Vinay Gowda : ಅನು ಅಕ್ಕ ಅಳುವಂತೆ ಮಾಡಿದ ಟ್ರೋಲಿಗರಿಗೆ ಬಿಗ್ಬಾಸ್ ಆನೆ ವಿನಯ್ ವಾರ್ನಿಂಗ್..!
Anu akka crying video : ಅನು ಅಕ್ಕ ಹೆಸರಿನಲ್ಲಿ ಹಲವಾರು ಫೇಕ್ ಪ್ರೋಫೈಲ್ ಮಾಡಿ ಅವರ ಬಗ್ಗೆ ಅಸಭ್ಯವಾಗಿ ಮಾತನಾಡಲಾಗುತ್ತಿದೆ. ಈ ಕುರಿತು ವಿಡಿಯೋ ಮಾಡಿ ಅವರು ನೋವು ತೋಡಿಕೊಂಡಿದ್ದಾರೆ. ಇದೀಗ ಈ ಕುರಿತು ವಿನಯ್ಗೌಡ್ ಪ್ರತಿಕ್ರಿಯೆ ನೀಡಿ ಆಕ್ರೋಶ ಹೊರಹಾಕಿದ್ದಾರೆ.
Vinay Gowda on Anu akka : ಸಮಾಜ ಸೇವಕಿ ಅನು ಅಕ್ಕ ಅವರಿಗೆ ಜೀ ಸ್ತ್ರೀ ಅವಾರ್ಡ್ ನೀಡಿ ಗೌರವಿಸಿತು. ಇದರ ಬೆನ್ನಲ್ಲೆ ಅವರು ಸೋಷಿಯಲ್ ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಇದೀಗ ಈ ಕುರಿತು ಬಿಗ್ ಬಾಸ್ 10 ರ ಸ್ಪರ್ಧಿ ವಿನಯ್ ಗೌಡ್ ಪ್ರತಿಕ್ರಿಯೆ ನೀಡಿದ್ದಾರೆ.
ಸಮಾಜ ಸೇವಕಿ ಅನು ಅಕ್ಕ ( Anu Akka ) ಅವರನ್ನು ಖಾಸಗಿಯಾಗಿ ಟ್ರೋಲ್ ಮಾಡಲಾಗುತ್ತಿದೆ. ಇದರಿಂದ ತೀವ್ರ ನೋವನ್ನು ಅನುಭವಿಸಿರುವ ಅವರು, ವಿಡಿಯೋ ಮೂಲಕ ಕಣ್ಣೀರಿಟ್ಟಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ನಾನು ಪಿರಿಯಡ್ಸ್ ಅದಾಗ್ಲೆ ಹೆಚ್ಚು ಡಾನ್ಸ್ ಮಾಡಿದ್ದು..! ಸಾಯಿ ಪಲ್ಲವಿ ಹೇಳಿಕೆ ವೈರಲ್
ಸಧ್ಯ ಅನು ಅಕ್ಕ ಪರ ಧ್ವನಿ ಎತ್ತಿರುವ ವಿನಯ್, ನೋಡಿ ಅನು ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸಾಲ ಸೂಲ ಮಾಡಿ ಕೆಲವೊಂದು ಬಾರಿ ಅನಾರೋಗ್ಯದ ನಡುವೆಯೂ ನಮ್ಮ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಮಾಡುತ್ತಿದ್ದಾರೆ. ಅವರ ವಿಚಾರವಾಗಿ ಫೇಕ್ ಪ್ರೊಫೈಲ್ ಇಟ್ಟುಕೊಂಡು ಟ್ರೋಲ್ ಮಾಡೋದು, ಅಸಭ್ಯವಾಗಿ ಮಾತನಾಡೋದ್ರಿಂದ ಎನ್ ಸಿಗುತ್ತೆ ನಿಮ್ಗೆ..
ನೀವು ಮಾಡೋ ಕೆಲಸ ನಿಮ್ಗೆ ಸರಿ ಅನಿಸುತ್ತಾ ನೋಡಿ.. ನಿಮ್ಮ ಅಕ್ಕತಂಗಿಗೆ ಈ ರೀತಿ ಆದ್ರೆ ಸರಿ ಅನಿಸುತ್ತಾ, ಫೇಕ್ ಪ್ರೊಫೈಲ್ ಇಟ್ಕೊಂಡು ಈ ರೀತಿ ಮಾಡೋದ್ರಿಂದ ಎನ್ ಬರುತ್ತಿವೆ. ನಮಗೂ ಅಮ್ಮ, ಅಕ್ಕ ಅನ್ನೋಕೆ ಬರುತ್ತೆ, ಆದ್ರೆ ಅದು ಸರಿಯಲ್ಲ. ಅನು ನನ್ನ ತಂಗಿ, ಅವಳನ್ನ ಮನಸಾರೆ ತಂಗಿಯಂತ ಸ್ವೀಕಾರ ಮಾಡಿದೀನಿ, ಅವರ ತಂಟೆಗೆ ಬರೋಕೆ ಹೋಗ್ಬೇಡಿ ಅಂತ ವಾರ್ನಿಂಗ್ ಕೊಟ್ಟಿದ್ದಾರೆ ವಿನಯ್.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.