ಐಶ್ವರ್ಯಾಗಾಗಿ ಬಾಲಿವುಡ್ʼನ ಇಬ್ಬರು ಸ್ಟಾರ್ ನಟರ ಮಧ್ಯೆ ನಡೆಯಿತಾ ಹೊಡೆದಾಟ!? ವಿಚ್ಛೇದನ ವದಂತಿ ನಡುವೆ ಶಾಕಿಂಗ್ ಸಂಗತಿ ಬಯಲು
Entertainment News: ಬಾಲಿವುಡ್ ಕಿಂಗ್ ಶಾರುಖ್ ಖಾನ್ ಮತ್ತು ಭಾಯಿಜಾನ್ ಸಲ್ಮಾನ್ ಖಾನ್ ಬಗ್ಗೆ ನಾವಿಲ್ಲಿ ಮಾತನಾಡುತ್ತಿದ್ದೇವೆ. ಇಬ್ಬರೂ ಒಬ್ಬರಿಗೊಬ್ಬರು ತುಂಬಾ ಆತ್ಮೀಯರಾಗಿದ್ದ ಕಾಲವೊಂದಿತ್ತು.
Entertainment News: ಬಾಲಿವುಡ್ʼನಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಾಗುತ್ತಿರುವುದು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನ ಪಡೆಯುತ್ತಾರೆ ಎಂಬ ವದಂತಿ. ಈ ಎಲ್ಲದರ ಮಧ್ಯೆ ಇದೀಗ ಮತ್ತೊಂದು ಸುದ್ದಿ ಮುನ್ನೆಲೆಗೆ ಬಂದಿದ್ದು, ಐಶ್ವರ್ಯಾಗಾಗಿ ಇಬ್ಬರು ನಟರ ಮಧ್ಯೆ ಜಗಳವಾಗಿತ್ತು ಎಂಬುದು.
ಇದನ್ನೂ ಓದಿ: "ಅವನೆಂದರೆ ನನಗಿಷ್ಟ": ಡಿವೋರ್ಸ್ ಬೆನ್ನಲ್ಲೇ ಅಣ್ಣನ ಗೆಳೆಯನ ಮೇಲೆಯೇ ಖ್ಯಾತ ನಟಿಗೆ ಪ್ರೀತಿ! ಸೆನ್ಸೇಷನಲ್ ಹೇಳಿಕೆ ವೈರಲ್
ಬಾಲಿವುಡ್ ಕಿಂಗ್ ಶಾರುಖ್ ಖಾನ್ ಮತ್ತು ಭಾಯಿಜಾನ್ ಸಲ್ಮಾನ್ ಖಾನ್ ಬಗ್ಗೆ ನಾವಿಲ್ಲಿ ಮಾತನಾಡುತ್ತಿದ್ದೇವೆ. ಇಬ್ಬರೂ ಒಬ್ಬರಿಗೊಬ್ಬರು ತುಂಬಾ ಆತ್ಮೀಯರಾಗಿದ್ದ ಕಾಲವೊಂದಿತ್ತು. ಆದರೆ ಕೆಲವು ಕಾರಣಗಳಿಂದಾಗಿ ಸೆಲೆಬ್ರಿಟಿಗಳಿಗೆ ದೀರ್ಘಕಾಲದ ಸಂಬಂಧ ಮುರಿದುಬಿದ್ದಿತ್ತು. ಅವರ ಈ ಜಗಳ ವೃತ್ತಿಪರ ಜೀವನದ ವಿಷಯಗಳು ಮಾತ್ರವಲ್ಲದೆ, ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರಿತ್ತು.
ಇದನ್ನೂ ಓದಿ: ಮುಂಬೈ ಇಂಡಿಯನ್ಸ್ʼನಿಂದ ಹೊರಬರ್ತಿದ್ದಾರೆ ಹಾರ್ದಿಕ್ ಪಾಂಡ್ಯ!? ಒಂದೇ ವರ್ಷಕ್ಕೆ ಸಾಕಾಯ್ತಾ ಸಹವಾಸ
ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಸಂಬಂಧವು 1990 ರ ದಶಕದಲ್ಲಿ ಚರ್ಚೆಯ ವಿಷಯವಾಗಿತ್ತು. ಐಶ್ವರ್ಯಾ ಈ ಹಿಂದೆ ಶಾರುಖ್ ಖಾನ್ ಜೊತೆ ಚಲ್ತೇ ಚಲ್ತೆ ಚಿತ್ರದಲ್ಲಿ ನಟಿಸಿದ್ದರು. ನಂತರ ಅವರ ಸ್ಥಾನಕ್ಕೆ ರಾಣಿ ಮುಖರ್ಜಿ ಬಂದರು. ಶೂಟಿಂಗ್ ವೇಳೆ ಸಲ್ಮಾನ್ ಸಾಕಷ್ಟು ಗಲಾಟೆ ಸೃಷ್ಟಿಸಿದ್ದರು ಎನ್ನಲಾಗಿದೆ. ಶಾರುಖ್ ಐಶ್ವರ್ಯಾ ಜೊತೆ ತುಂಬಾ ಸ್ನೇಹದಿಂದ ವರ್ತಿಸಿರುವುದೇ ಇದಕ್ಕೆ ಕಾರಣ ಎಂಬ ಆರೋಪವೂ ಕೇಳಿಬಂದಿತ್ತು. ಆದರೆ ಆ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ಐಶ್ವರ್ಯಾ ವಿಚಾರದಲ್ಲಿ ಬಹಳಷ್ಟು ಪೊಸೆಸಿವ್ ಆಗಿದ್ದರಂತೆ ಸಲ್ಮಾನ್ ಖಾನ್. ಈ ವಿಚಾರದಲ್ಲಿ ನೊಂದಿದ್ದ ಐಶ್ ಅವರ ಜೊತೆ ಬ್ರೇಕಪ್ ಮಾಡಿಕೊಂಡಿದ್ದರು ಎಂದೂ ಸಹ ಚಾಲ್ತಿಯಲ್ಲಿದ್ದ ವಿಚಾರ. ಈ ವರದಿಗಳು ಸತ್ಯಕ್ಕೆ ಎಷ್ಟು ಸಮೀಪ ಎಂಬುದು ತಿಳಿಯದ ಸಂಗತಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ