ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ (Rashmika Mandanna) ಅಂದರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಅತೀ ಕಡಿಮೆ ಸಮಯದಲ್ಲಿಯೇ ಯಶಸ್ಸು ಕಂಡಿರುವ ನಟಿ. ಕನ್ನಡದ ಕಿರಿಕ್‌ ಪಾರ್ಟಿ (Kirik Party) ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಇವರು ಇದೀಗ ತೆಲುಗು, ಹಿಂದಿ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Kiccha Sudeep: ನಟ ಸುದೀಪ್ ನೋಡಲು ಕಲಬುರಗಿಯಿಂದ ನಡೆದುಕೊಂಡೇ ಬಂದ ಅಭಿಮಾನಿಗಳು..!


ಸದಾ ಸೋಷಿಯಲ್‌ ಮೀಡಿಯಾದಲ್ಲಿ (Social Media) ರಶ್ಮಿಕಾ ಆಕ್ಟಿವ್‌ ಆಗಿರುತ್ತಾರೆ. ಅಲ್ಲದೇ ಫ್ಯಾನ್ಸ್‌ಗೆ ಒಂದಿಲ್ಲೊಂದು ರೀತಿ ರಂಜಿಸುತ್ತಿರುತ್ತಾರೆ. ಪ್ಯಾನ್ ಇಂಡಿಯಾ (Pan India) ಸ್ಟಾರ್ ಆಗಿ ಹೊರ ಹೊಮ್ಮಿರುವ ರಶ್ಮಿಕಾ ಎಲ್ಲೇ ಹೋದರೂ ಅವರನ್ನು ಅಭಿಮಾನಿಗಳು ಫಾಲೋ ಮಾಡುತ್ತಾರೆ. 


ಕ್ಯಾಮೆರಾ ಕಂಡರೆ ವಿಭಿನ್ನವಾಗಿ ಪೋಸ್‌ ನೀಡುವ ರಶ್ಮಿಕಾ, ಒಂದು ವಿಶಿಷ್ಟವಾಗಿ ಕೈ ಸನ್ನೆ ಮಾಡುತ್ತಾರೆ. ರಶ್ಮಿಕಾ (Kannada Actress) ಹೆಬ್ಬೆರಳು ಹಾಗೂ ತೋರು ಬೆರಳನ್ನು ಸೇರಿಸಿ ವಿಶಿಷ್ಟವಾದ ಸಿಂಬಲ್ ತೋರಿಸುತ್ತಾರೆ. ಅಷ್ಟಕ್ಕೂ ರಶ್ಮಿಕಾ ತೋರುವ ಈ ಕೈ ಸನ್ನೆಯ ಅರ್ಥವೇನು? ಎಂದು ಹಲವರು ಯೋಚಿಸುತ್ತಾರೆ. 


ಇದನ್ನೂ ಓದಿ: ‘ಹೊಂದಿಸಿ ಬರೆಯಿರಿ’ ಟೀಸರ್ ರಿಲೀಸ್! ನಿಮ್ಮ ವಿದ್ಯಾರ್ಥಿ ಜೀವನ ನೆನಪಿಸುತ್ತೆ ಈ ಕತೆ


ರಶ್ಮಿಕಾ ತೋರಿಸುವ ಕೈ ಸನ್ನೆಯ ಅರ್ಥ ' ಐ ಲವ್ ಯೂ' ಅಂತೆ. ಈ ಸನ್ನೆಯನ್ನು ' ಐ ಪರ್ಪಲ್‌ ಯೂ' ಅಂತನೂ ಹೇಳುತ್ತಾರಂತೆ. ಇದಕ್ಕಾಗಿಯೇ ಅಭಿಮಾನಿಗಳಿಗೆ ರಶ್ಮಿಕಾ ಈ ರೀತಿ ಕೈ ಸನ್ನೆ ತೋರುತ್ತಾರೆ ಎಂದು ಹೇಳಲಾಗ್ತಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.