ನವದೆಹಲಿ: ಹಲವಾರು ಊಹಾಪೋಹ ಮತ್ತು ಕುತೂಹಲಕ್ಕೆ ಕೊನೆಗೂ ತೆರೆ ಎಳೆದ  ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿಯು ಇಟಲಿಯ ಟುಸ್ಕಾನಿಯ ಖಾಸಗಿ ಸಮಾರಂಭದಲ್ಲಿ  ವಿವಾಹವಾಗಿದ್ದಾರೆ.ಈ ಹಿಂದೆ ಈ ಜೋಡಿಯಗಳ ವಿವಾಹದ ಕುರಿತಾಗಿ ನಿರಂತರ ಸುದ್ದಿಯಲ್ಲಿದ್ದ ಇವರು ಕೊನೆಗೂ ಮದುವೆಯ ಮೂಲಕ ಜೀವನದ ಹೊಸ ಪಯಣಕ್ಕೆ ಕಾಲಿರಿಸಿದ್ದಾರೆ.
  
ಈ ಹಿಂದೆ ಕೊಹ್ಲಿ ಬಿಸಿಸಿಐಗೆ ಡಿಸೆಂಬರ್ನಲ್ಲಿ ವಿರಾಮ ಕೇಳಿದಾಗಲೇ ಮದುವೆಯ ಸುದ್ದಿ ಹಬ್ಬಿತ್ತು, ಮತ್ತು  ಇತ್ತೀಚಿಗೆ ಕುಟುಂಬದ ಸಮೇತ ಮುಂಬೈನ ವಿಮಾನದಲ್ಲಿ ಕಾಣಿಸಿಕೊಂಡಿದ್ದ ಅನುಷ್ಕಾ ಶರ್ಮಾ ಆ ಸಂದರ್ಭದಲ್ಲಿ ಮದುವೆಯ ಕುರಿತಾಗಿ  ಪತ್ರಕರ್ತರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಿದೆ ನೇರವಾಗಿ ನಿಲ್ದಾಣಕ್ಕೆ ತೆರಳಿದ್ದಳು.ಈಗ ಆ ಪ್ರಶ್ನೆಗೆ  ಅವಳು ಯಾಕೆ ಉತ್ತರಿಸಲಿಲ್ಲ ಎನ್ನುವುದಕ್ಕೆ ಉತ್ತರ ಸಿಕ್ಕಿದೆ.
 
ವಿರಾಟ್ ಕೊಹ್ಲಿ  ಬ್ರೇಕ್ ಫಾಸ್ಟ್ ವಿಥ್ ಚಾಂಪಿಯನ್ಸ್ ಎನ್ನುವ ಕಾರ್ಯಕ್ರಮದಲ್ಲಿ  ಅನುಷ್ಕಾದ ಪ್ರೀತಿಯ ಬಗ್ಗೆ ಮಾತನಾಡಿದ್ದ ವಿರಾಟ್ " ಅವಳು ನನ್ನ ಬಾಳಿನಲ್ಲಿ ಪ್ರವೇಶಿದ ನಂತರ ನನಗೆ ಹಲವಾರು ಸಂಗತಿ ಗಳನ್ನೂ ಅವಳು ಕಳಿಸಿದ್ದಾಳೆ ,ಅವಳು ನನ್ನ ಪಾಲಿನ ಅದೃಷ್ಟ ಎಂದು ಅವರು ಬಣ್ಣಿಸಿದ್ದರು.ಅಲ್ಲದೆ ಕಳೆದ ನಾಲ್ಕು ವರ್ಷಗಳಲ್ಲಿ  ಅವಳಿಂದ ತುಂಬಾ ಕಲಿತಿದ್ದೇನೆ ಎಂದು ಈ ಕಾರ್ಯಕ್ರಮದಲ್ಲಿ ತಿಳಿಸಿದ್ದರು.