ನವದೆಹಲಿ: ಬಾಲಿವುಡ್ ನಲ್ಲಿ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಈಗ ಬಹಳಷ್ಟು ಸುದ್ದಿಯಲ್ಲಿರುವ ಜೋಡಿ. ಆದರೆ ಅವರಿಬ್ಬರು ಸುದ್ದಿಯಲ್ಲಿರುವುದು ಸಿನಿಮಾ ವಿಚಾರವಾಗಿ ಅಲ್ಲ ಬದಲಾಗಿ ಡೇಟಿಂಗ್ ಸಲುವಾಗಿ ಎನ್ನುತ್ತಿವೆ ಬಾಲಿವುಡ್ ಮೂಲಗಳು.


COMMERCIAL BREAK
SCROLL TO CONTINUE READING

ಈ ಹಿಂದೆ ರಣಬೀರ್ ಕಪೂರ್  ದೀಪಿಕಾ ಪಡುಕೋಣೆ,ಹಾಗೂ ಕತ್ರಿನಾ ಕೈಫ್ ಜೊತೆ ಡೇಟಿಂಗ್ ನಡೆಸಿದ್ದನ್ನು ನಾವು ನೋಡಿದ್ದೇವೆ ಆದರೆ ಆ ಯಾವ ಜೋಡಿಯೂ ಸಹಿತ  ಬಹಳ ದಿನಗಳ ಕಾಲ ನಿಲ್ಲಲಿಲ್ಲ.ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ರಣಬೀರ್ ಅಲಿಯಾ ಭಟ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ರೂಮರ್ ಸಾಕಷ್ಟು ಹಬ್ಬಿದೆ, ಇದಕ್ಕೆ ಪೂರಕವಾಗಿ ಇತ್ತೀಚಿಗೆ GQ ಇಂಡಿಯಾ ನೀಡಿದ ಸಂದರ್ಶನದಲ್ಲಿ ಅವರು ಅಲಿಯಾ ಭಟ್ ಬಗ್ಗೆ ಮಾತನಾಡಿರುವುದನ್ನು ನೋಡಿದಾಗ ಇದಕ್ಕೆ ಇನ್ನಷ್ಟು ಪುಷ್ಟಿಯನ್ನು ಕೊಡುತ್ತದೆ. 


ರಣಬೀರ್ ಕಪೂರ್ ಸಂದರ್ಶನದಲ್ಲಿ ಮಾತನಾಡುತ್ತಾ" ಒಬ್ಬ ನಟಿಗೆ ವ್ಯಕ್ತಿಗೆ ಅಲಿಯಾ ಎನ್ನುವುದು ಸರಿಯಾದ ಪದವಾಗಿ ಚಾಲ್ತಿಯಲ್ಲಿರುವುಂತದ್ದು.ನಾನು ಅವಳ ಕಾರ್ಯವನ್ನು, ನಟನೆಯನ್ನು, ಮತ್ತು ಜೀವನವನ್ನು  ನೋಡುತ್ತಿರುವಾಗ ಅವಳು ನಾನು ಕೂಡ ಅದರ ಬಗ್ಗೆ ಚಿಂತಿಸುವ ಹಾಗೆ ಮಾಡುತ್ತಾಳೆ" ಎಂದು ಮಾತನಾಡಿದ್ದರು.ಇದೇ ವೇಳೆ ಅವರು ಡೇಟಿಂಗ್  ಕುರಿತಾಗಿ ಮಾತನಾಡುತ್ತ" ಇದು ನಮಗೆ ಹೊಸದು ಕೆಲವು ದಿನಗಳ ಕಾಲ ಹೀಗೆ ಇರಲಿ" ಎನ್ನುವಂತೆ ಮಾತನಾಡಿದ್ದರು.