Ramesh Aravind : ಅಂದು ನಟ ರಮೇಶ್ ಅರವಿಂದ್‌ ತಮ್ಮ ನಟನೆ ಮೂಲಕ ಮನಗೆದ್ದಿದ್ದರೇ, ಇಂದು ನಟನೆ ಜೊತೆಗೆ ಉತ್ತಮ ನಿರೂಪಣೆ ಹಾಗೂ ತಮ್ಮ ಸ್ಫೂರ್ತಿದಾಯಕ ಮಾತುಗಳಿಂದ ಮನ ಗೆದಿದ್ದಾರೆ.


COMMERCIAL BREAK
SCROLL TO CONTINUE READING

ಇದೀಗ ಖ್ಯಾತ ನಟನಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ. ನಟ ರಮೇಶ್ ಅರವಿಂದ್‌ ಹಾಗೂ ಅವರ ಪತ್ನಿ ಅರ್ಚನಾ ಮದುವೆ ಆಗಿ ಇಂದು 32 ವರ್ಷದ ಸಂಭ್ರಮ. ಇದೀಗ ಮೂರು ಗಂಟು ನಂಟು, ದಾಂಪತ್ಯ ಜೀವನದ ಸವಿ ನೆನಪಿನ ಖುಷಿ ಕ್ಷಣವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.  


ಇದನ್ನೂ ಓದಿ: Viral photo: ನಟಸಾರ್ವಭೌಮ ಅಣ್ಣಾವ್ರು & ಕರ್ನಾಟಕ ರತ್ನ ಅಪ್ಪು, ರವರ ಅಪರೂಪದ ಫೋಟೊ ವೈರಲ್..!


1991ರ ಜುಲೈ 7ರಂದು ತಮ್ಮ ಅಮ್ಮೂಲ್ಯ ಪ್ರೀತಿಗೆ ಸಾಕ್ಷಿಯಾಗಿ ಅರ್ಚನಾರವನ್ನು ವಿವಾಹವಾದರು. ನಟ ನಿರ್ದೇಶಕನಾಗಿದ್ದರೂ ಇವರ ಪ್ರತಿ ಯಶಸ್ಸಿಗೆ ಇವರ ಪತ್ನಿಯೇ ಸಾಥ್‌ ಎಂದು ಹಲವಾರು ಸಂದರ್ಶನದಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: Kiccha Sudeep: ’ಕೋಟಿಗೊಬ್ಬ’ನ ಹೃದಯವಂತಿಕೆ..ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಕಿಚ್ಚ ಸುದೀಪ್


ರಮೇಶ್​ ಸ್ಟಾರ್​ ನಟನಾಗುವ ಮೊದಲೇ ಇವರಿಬ್ಬರ ನಡುವೆ ಉತ್ತಮ ಸ್ನೇಹ ಇತ್ತು ಎನ್ನಲಾಗಿದೆ. ಸ್ನೇಹ ಪ್ರೀತಿಯಾಗಿ,ಸಪ್ತಪದಿ ತುಳಿದು ನವದಾಂಪತ್ಯಕ್ಕೆ ಕಾಲಿಟ್ಟರು.


ನಟ ರಮೇಶ್‌ ಎಂದರೆ ಅನೇಕರಿಗೆ ಸ್ಫೂರ್ತಿಆಗಿದ್ದಾರೆ. ನಟನೆ, ಉತ್ತಮ ಮಾತುಗಾರಿಕೆ ಕನ್ನಡಿಗರಿಗೆ ಹತ್ತಿರವಾದ ನಟ. ಇಂದಿಗೂ ಅದೆಷ್ಟೂ ಅಭಿಮಾನಿಗಳು ಇವರ ಸಿನಿಮಾಕ್ಕಾಗಿ ಕಾಯುತ್ತಿರುತ್ತಾರೆ. ಅಷ್ಟರ ಮಟ್ಟಿಗೆ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.