ನವದೆಹಲಿ: ನಟಿ  ಮಹಿಕಾ ಶರ್ಮಾ (Mahika Sharma) ಪ್ರಸ್ತುತ ಯುಕೆಯಲ್ಲಿ ಕಾಲಕಳೆಯುತ್ತಿದ್ದಾರೆ. ಇಡೀ ವಿಶ್ವದಾದ್ಯಂತ ಕರೋನಾವೈರಸ್ ತಡೆಗಟ್ಟಲು ಲಾಕ್‌ಡೌನ್‌ ಜಾರಿಯಲ್ಲಿದೆ. ಆದರೆ ಮಹಿಕಾ ಲಾಕ್‌ಡೌನ್‌ನಲ್ಲಿಯೂ ತನ್ನನ್ನು ಆರೋಗ್ಯಕರ, ಫಿಟ್ ಮತ್ತು ಆಕರ್ಷಕವಾಗಿಡಲು ಪೋಲ್ ಡ್ಯಾನ್ಸಿಂಗ್ ಅನ್ನು ಆನಂದಿಸುತ್ತಿರುವುದಾಗಿ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಸಮಯದಲ್ಲಿ ಯಾವುದೇ ಜಿಮ್ ಅಥವಾ ಯೋಗ ತರಬೇತಿ ಕೇಂದ್ರಗಳು ತೆರೆದಿರದ ಕಾರಣ, ನಾನು ನನ್ನನ್ನು ಫಿಟ್ ಆಗಿ ಉಳಿಸಿಕೊಳ್ಳಲು ಮತ್ತು ನಿರ್ವಹಿಸಲು ಪೋಲ್ ಡ್ಯಾನ್ಸಿಂಗ್ ಮಾಡುತ್ತಿದ್ದೇನೆ. ಒತ್ತಡವನ್ನು ನಿವಾರಿಸಲು ಇದು ಉತ್ತಮ ಮಾರ್ಗವಾಗಿದೆ ಎಂದು ಅವರು ತಿಳಿಸಿದ್ದಾರೆ.



ಪೋಲ್ ಡ್ಯಾನ್ಸಿಂಗ್ ನ ಅತ್ಯುತ್ತಮ ವಿಷಯವೆಂದರೆ ಅದು ತುಂಬಾ ಮಜವಾಗಿದೆ. ಸ್ವಲ್ಪ ಸಮಯ ನೀವು ವ್ಯಾಯಾಮ ಮಾಡುತ್ತಿದ್ದೀರಿ ಎಂಬುದನ್ನೇ ನೀವು ಮರೆಯುತ್ತೀರಿ. ಇದು ನಿಮ್ಮನ್ನು ನೀವು ಸದೃಢವಾಗಿಡಲು ಅತ್ಯುತ್ತಮ ಮಾರ್ಗವಾಗಿದೆ ಎಂದು ಮಹಿಕಾ ತಮ್ಮ ಫಿಟ್ನೆಸ್ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.


ಫೋಲ್ ಡ್ಯಾನ್ಸಿಂಗ್ ಯಾವುದೇ ಕ್ರೀಡೆಯಿಂದ ಸಾಧ್ಯವಾಗದ ಜನರಲ್ಲಿ ಆತ್ಮವಿಶ್ವಾಸ, ಸ್ವಾತಂತ್ರ್ಯ, ಮಾದಕತೆ ಮತ್ತು ಶಕ್ತಿಯ ಪ್ರಜ್ಞೆಯನ್ನು ಉಂಟುಮಾಡುತ್ತದೆ. ಇದು ಉತ್ತಮ ದೇಹಕ್ಕೆ ಮಾತ್ರವಲ್ಲ ಆರೋಗ್ಯಕರ ಮನಸ್ಸಿಗೂ ಅದ್ಭುತವಾಗಿದೆ ಎಂದು ಈ ಮಾಜಿ ಟೀನ್ ಮಿಸ್ ನಾರ್ತ್ ಈಸ್ಟ್ ತಾರೆ ತಿಳಿಸಿದ್ದಾರೆ. (ಇನ್ಪುಟ್ - IANS)