ನವದೆಹಲಿ: ಖ್ಯಾತ ಬಾಲಿವುಡ್ ನಟ ಅನಿಲ್ ಕಪೂರ್ ಅವರ ಪುತ್ರಿ ಸೋನಂ ಕಪೂರ್ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಆಕ್ಟಿವ್ ಆಗಿರುತ್ತಾರೆ. ಅಷ್ಟೇ ಅಲ್ಲ ಅವರು ಹಂಚಿಕೊಳ್ಳುವ ಹಲವಾರು ಪೋಸ್ಟ್ ಗಳು ವೈರಲ್ ಆಗುತ್ತವೆ. ಆದರೆ, ಸೋನಂ ಸಮಕಾಲೀನ ವಿಷಯಗಳ ಕುರಿತು ತಮ್ಮ ಟ್ವೀಟ್ ನಲ್ಲಿ ಮಾತನಾಡುವುದು ತುಂಬಾ ವಿರಳ. ಇತ್ತೀಚೆಗೆ ಸೋನಂ ಮಾಡಿರುವ ಟ್ವೀಟ್ ವೊಂದರಲ್ಲಿ ಸಮಕಾಲೀನ ವಿಷಯದ ಕಡೆಗೆಯೇ ಎಲ್ಲರ ಗಮನ ಸೆಳೆದಿದೆ. ಸಂಪ್ರದಾಯವಾದಿಗಳ ಕುರಿತು ಟ್ವೀಟ್ ಮಾಡಿರುವ ಸೋನಂ ಕಪೂರ್ " ಹೆ ವಿಶ್ವವೇ ನನ್ನದೊಂದು ಚಿಕ್ಕ ಸಲಹೆ.. ಸಂಪ್ರದಾಯವಾದಿಗಳಿಗೆ ವೋಟ್ ಹಾಕಬೇಡಿ.. ಅವರಿಂದ ದೂರವಿರಿ.. ನಮ್ಮ ಜಗತ್ತು ನಾಶವಾಗಲು ಅವರು ಕಾರಣರಾಗುತ್ತಾರೆ" ಎಂದಿದ್ದಾರೆ. ಸದ್ಯ ಅವರು ಮಾಡಿರುವ ಏ ಟ್ವೀಟ್ ಸಕತ್ ಹೆಡ್ಲೈನ್ ಸೃಷ್ಟಿಸುತ್ತಿದೆ. ಸೋನಂ ಮಾಡಿರುವ ಈ ಟ್ವೀಟ್ ಗೆ ಟ್ವೀಟರ್ಥಿಗಳು ವ್ಯಾಪಕ ಪ್ರತಿಕ್ರಿಯೆ ನೀಡಲಾರಂಭಿಸಿದ್ದು, ಈ ಟ್ವೀಟ್ ಇದೀಗ ವೈರಲ್ ಆಗಿದೆ.



COMMERCIAL BREAK
SCROLL TO CONTINUE READING

ಪಾಕಿಸ್ತಾನದ ಶಿಖ್ ಪವಿತ್ರ ಸ್ಥಾನವಾಗಿರುವ ನಾನಕಾನ ಸಾಹೀಬ್ ಮೇಲೆ ನಡೆದ ಕಲ್ಲು ತೂರಾಟದ ಹಿನ್ನೆಲೆ ಸೋನಂ ಮಾಡಿರುವ ಈ ಟ್ವೀಟ್ ಭಾರೀ ಮಹತ್ವ ಪಡೆದುಕೊಂಡಿದೆ. ಆದರೆ, ಇದನ್ನು ಅವರು  ತಮ್ಮ ಟ್ವೀಟ್ ನಲ್ಲಿ ಸ್ಪಷ್ಟಪಡಿಸಿಲ್ಲ. ಶುಕ್ರವಾರ ಪಾಕಿಸ್ತಾನದಲ್ಲಿರುವ ನಾನಕಾನ ಸಾಹೀಬ್ ಗುರುದ್ವಾರದ ಮೇಲೆ ಆಕ್ರೋಶಕ್ಕೆ ಒಳಗಾದ ಮುಸ್ಲಿಮ್ ಸಮುದಾಯದ ಜನರು ಕಲ್ಲುತೂರಾಟ ನಡೆಸಿದ್ದರು. ಅದರ ವಿಡಿಯೋ ತುಣುಕೊಂದು ಸಹ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.


ಸೋನಂ ಕಪೂರ್ ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ಇತ್ತೀಚೆಗೆ ಬಿಡುಗಡೆಗೊಂಡ 'ದಿ ಜೊಯಾ ಫ್ಯಾಕ್ಟರ್' ಚಿತ್ರದಲ್ಲಿ ಅವಳು ಕಾಣಿಸಿಕೊಂಡಿದ್ದಳು. ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ನಟಿಸಿರುವ ನಟ ದುಲ್ಕರ್ ಸಲ್ಮಾನ್ ಅವರು ಕೂಡ ಏ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೂ ಮೊದಲು ಸೋನಂ 'ಏಕ್ ಲಡ್ಕಿ ಕೋ ದೇಖಾ ತೋ ಐಸಾ ಲಗಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ವ್ಯಾಪಕ ಸಕ್ರೀಯವಾಗಿರುವ ಸೋನಂ ಕಪೂರ್, ತಮ್ಮ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಾರೆ.