ಮುಂಬಯಿ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸೋಮವಾರ  ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿಯನ್ನು ಅನುಷ್ಕಾ ಪತಿ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ.  


COMMERCIAL BREAK
SCROLL TO CONTINUE READING

ವಿರಾಟ್  ಕೊಹ್ಲಿ (Virat Kohli) ಅನುಷ್ಕಾ ಶರ್ಮಾ (Anushka Sharma) ಪಾಲಿಗೆ 2021ಸಂತೋಷದ ಗುಚ್ಛವನ್ನೇ ಹೊತ್ತು ತಂದಿದೆ. ಅನುಷ್ಕಾ ಶರ್ಮಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ವಿರಾಟ್  ಕೋಹ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ ಕುಟುಂಬಕ್ಕೆ ಹೊಸ ಸದಸ್ಯೆ ಸೇರ್ಪಡೆಯಾಗಿರುವ ಬಗ್ಗೆ ಅವರು  ಟ್ವೀಟ್ (Tweet)  ಮಾಡಿದ್ದಾರೆ. ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದಗಳಿಗೆ ನಾವು ಕೃತಜ್ಞರಾಗಿರುತ್ತೇವೆ. ಅನುಷ್ಕಾ ಮತ್ತು ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.  ನಮ್ಮ ಜೀವನದಲ್ಲಿ ಈ ಹೊಸ ಅಧ್ಯಾಯ ಆರಂಭವಾಗಿದ್ದು, ಈ ವಿಚಾರವನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಬಹಳ ಸಂತೋಷವಾಗುತ್ತಿದೆ ಎಂದಿದ್ದಾರೆ.  


Pregnant ಪತ್ನಿ Anushka Sharmaಳಿಂದ ಶಿರ್ಷಾಸನ ಮಾಡಿಸಿದ ಪತಿ Virat Kohli, PIC ವಿಕ್ಷೀಸಿ


 ಸೋಮವಾರ ಮುಂಜಾನೆಯೇ ಅನುಷ್ಕಾ ಶರ್ಮಾ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವಿರಾಟ್ ಅನುಷ್ಕಾಗೆ  ಹೆಣ್ಣು ಮಗು ಜನಿಸಿರುವ ಸುದ್ದಿ ಕೇಳಿ ಎಲ್ಲರಿಂದಲೂ ಈ ದಂಪತಿಗೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.


 


ಹೆಚ್ಚಿನ ಶ್ರೇಷ್ಠ ಕ್ರಿಕೆಟಿಗರಿಗೆ  ಮೊದಲ ಸಂತಾನ ಹೆಣ್ಣು ಮಗುವೇ ಆಗಿರುವುದು ಕಾಕತಾಳಿಯವಾದರೂ ಸತ್ಯ.  ಸರ್ ಡಾನ್ ಬ್ರಾಡ್ಮನ್ ಅವರನ್ನು ಹೊರತುಪಡಿಸಿದರೆ, ಸಚಿನ್ ತೆಂಡೂಲ್ಕರ್ (Sachin Tendulkar) , ಬ್ರಿಯಾನ್ ಲಾರಾ, ರಿಕಿ ಪಾಂಟಿಂಗ್  ಹೀಗೆ  ಅನೇಕ ಶ್ರೇಷ್ಠ ಕ್ರಿಕೆಟಿಗರ ಮೊದಲ ಸಂತಾನ  ಹೆಣ್ಣೇ ಆಗಿರುವುದು ವಿಶೇಷ. 


 


ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ (Australia) ಪ್ರವಾಸದಲ್ಲಿ ಮೊದಲ ಟೆಸ್ಟ್ ಆಡಿದ ನಂತರ ಭಾರತಕ್ಕೆ ಮರಳಿದ್ದು,  ಅನುಷ್ಕಾ ಅವರನ್ನು ನೋಡಿಕೊಳ್ಳುತ್ತಿದ್ದರು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.