Dua Padukone : ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಆರು ವರ್ಷಗಳ ದಾಂಪತ್ಯ ಪಯಣದಲ್ಲಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಸುಂದರ ಹೆಣ್ಣು ಮಗುವಿಗೆ ಪೋಷಕರಾದರು. ದೀಪಾವಳಿಯ ಸಂಭ್ರಮದಲ್ಲಿ ಈ ಜೋಡಿ ಜೋಡಿ ತಮ್ಮ ಮಗಳಿಗೆ ಹೆಸರಿಟ್ಟಿದ್ದಾರೆ. ಈ ಕುರಿತ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ..


COMMERCIAL BREAK
SCROLL TO CONTINUE READING

ದೀಪಿಕಾ ರಣವೀರ್‌ ಜೋಡಿ ತಮ್ಮ ಮದಳಿಗೆ ದುವಾ ಪಡುಕೋಣೆ ಸಿಂಗ್ ಎಂದು ಹೆಸರಿಸಿದ್ದಾಗಿ ಬಹಿರಂಗಪಡಿಸಿದರು. 'ದುವಾ ಎಂದರೆ ಪ್ರಾರ್ಥನೆ. ಆಲಿಯಾ ಭಟ್, ಮಮಿತಾ ಬೈಜು, ಶಾಲಿನಿ ಪಾಂಡೆ ಸೇರಿದಂತೆ ಇತರ ಚಿತ್ರರಂಗದ ಸ್ನೇಹಿತರು, ಅಭಿಮಾನಿಗಳು ಮತ್ತು ನೆಟಿಜನ್‌ಗಳು ದೀಪ್‌ವೀರ್‌ ದಂಪತಿಗೆ ಶುಭಹಾರೈಸಿದ್ದಾರೆ.


ಇದನ್ನೂ ಓದಿ:ಬಿಗ್‌ ಬಾಸ್‌ ನಲ್ಲಿ ಮಿಡ್‌ ವೀಕ್‌ ಎಲಿಮಿನೇಷನ್‌! ಸ್ಟ್ರಾಂಗ್‌ ಕಂಟೆಸ್ಟಂಟ್‌ ರಾತ್ರೋ ರಾತ್ರಿ ಮನೆಯಿಂದ ಔಟ್?


ಇದರ ನಡುವೆ ʼದುವಾʼ ಎನ್ನುವ ಹೆಸರಿನ ವಿಚಾರವಾಗಿ ಕೆಲ ನೆಟಿಜನ್‌ಗಳು ದೀಪಿಕಾ ದಂಪತಿಯನ್ನು ಟ್ರೋಲ್ ಮಾಡುತ್ತಿದ್ದಾರೆ. ಕೆಲವರು ಮಗಳಿಗೆ ಇಸ್ಲಾಮಿಕ್ ಹೆಸರಿಟ್ಟಿದ್ದು ಸರಿಯಲ್ಲ ಅಂತ ಕಾಮೆಂಟ್‌ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಿಂದೂ ಪೋಷಕರಾಗಿ, ಮಗಳಿಗೆ ಪ್ರಾರ್ಥನಾ ಎಂದು ಹೆಸರಿಡಬಹುದಿತ್ತು..? ಬೇರೆ ಹಿಂದೂ ಹೆಸರನ್ನು ಇಡಬೇಕು ಅಂತ ನಿಮಗೆ ಅನಿಸಲಿಲ್ಲವೇ..? ಎಂದು ನೆಟಿಜನ್‌ಗಳು ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ..


ಇದೇ ವೇಳೆ ಕೆಲವು ನೆಟ್ಟಿಗರು ತಮ್ಮ ಮಕ್ಕಳಿಗೆ ಹೆಸರಿಡುವುದು ಪೋಷಕರ ನಿರ್ಧಾರ, ಇದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಟ್ರೋಲರ್‌ಗಳಿಗೆ ಪ್ರತಿಕ್ರಿಯಿಸುತ್ತಿದ್ದಾರೆ. ಒಟ್ಟಾರೆಯಾಗಿ ದೀಪಿಕಾ ಪಡುಕೋಣೆ ಮಗಳ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ