ನವದೆಹಲಿ: Top 25 Global Instagram Influencer- ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಸಾಧನೆಯನ್ನು ಮಾಡಿದ್ದಾರೆ. ಮೊದಲನೆಯದಾಗಿ ತಮ್ಮ ಮನೆಗೆ ಆಗಮಿಸಲಿರುವ ಹೊಸ ಸದಸ್ಯನ ಸ್ವಾಗತಕ್ಕೆ ಕಾತರರಾಗಿರುವ ಈ ದಂಪತಿ ಜೋಡಿ ಇದೀಗ Top Global Instagram Influencer ಪಟ್ಟಿಯಲ್ಲಿ ತಮ್ಮ ಹೆಸರನ್ನು ಬರೆದಿದೆ.


COMMERCIAL BREAK
SCROLL TO CONTINUE READING

11 ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ
ಜಾಗತಿಕ ದತ್ತಾಂಶ ಶೇಖರಣೆ ಹಾಗೂ ಅವುಗಳ ವಿಶ್ಲೇಷಣೆ ಮಾಡುವ ಹೈಪ್ ಆಡಿಟರ್ ಈ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ವಿಶ್ವಾದ್ಯಂತ ಇರುವ ಜನರಿಗೆ ಇಂಪ್ರೆಸ್ ಮಾಡುವವರ ಹೆಸರನ್ನು ಒಳಗೊಂಡಿರುವ ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (Virat Kohli) 11ನೇ ಸ್ಥಾನದಲ್ಲಿದ್ದಾರೆ. ಅಷ್ಟೇ ಅಲ್ಲ ಈ ಪಟ್ಟಿಯಲ್ಲಿ ಅತ್ಯಂತ ಉನ್ನತ ಶ್ರೇಯಾಂಕ ಪಡೆದ ಭಾರತೀಯ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಇನ್ನೊಂದೆಡೆ ಅನುಷ್ಕಾ ಕೂಡ ಈ ಪಟ್ಟಿಯಲ್ಲಿ 24ನೇ ಸ್ಥಾನವನ್ನು ಭದ್ರಪಡಿಸಿದ್ದಾರೆ.


ಇದನ್ನು ಓದಿ- Pregnant ಪತ್ನಿ Anushka Sharmaಳಿಂದ ಶಿರ್ಷಾಸನ ಮಾಡಿಸಿದ ಪತಿ Virat Kohli, PIC ವಿಕ್ಷೀಸಿ


IPL 2020: ವಿರಾಟ್ ಕೊಹ್ಲಿಗೆ Flying Kiss ಕೊಟ್ಟ ಅನುಷ್ಕಾ ಶರ್ಮಾ, ಫೋಟೋಸ್ ವೈರಲ್



ಕತ್ರೀನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ ಕೂಡ ಈ ಪಟ್ಟಿಯಲ್ಲಿ ಶಾಮೀಲಾಗಿದ್ದಾರೆ
ಪೋರ್ಚುಗೀಸ್ ನ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ ಈ ಪಟ್ಟಿಯಲ್ಲಿ ಆಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 11 ನೆ ಸ್ಥಾನದಲ್ಲಿದ್ದರೆ, ಪ್ರಧಾನಿ ನರೇಂದ್ರ ಮೋದಿ 17ನೆ ಸ್ಥಾನದಲ್ಲಿದ್ದಾರೆ. ಅನುಷ್ಕಾ ಶರ್ಮಾ 24ನೇ ಸ್ಥಾನದಲ್ಲಿದ್ದರೆ, ಕತ್ರೀನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ ಕೂಡ ಕ್ರಮೇಣ 43 ಮತ್ತು 47ನೆ ಸ್ಥಾನ ಅಲಂಕರಿಸಿದ್ದಾರೆ.