ಬೆಂಗಳೂರು : ಚಲನಚಿತ್ರ ನಿರ್ಮಾಪಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರ ಚಿತ್ರ ದಿ ಕಾಶ್ಮೀರ್ ಫೈಲ್ಸ್ (Kashmir Files) ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಇದುವರೆಗೆ 231 ಕೋಟಿ ಗಳಿಸಿದೆ. ಇದರೊಂದಿಗೆ ಇದೀಗ ವಿವೇಕ್ ಅವರನ್ನು ಬ್ರಿಟನ್ ಸಂಸತ್ತು ಕರೆದಿದೆ. ಈಗ ವಿವೇಕ್ ಅಲ್ಲಿ ಕಾಶ್ಮೀರಿ ಪಂಡಿತರ (Kashmiri Pandit) ಬಗ್ಗೆ ಮಾತನಾಡಲಿದ್ದಾರೆ. ಅದೇ ಸಮಯದಲ್ಲಿ, ಚಿತ್ರದ ಯಶಸ್ಸಿನಿಂದ ಈಗ ಅದು ಇತರ ಭಾಷೆಗಳಲ್ಲಿಯೂ ಬಿಡುಗಡೆಯಾಗುತ್ತಿದೆ.


COMMERCIAL BREAK
SCROLL TO CONTINUE READING

ನಾನು ಮತ್ತು ನನ್ನ ಪತ್ನಿ ಪಲ್ಲವಿ ಜೋಶಿ (Pallavi Joshi) ಅವರನ್ನು ಬ್ರಿಟಿಷ್ ಸಂಸತ್ತಿಗೆ ಆಹ್ವಾನಿಸಲಾಗಿದೆ. ನಾವು ಮುಂದಿನ ತಿಂಗಳು ಅಲ್ಲಿಗೆ ಹೋಗುತ್ತೇವೆ. ಕಾಶ್ಮೀರಿ ಪಂಡಿತರ (Kashmiri Pandit) ಮೇಲಿನ ದೌರ್ಜನ್ಯ ಮತ್ತು ನರಮೇಧವನ್ನು ಜಗತ್ತಿನ ಮೂಲೆ ಮೂಲೆಗೆ ಕೊಂಡೊಯ್ಯುವ ಉದ್ದೇಶದಿಂದ ನಾವು ಕಾಶ್ಮೀರ್‌ ಫೈಲ್ಸ್ ಚಿತ್ರವನ್ನು (Kashmir Files Film)ನಿರ್ಮಿಸಿದ್ದೇವೆ. ನಮ್ಮ ಗುರಿಯಲ್ಲಿ ನಾವು ಯಶಸ್ವಿಯಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದಿದ್ದಾರೆ ವಿವೇಕ್ ರಂಜನ್ (Vivek Ranjan) . ಇದೇ ಸಂದರ್ಭದಲ್ಲಿ, ಚಿತ್ರ ಜಗತ್ತಿನ ಮೂಲೆ ಮೂಲೆಗೂ ತಲುಪುತ್ತಿದೆ. ಇದಕ್ಕಾಗಿ ನಾವು ಏನನ್ನೂ ಮಾಡಿಲ್ಲ. ಏಕೆಂದರೆ ಜನರ ಮೇಲೆ ಪ್ರಭಾವ ಬೀರುವ ಶಕ್ತಿ ನಮಗಿಲ್ಲ. ಇದೆಲ್ಲವೂ ದೇವರ ಕೈಯಲ್ಲಿದೆ. ನಾವು ಕೇವಲ ಮಾಧ್ಯಮ ಎಂದಿದ್ದಾರೆ.


ಇದನ್ನೂ ಓದಿ : 'ಕೆಜಿಎಫ್-2' ಟ್ರೇಲರ್ ನೋಡಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಏನಂದ್ರು ಗೊತ್ತಾ..?


ಚಿತ್ರದಲ್ಲಿ ದೊಡ್ಡ ತಾರೆಯರಿಲ್ಲ. ಅನುಪಮ್ ಖೇರ್ (Anupam Kher) ಹೊರತುಪಡಿಸಿ ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಪುನೀತ್ ಇಸ್ಸಾರ್, ಮೃಣಾಲ್ ಕುಲಕರ್ಣಿ ಸೇರಿದಂತೆ ಅನೇಕ ನಟರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ. 90ರ ದಶಕದಲ್ಲಿ ಕಾಶ್ಮೀರಿ ಪಂಡಿತರನ್ನು (Kashmir Pandit) ತಮ್ಮದೇ ರಾಜ್ಯದಿಂದ ಹೊರಹಾಕಿದಾಗ ಅವರ ಕಥೆಯನ್ನು 'ದಿ ಕಾಶ್ಮೀರ್ ಫೈಲ್ಸ್' ಚಿತ್ರಿಸುತ್ತದೆ. 


ಇದನ್ನೂ ಓದಿ : Vijay Deverakonda : ಪುರಿ ಜಗನ್ನಾಥ್ ಜೊತೆ ವಿಜಯ್ ದೇವರಕೊಂಡ ಮತ್ತೊಂದು ಸಿನಿಮಾ ಫಿಕ್ಸ್.. 2023ಕ್ಕೆ JGM ರಿಲೀಸ್


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.