‘ಅರ್ಜುನ್‌ ರೆಡ್ಡಿ’ ಸಿನಿಮಾ ಮೂಲಕ ಬ್ಲಾಕ್‌ ಬಸ್ಟರ್‌ ಎಂಟ್ರಿ ಕೊಟ್ಟು, ಕೋಟಿ ಕೋಟಿ ಅಭಿಮಾನಿಗಳ ನೆಚ್ಚಿನ ನಟನಾಗಿ ಮಿಂಚುತ್ತಿರುವ ನಟ ವಿಜಯ್ ದೇವರಕೊಂಡ ಅಬ್ಬರಿಸಲು ಸಜ್ಜಾಗಿದ್ದಾರೆ. ವಿಜಯ್ ದೇವರಕೊಂಡ ಅವರ ‘ಲೈಗರ್’ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ಸಾವಿರಾರು ಪರದೆ ಮೇಲೆ ಮಿಂಚು ಹರಿಸಲಿದೆ. ದೇವರಕೊಂಡ & ಪುರಿ ಜಗನ್ನಾಥ್ ಕಾಂಬಿನೇಷನ್ ಸಿಕ್ಕಾಪಟ್ಟೆ ಹೈಪ್‌ ಕ್ರಿಯೇಟ್‌ ಮಾಡಿದೆ.


COMMERCIAL BREAK
SCROLL TO CONTINUE READING

ಅಷ್ಟಕ್ಕೂ ‘ಲೈಗರ್’ ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್‌ ಶುರುವಾಗಿದೆ. ಆಗಸ್ಟ್ 25ರಂದು ಐದು ಭಾಷೆಗಳಲ್ಲಿ ಸಿನಿಮಾ ಮೆರವಣಿಗೆ ‌ಶುರುವಾಗಲಿದೆ. ಬಾಕ್ಸರ್ ಆಗಿ ಅಬ್ಬರಿಸಲಿರುವ ವಿಜಯ್ ದೇವರಕೊಂಡ ವಿರುದ್ಧ ವಿಶ್ ಎಂಬ ಯುವ ನಟ ತೊಡೆ ತಟ್ಟಿದ್ದಾರೆ. ‘ಪುರಿ ಕನೆಕ್ಟ್ಸ್ ಪ್ರೊಡಕ್ಷನ್ ಹೌಸ್‘ ಸಿಇಒ ಆಗಿ ಕೆಲಸ ಮಾಡಿರುವ, ಸಾಕಷ್ಟು ಸಿನಿಮಾಗಳಿಗೆ ತೆರೆ ಹಿಂದೆ ದುಡಿದಿರುವ ವಿಶ್ ಲೈಗರ್ ಮೂಲಕ ಬೆಳ್ಳಿತೆರೆಗೆ ಕೂಡ ಎಂಟ್ರಿ ಕೊಡ್ತಿದ್ದಾರೆ. ಬಾಕ್ಸಿಂಗ್ ರಿಂಗ್‌ನಲ್ಲಿ ವಿಶ್ ನಟ ವಿಜಯ್ ದೇವರಕೊಂಡ ವಿರುದ್ಧ ಫೈಟ್‌ ಮಾಡಲಿದ್ದಾರೆ.


ಇದನ್ನೂ ಓದಿ : Yuzvendra Chahal-Dhanashree : ಧನಶ್ರೀ, ಯುಜ್ವೇಂದ್ರ ಚಹಾಲ್ ದಾಂಪತ್ಯದಲ್ಲಿ ಬಿರುಕು..!


ಮೈಕ್ ಟೈಸನ್..!
ಅಷ್ಟಕ್ಕೂ ಪುರಿ ಕನೆಕ್ಟ್ಸ್ & ಧರ್ಮ ಪ್ರೊಡಕ್ಷನ್‌ ಅಡಿ ರೆಡಿಯಾಗಿರುವ ಪ್ಯಾನ್ ಇಂಡಿಯಾ ಚಿತ್ರ ‘ಲೈಗರ್’ಗೆ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ ವಿಜಯ್‌ಗೆ ಜೋಡಿಯಾಗಿ ಬಾಲಿವುಡ್‌ ಬ್ಯೂಟಿ ಅನನ್ಯ ಪಾಂಡೆ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲಿ ರಿಲೀಸ್‌ ಆಗುತ್ತೆ ‘ಲೈಗರ್’. ಈ ಚಿತ್ರದ ಮೂಲಕ ಹೊಸ ಸಾಹಸಕ್ಕೆ ಕೈಹಾಕಿರುವ ನಟ ವಿಜಯ್ ದೇವರಕೊಂಡ, ಮತ್ತೊಂದು ಬ್ಲಾಕ್‌ ಬಸ್ಟರ್‌ ನಿರೀಕ್ಷೆಯಲ್ಲಿದ್ದಾರೆ. ಬಾಕ್ಸಿಂಗ್ ಲೋಕದ ದಿಗ್ಗಜ ಮೈಕ್ ಟೈಸನ್ ‘ಲೈಗರ್’ ಸಿನಿಮಾದಲ್ಲಿ ನಟಿಸಿದ್ದು, ರಮ್ಯಾ ಕೃಷ್ಣ ದೇವರಕೊಂಡ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ಇದನ್ನೂ ಓದಿ : IND vs ZIM ಪಂದ್ಯದ Playing 11 ನಿಂದ ಶಾರ್ದುಲ್ ಠಾಕೂರ್ ಔಟ್!


ತಾರಗಣಕ್ಕೆ ರೋನಿತ್ ರಾಯ್, ವಿಶು ರೆಡ್ಡಿ, ಅಲಿ, ಮಕರಂದ್ ದೇಶ್ ಪಾಂಡೆ ಮತ್ತು ಗೆಟಪ್ ಶ್ರೀನು ಕೂಡ ‘ಲೈಗರ್’ಗೆ ಸಾಥ್‌ ನೀಡಿದ್ದಾರೆ. ಪುರಿ ಜಗನ್ನಾಥ್, ಚಾರ್ಮಿ ಕೌರ್, ಕರಣ್ ಜೋಹರ್, ಹಿರೂ ಯಶ್ ಜೋಹರ್, ಅಪೂರ್ವ ಮೆಹ್ತಾ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಪುರಿ ಕನೆಕ್ಟ್ಸ್ ಮತ್ತು ಧರ್ಮ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿಯಲ್ಲಿ ಸಿನಿಮಾ ಸಿದ್ಧವಾಗಿದೆ. ವಿಷ್ಣು ಶರ್ಮಾ ಕ್ಯಾಮರಾ ವರ್ಕ್‌ ‘ಲೈಗರ್’ ಸಿನಿಮಾಗೆ ಇದ್ದರೆ, ಜಾನಿ ಶೇಕ್ ಬಾಷಾ ಕಲಾ ನಿರ್ದೇಶಕ ಮಾಡಿದ್ದಾರೆ. ಒಟ್ಟಾರೆ ಸೌತ್‌ ಸಿನಿಮಾ ಇಂಡಸ್ಟ್ರಿಯಿಂದ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ಹೊರಬರುತ್ತಿದ್ದು, ಅಭಿಮಾನಿಗಳ ಕುತೂಹಲ ದುಪ್ಪಟ್ಟಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.