ನವ ದೆಹಲಿ: ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ ಕ್ರಿಕೆಟ್ ಸರಣಿಯ ಭಾಗವಾಗಿ ಭಾರತ ತಂಡದೊಂದಿಗೆ ಕೇಪ್ ಟೌನ್ ತಲುಪಿದ್ದಾರೆ. ಕುತೂಹಲಕಾರಿಯಾಗಿ, ಈ ಪ್ರವಾಸದಲ್ಲಿ, ಅವರ ಪತ್ನಿ ಅನುಷ್ಕಾ ಶರ್ಮಾ ಸಹ ಪ್ರಯಾಣ ಬೆಳೆಸಿದ್ದಾರೆ. ಭಾರತ ತಂಡವು ದಕ್ಷಿಣ ಆಫ್ರಿಕಾದೊಂದಿಗೆ 3 ಟೆಸ್ಟ್, 6 ಏಕದಿನ ಪಂದ್ಯಗಳು ಮತ್ತು 3 ಟಿ-20 ಪಂದ್ಯಗಳನ್ನು ಆಡಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ವಿರಾಟ್ ಕೊಹ್ಲಿ ಈ ಮೊದಲೇ ದಕ್ಷಿಣ ಆಫ್ರಿಕಾದಲ್ಲಿ ಕ್ರಿಕೆಟ್ ಸರಣಿಯನ್ನು ಆಡಿದ್ದರೂ, ಈ ಬಾರಿ ಅವರು ದಕ್ಷಿಣ ಆಫ್ರಿಕಾ ಪ್ರವಾಸ ಅವರಿಗೆ ವಿಶೇಷವಾಗಿದೆ. ಏಕೆಂದರೆ ಈ ಬಾರಿಯ ಅವರ ಪ್ರವಾಸದಲ್ಲಿ ಪತ್ನಿ ಅನುಷ್ಕಾ ಶರ್ಮಾ ಸಹ ಇದ್ದಾರೆ. ಹೌದು, ವಿರಾಟ್ ಕೊಹ್ಲಿ ತನ್ನ ಪತ್ನಿಯೊಂದಿಗೆ ಮತ್ತೊಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರ ಪತ್ನಿ ಜೊತೆಯಲ್ಲಿ ಅವರು ಕೇಪ್ ಟೌನ್ನಲ್ಲಿ ಸುಂದರವಾಗಿ ಕಾಣಿಸುತ್ತಿದ್ದರು. ವಿರಾಟ್-ಅನುಷ್ಕಾ ಅವರು ಹೊಸ ವರ್ಷದ ಸಂತಸವನ್ನು ಸಹ ಹಂಚಿಕೊಂಡಿದ್ದಾರೆ. 


ವಿರಾಟ್ ಪತ್ನಿ ಅನುಷ್ಕಾ ಜೊತೆ ಬೀಚ್ ಸೆಲ್ಫಿಯನ್ನು ಶೇರ್ ಮಾಡಿದ್ದಾರೆ, "ಕೇಪ್ ಟೌನ್ ಒಂದು ಸುಂದರವಾದ ಸ್ಥಳವಾಗಿದೆ ಮತ್ತು ಇದು ನನ್ನಾಕೆಯ ಜೊತೆಗೆ ಇನ್ನಷ್ಟು ಸುಂದರವಾಗಿದೆ" ಎಂದೂ ಸಹ ಅವರು ತಮ್ಮ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.