ರಕ್ಷಿತ್ ಶೆಟ್ಟಿಯನ್ನ ನಟ ಕಿಚ್ಚ ಸುದೀಪ್ ಅಪ್ಪಿಕೊಂಡಿದ್ದು ಯಾಕೆ..?
‘ವಿಕ್ರಾಂತ್ ರೋಣ’ ಟ್ರೈಲರ್ ಬಿಡುಗಡೆಯ ವಿಶೇಷ ಕಾರ್ಯಕ್ರಮ ಹಲವು ವೈಶಿಷ್ಟ್ಯತೆಗಳಿಗೆ ಸಾಕ್ಷಿಯಾಯಿತು. ಅದರಲ್ಲೂ ಕಿಚ್ಚ ಸುದೀಪ್ ಹಾಗೂ ನಟ ರಕ್ಷಿತ್ ಶೆಟ್ಟಿ ನಡುವಿನ ಸ್ನೇಹ ಸಂಬಂಧವಂತೂ ಎಲ್ಲರ ಗಮನ ಸೆಳೆಯಿತು. ಅಷ್ಟಕ್ಕೂ ಕಾರ್ಯಕ್ರಮದಲ್ಲಿ ನಡೆದ ಆ ವಿಶೇಷ ಘಟನೆ ಏನು ಅನ್ನೋದನ್ನ ತಿಳಿಯಲು ಮುಂದೆ ಓದಿ.
ಬೆಂಗಳೂರು: ‘ವಿಕ್ರಾಂತ್ ರೋಣ’ ಟ್ರೈಲರ್ ಬಿಡುಗಡೆಯ ವಿಶೇಷ ಕಾರ್ಯಕ್ರಮ ಹಲವು ವೈಶಿಷ್ಟ್ಯತೆಗಳಿಗೆ ಸಾಕ್ಷಿಯಾಯಿತು. ಅದರಲ್ಲೂ ಕಿಚ್ಚ ಸುದೀಪ್ ಹಾಗೂ ನಟ ರಕ್ಷಿತ್ ಶೆಟ್ಟಿ ನಡುವಿನ ಸ್ನೇಹ ಸಂಬಂಧವಂತೂ ಎಲ್ಲರ ಗಮನ ಸೆಳೆಯಿತು. ಅಷ್ಟಕ್ಕೂ ಕಾರ್ಯಕ್ರಮದಲ್ಲಿ ನಡೆದ ಆ ವಿಶೇಷ ಘಟನೆ ಏನು ಅನ್ನೋದನ್ನ ತಿಳಿಯಲು ಮುಂದೆ ಓದಿ.
ಸ್ಯಾಂಡಲ್‌ವುಡ್ ಸೆಂಚ್ಯುರಿ ಸ್ಟಾರ್ ಶಿವಣ್ಣ, ಕ್ರೆಜಿಸ್ಟಾರ್ ವಿ.ರವಿಚಂದ್ರನ್, ಸೇರಿದಂತೆ ರಕ್ಷಿತ್ ಶೆಟ್ಟಿ, ರಿಷಬ್ ಹಾಗೂ ರಾಜ್ ಬಿ. ಶೆಟ್ಟಿ ಟ್ರೈಲರ್ ರಿಲೀಸ್ ಮಾಡಿದರು. ‘ವಿಕ್ರಾಂತ್ ರೋಣ’ ಟ್ರೈಲರ್ ರಿಲೀಸ್ ಮಾಡಿದ ಬಳಿಕ ಎಲ್ಲರೂ ಸ್ಟೇಜ್ ಮೇಲೆ ಒಬ್ಬೊಬ್ಬರಾಗಿ ಬಂದು ಮಾತನಾಡಿದರು. ನಟ ಕಿಚ್ಚ ಸುದೀಪ್ ಅವರ ಬಗ್ಗೆ ಮತ್ತು ‘ವಿಕ್ರಾಂತ್ ರೋಣ’ ಸಿನಿಮಾ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ಈ ಹೊತ್ತಲ್ಲೇ ಮಾತನಾಡಿದ ರಕ್ಷಿತ್ ಶೆಟ್ಟಿ ಅವರನ್ನ ನಟ ಕಿಚ್ಚ ಸುದೀಪ್ ಮಾತಿನ ಮಧ್ಯದಲ್ಲಿ ಎದ್ದು ಬಂದು ತಬ್ಬಿಕೊಂಡರು.
ಇದನ್ನೂ ಓದಿ : Maharashtra Political Crisis : ಉದ್ಧವ್ ಠಾಕ್ರೆ ಇಂದು ಸಂಜೆಯೊಳಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ!?
ರಕ್ಷಿತ್ ಭಾವುಕ..!
ಕಿಚ್ಚ ಸುದೀಪ್ ಅವರ ಬಗ್ಗೆ ಮತನಾಡಿದ ರಕ್ಷಿತ್ ಶೆಟ್ಟಿ, ಸುದೀಪ್ ಅವರ ಆಕ್ಟಿಂಗ್ ಹಾಗೂ ದೇಶಾದ್ಯಂತ ಅವರ ಸಿನಿಮಾಗಳು ಮಾಡಿದ ಸದ್ದನ್ನು ಸ್ಮರಿಸಿದ್ರು. ಇದೇ ವೇಳೆ ಕಿಚ್ಚ ಸುದೀಪ್ ಅವರ ಹೀರೋಯಿಸಮ್ ಕುರಿತು ಮನಸ್ಸು ತುಂಬಿ ಮಾತನಾಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಸುದೀಪ್ ಅವರ ಸಿನಿಮಾಗಳನ್ನ ನೋಡುತ್ತಾ ಬೆಳೆದವರು ನಾವು ಅನ್ನೋದನ್ನೂ ಸ್ಮರಿಸಿಕೊಂಡರು. ಆಗ ದಿಢೀರ್ ಎದ್ದು ಬಂದ ನಟ ಸುದೀಪ್ ಅವರು, ನಟ ರಕ್ಷಿತ್ ಶೆಟ್ಟಿ ಅವರನ್ನ ತಬ್ಬಿಕೊಂಡರು.
ಇದನ್ನೂ ಓದಿ : Maharashtra Political Crisis: ರಾಜಕೀಯ ಬಿಕ್ಕಟ್ಟಿನ ಮಧ್ಯೆ ಸಿಎಂ ಉದ್ಧವ್ ಠಾಕ್ರೆಗೆ ಕೋವಿಡ್ ದೃಢ
ಇದೇ ರೀತಿ ಹಲವು ವಿಶೇಷತೆಗಳಿಗೆ ‘ವಿಕ್ರಾಂತ್ ರೋಣ’ ಟ್ರೈಲರ್ ರಿಲೀಸ್ ಕಾರ್ಯಕ್ರಮ ಸಾಕ್ಷಿಯಾಯಿತು. ಇನ್ನೂ ಇದು ಶುರು ಮಾತ್ರ, ಕೆಲವೇ ದಿನಗಳಲ್ಲಿ ‘ವಿಕ್ರಾಂತ್ ರೋಣ’ ಜಗತ್ತಿನ ಸಾವಿರಾರು ಥಿಯೇಟರ್‌ಗಳಲ್ಲಿ, ಹಲವಾರು ಭಾಷೆಗಳಲ್ಲಿ ಗ್ರ್ಯಾಂಡ್ ರಿಲೀಸ್ ಕಾಣುತ್ತಿದೆ. ಈ ಮೂಲಕ ಕನ್ನಡಿಗರ ಸಿನಿಮಾ ವರ್ಲ್ಡ್ ಬಾಕ್ಸ್ ಆಫಿಸ್‌ನ ಅಲ್ಲಾಡಿಸಲಿದೆ. ಇದೆಲ್ಲವನ್ನೂ ಕಣ್ತುಂಬಿಕೊಳ್ಳಲು ಜುಲೈ 28ರವರೆಗೂ ಕಾಯಬೇಕಿದ್ದು, ಅಭಿಮಾನಿಗಳಿಗೆ ಹಬ್ಬದೂಟ ಗ್ಯಾರಂಟಿ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.