ ನಡೆಸಿದರೂ ರಾಜಕೀಯ ಅಲೆಮಾರಿಯಾಗಿರುವ ಸಿದ್ದರಾಮಯ್ಯ: ಸಂಸದ ಪ್ರಸಾದ್ ವ್ಯಂಗ್ಯ


'ವಿಕ್ರಾಂತ್‌ ರೋಣ' ಸಿನಿಮಾ ಸ್ಯಾಂಡಲ್‌ವುಡ್‌ ಸಿನಿಮಾಗಳನ್ನ ಹಾಲಿವುಡ್‌ಗೆ ಕರೆದೊಯ್ದಿದೆ. ಇದೇ ಮೊದಲ ಬಾರಿಗೆ ಹಾಲಿವುಡ್‌ಗೂ ಎಂಟ್ರಿ ಕೊಟ್ಟಿರುವ ಕನ್ನಡ ಸಿನಿಮಾ 'ವಿಕ್ರಾಂತ್‌ ರೋಣ' ಎಂಬ ಹೆಗ್ಗಳಿಕೆ ಸುದೀಪ್‌ ಅವರ ಚಿತ್ರಕ್ಕೆ ಸಿಕ್ಕಿದೆ. ಜೊತೆಗೆ ₹200 ಕೋಟಿ ಕ್ಲಬ್‌ ಸೇರುವ ಮೂಲಕ 'ವಿಕ್ರಾಂತ್‌ ರೋಣ' ಡಬಲ್‌ ಸಾಧನೆ ಮಾಡಿದೆ. ಹಾಗೇ ಸೆಪ್ಟೆಂಬರ್ 2ರಿಂದ ZEE5ನಲ್ಲಿ ‘ವಿಕ್ರಾಂತ್ ರೋಣ’ ಸ್ಟ್ರೀಮಿಂಗ್ ಆಗಲಿದ್ದು, ಎಲ್ಲರೂ ತಪ್ಪದೇ ವೀಕ್ಷಿಸಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.