10ನೇ ಪುಣ್ಯಸ್ಮರಣೆ; ಸಾಹಸಸಿಂಹ ಡಾ. ವಿಷ್ಣುವರ್ಧನ್ ನೆನೆದ ಚಂದನವನ
ವಿಷ್ಣು ದಾದಾ ನಮ್ಮೆಲ್ಲರನ್ನೂ ಆಗಲಿ ದಶಕ ಉರುಳಿದರೂ ಅವರ ಮೇಲಿನ ಪ್ರೀತಿ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ.
ಬೆಂಗಳೂರು: ಕರುನಾಡಿನ ಸಾಹಸ ಸಿಂಹ, ಅಭಿನವ ಭಾರ್ಗವ ಡಾ. ವಿಷ್ಣುವರ್ಧನ್ ನಮ್ಮನ್ನಗಲಿ ಇಂದಿಗೆ 10 ವರ್ಷಗಳು ಕಳೆದಿವೆ. ವಿಷ್ಣು ದಾದಾ ನಮ್ಮೆಲ್ಲರನ್ನೂ ಆಗಲಿ ದಶಕ ಉರುಳಿದರೂ ಅವರ ಮೇಲಿನ ಪ್ರೀತಿ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ 'ವಿಷ್ಣು' ಅವರನ್ನು ಸ್ಮರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಇಡೀ ಕನ್ನಡ ಚಿತ್ರರಂಗ ಅವರನ್ನು ಸ್ಮರಿಸಿದೆ.
ಎಷ್ಟು ಮುದ್ದಾಗಿ ಇದ್ದಾನೆ ಈ ಮನುಷ್ಯ ಎನ್ನುತ್ತಿತ್ತು ನನ್ನಮನ! ಅನೇಕ ಬಾರಿ ಇಬ್ಬರು ಸೇರಿ ಮಾತಾಡಿದ ದಿನವುಂಟು! ನಾವಿಬ್ಬರೂ ಒಂದೆ ರಾಶಿನಕ್ಷತ್ರ "ಜೇಷ್ಠ, ವೃಶ್ಚಿಕ!"
ಭಾವನಾಜೀವಿ ಏಕಾಂತ ಪ್ರಿಯ, ಆಧ್ಯಾತ್ಮಿಕವಾಗಿ ತನ್ನ ತೊಡಗಿಸಿಕೊಂಡ ಚೇತನ.
ಹಾಸ್ಯಪ್ರಿಯ ಆದರೆ ಸ್ವಲ್ಪ ವ್ಯತ್ಯಾಸಕಂಡರೆ ಮೌನಿ.
ಕರ್ತವ್ಯಮುಗಿಸಿ ಹೋಗಿ 10ವರ್ಷವಾಯಿತು ಓಂಶಾಂತಿ ಎಂದು ನವರಸ ನಾಯಕ ಜಗ್ಗೇಶ್ 'ವಿಷ್ಟು' ಅವರೊಂದಿಗಿನ ನೆನಪು ಮೆಲುಕು ಹಾಕಿದ್ದಾರೆ.
VIDEO: ಸಾಹಸಸಿಂಹ ಡಾ|| ವಿಷ್ಣುವರ್ಧನ್ ಜೊತೆಗಿನ ಅನಿರುದ್ಧನ ಸವಿನೆನಪು
ಇದೇ ರೀತಿ ಇನ್ನೂ ಹಲವು ಕಲಾವಿದರು ವಿಷ್ಣು ವರ್ಧನ್ ಅವರ ಪುಣ್ಯ ಸ್ಮರಣೆಯಂದು ಅವರನ್ನು ನೆನೆದಿದ್ದಾರೆ.
ಮೈಸೂರಿನ ಎಚ್.ಡಿ. ಕೋಟೆ ರಸ್ತೆಯಲ್ಲಿರುವ ಉದ್ಬೂರು ಕ್ರಾಸ್ ಬಳಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗುತ್ತಿದ್ದು, ವಿಷ್ಣುವರ್ಧನ್ ಪತ್ನಿ ಭಾರತಿ, ಅಳಿಯ ಅನಿರುದ್ಧ್ ಅಲ್ಲಿಗೆ ತೆರಳಿ ಸಾಹಸ ಸಿಂಹನಿಗೆ ನಮನ ಸಲ್ಲಿಸಲಿದ್ದಾರೆ.