Renukaswamy murder case : ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಸೆಕ್ಯುರಿಟಿ ನೀಡಿದ ದೂರಿನ ಅನ್ವಯ ಕೊಲೆ ಹಾಗೂ ಸಾಕ್ಷಿ ನಾಶ ಪ್ರಕರಣದ ಅಡಿಯಲ್ಲಿ ಕೇಸ್ ದಾಖಲಸಿಕೊಂಡಿದ್ದ ಪೋಲಿಸರು ಈಗ ಅದಕ್ಕೆ ಮತ್ತೆ ಎಂಟು ಸೆಕ್ಷನ್ ಗಳನ್ನ ಆಡ್ ಮಾಡಿ ಆರೋಪಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳೋಕೆ ಸಾಧ್ಯವಿಲ್ಲದಂತೆ ಮಾಡಿದ್ದಾರೆ. ಈ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ‌ಇಲ್ಲಿದೆ ನೋಡಿ.


COMMERCIAL BREAK
SCROLL TO CONTINUE READING

ಹೌದು... ರೇಣುಕಾಸ್ವಾಮಿ ಕೊಲೆಯಾದ ಕೊಲೆ ಹಾಗೂ ಸಾಕ್ಷಿ ನಾಶ ಮಾಡಿದ್ದಾರೆಂದು ಕಾಮಾಕ್ಷಿಪಾಳ್ಯ ಪೋಲಿಸರು IPC ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ರು. ಯಾವಾಗ ಆರೋಪಿಗಳು ಬಂದು ಸರೆಂಡರ್‌ ಆಗಿ ಕೊಲೆಯ ಹಿಂದಿನ ಅಸಲಿ ಸತ್ಯ ವನ್ನು ಬಾಯ್ಬಿಟ್ರೋ ಆಗ್ಲೆ ಖಾಕಿ ‌ಟೀಂ ನ ಅಸಲಿ ತನಿಖೆ ಶುರುವಾಯ್ತು. ಅದಕ್ಕೆ ಮತ್ತೆ ಎಂಟು ಸೆಕ್ಷನ್ ಆಡ್ ಮಾಡಿದ್ದಾರೆ.


ಇದನ್ನೂ ಓದಿ:ರಾಮ್ ಚರಣ್ ಪುತ್ರಿ ಕ್ಲಿಂಕಾರ ಕ್ಯೂಟ್‌ ಮುಖ ನೋಡಿದ್ದೀರಾ..? ವಿಡಿಯೋ ವೈರಲ್ 


ಸೆಕ್ಷನ್ 302 ಅಡಿಯಲ್ಲಿ ಕೊಲೆ, 364 ವ್ಯಕ್ತಿಯ ಅಪಹರಣ, 201 ಪ್ರಕರಣದಲ್ಲಿ ಸಾಕ್ಷಿ ನಾಶ, ಮತ್ತು 120 ಬಿ ಒಳಸಂಚು ಈ ನಾಲ್ಕು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯನ್ನು ನೀಡಲಾಗುತ್ತೆ. ಯಾಕೆಂದರೆ ಕಿಡ್ನಾಪ್ ಮಾಡಿ, ಕೊಲೆ ಮಾಡಿರುವ ಜೊತೆಗೆ ಸಾಕ್ಷಿ ಕೂಡ ನಾಶ ಮಾಡಿದ್ದಾರೆ ಒಳಸಂಚು ಮಾಡಿರುವ ಆರೋಪಿಗಳು ವ್ಯವಸ್ಥಿವಾಗಿ ಹತ್ಯೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.


ಇದರ ಜೊತೆಗೆ 143 ಸೆಕ್ಷನ್ ಕಾನೂನು ಬಾಹಿರವಾಗಿ ಅಕ್ರಮ ಕೂಟವನ್ನು ಮಾಡಿದ್ದಾರೆ. ಇದಕ್ಕೆ ಆರು ತಿಂಗಳ ಕಾಲ ಶಿಕ್ಷೆ ನೀಡಬಹುದು, ಸೆಕ್ಷನ್ 355 ಒತ್ತಡ ಹೇರಿ ಹತ್ಯೆ ಮಾಡಲಾಗಿದ್ದು 2 ವರ್ಷ ಜೈಲು ,147 ಗಲಭೆಯನ್ನು ಮಾಡಿದ್ದಾರೆಂದು ಎರಡು ವರ್ಷ, 148. ಮಾರಾಕ ಆಯುಧಗಳ ಬಳಕೆ ಮಾಡಲಾಗಿದ್ದು 3 ವರ್ಷಗಳ ಕಾಲ ಶಿಕ್ಷೆ ನೀಡಲಾಗುತ್ತದೆ.


ಇದನ್ನೂ ಓದಿ: ಪವಿತ್ರಾ ಪರಪ್ಪನ ಅಗ್ರಹಾರಕ್ಕೆ, ದರ್ಶನ್‌ ಪೊಲೀಸ್‌ ಕಸ್ಟಡಿಗೆ..! ಕೋರ್ಟ್ ಆದೇಶ


149 ಗುಂಪು ಸೇರಿ ಹಲ್ಲೆ ಮಾಡಿದ್ರೆ ಈ ಸೆಕ್ಷನ್ ದಾಖಲಿಸುತ್ತಾರೆ ಇದಕ್ಕೆ 2 ವರ್ಷಗಳ  ಕಾಲ‌ ಶಿಕ್ಷೆ ನೀಡಬಹುದಾದ ಸೆಕ್ಷನ್ ಆಗಿದೆ ಹಾಗೆಯೇ  ಮೃತ ವ್ಯಕ್ತಿಯ ಬಳಿ ಸುಲಿಗೆ ಮಾಡಿರುವ ಹಿನ್ನೆಲೆ 
ಸೆಕ್ಷನ್ 384‌ ದಾಖಲಿಸಿದ್ದು ಇದಕ್ಕೆ  ಕನಿಷ್ಠ ಮೂರು ವರ್ಷಗಳ ಕಾಲ‌ ಜೈಲು ಶಿಕ್ಷೆ ನೀಡಬಹುದಾಗಿದೆ.


ಒಟ್ಟಿನಲ್ಲಿ ಚಿತ್ರದುರ್ಗ ದಿಂದ ಕಿಡ್ನಾಪ್ ಮಾಡಿಕೊಂಡು‌ ಬಂದು ಮಾರಕ ಆಯುಧಗಳಿಂದ ಹಲ್ಲೆ ಮಾಡಿರೋದು ಸಾಭಿತಾಗಿದೆ. ಹಾಗಾಗಿ ಹತ್ತು ಸೆಕ್ಷನ್ ಗಳನ್ನ ಆ್ಯಡ್ ಮಾಡಲಾಗಿದೆ. ಇನ್ನೂ ಯಾವುದೇ ಕಾರಣಕ್ಕೂ ಆರೋಪಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳೋದು ಅಷ್ಟು ಸುಲಭವಲ್ಲ ಅನ್ನೋದಕ್ಕೆ ದಾಖಲಾಗಿರುವ ಸೆಕ್ಷನ್ ಗಳೇ ಸಾಕ್ಷಿಯಾಗಿವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.