Kendasampige Serial Kavya Shaiva : ಕೆಂಡಸಂಪಿಗೆ ಧಾರಾವಾಹಿ ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಸೀರಿಯಲ್ ಗಳಲ್ಲಿ ಒಂದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯಲ್ಲಿ ಇದೀಗ ದೊಡ್ಡ ಬದಲಾವಣೆಯಾಗಿದ್ದು, ಅಚ್ಚರಿಗೆ ಕಾರಣವಾಗಿದೆ.


COMMERCIAL BREAK
SCROLL TO CONTINUE READING

ಹೌದು.. ಈ ಧಾರಾವಾಹಿಯಲ್ಲಿ ಸುಮನಾ ಪಾತ್ರ ಮಾಡುತ್ತಿದ್ದ ಕಾವ್ಯ ಶೈವ ಏಕಾಏಕಿ ಸೀರಿಯಲ್ ನಿಂದ ಹೊರಬಂದಿದ್ದು ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ರೋಚಕ ಹಂತ ತಲುಪಿರುವ ಸಿರೀಯಲ್ ನಲ್ಲಿ ಇತ್ತೀಚಿಗೆ ಉಂಟಾದ ಬದಲಾವಣೆ ಅಭಿಮಾನಿಗಳಿಗೆ ಅರ್ಥವಾಗದ ಪ್ರಶ್ನೆಯಂತಾಗಿದೆ.


ಇದನ್ನೂ ಓದಿ:ಸೂಪರ್ ಸ್ಟಾರ್ ಮಗಳು.. ಆ್ಯಕ್ಷನ್ ಹಿರೋ ಸಹೋದರಿ.. ಗ್ಲಾಮರ್‌ನಲ್ಲಿ ನಟಿಯರನ್ನೇ ಸೋಲಿಸುವ ಚೆಲುವೆ ಈಕೆ!!


ಇಷ್ಟು ದಿನ ಸುಮನಾ ಪಾತ್ರಕ್ಕೆ ನಟಿ ಕಾವ್ಯ ಶೈವ ಜೀವ ತುಂಬಿದ್ದರು. ಆದರೆ ಇದೀಗ ಅವರು ತಮ್ಮ ಪಾತ್ರಕ್ಕೆ ಗುಡ್ ಬೈ ಹೇಳಿ, ‘ಕೆಂಡಸಂಪಿಗೆ’ ಧಾರಾವಾಹಿಯಿಂದ ಹೊರಬಂದಿದ್ದಾರೆ. ಇನ್ನು ಸುಮನಾ ಈ ಸಿರೀಯಲ್ ನಿಂದ ಹೊರ ಬರಲು ನಿರ್ಮಾಪಕರು ಮತ್ತು ಕಾವ್ಯ ಅವರ ನಡುವೆ ಇದ್ದ ವೈಮನಸ್ಸು ಕಾರಣ ಎಂದು ಮೂಲಗಳಿಂದ ತಿಳಿದು ಬಂದಿದೆ..


ಅಲ್ಲದೆ ಧಾರಾವಾಹಿಯ ಚಿತ್ರೀಕರಣದ ವೇಳೆ ಕಾವ್ಯ ನಡೆದುಕೊಳ್ಳುವ ರೀತಿ ಹಾಗೂ ಅವರ ಒರಟು ನಡುವಳಿಕೆಯೇ ಈ ಬದಲಾವಣೆಗೆ ಕಾರಣ ಎನ್ನಲಾಗಿದೆ.. ಆದರೆ ಈ ಕುರಿತು ನಟಿಯಾಗಲಿ ನಿರ್ದೇಶಕ, ನಿರ್ಮಾಪಕರಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಎನ್ನುವುದೇ ವಿಪರ್ಯಾಸ.


ಇದನ್ನೂ ಓದಿ:ಬಾಲಿಯಲ್ಲಿ ಹನಿಮೂನ್‌ ಎಂಟಾಯ್‌ ಮಾಡುತ್ತಿರುವ ʻನನ್ನರಸಿ ರಾಧೆʼ ಸೀರಿಯಲ್‌ ಸುಂದರಿ!!


ಇದೀಗ ಸುಮನಾ ಪಾತ್ರದಲ್ಲಿ 'ಜೇನುಗೂಡು’ ಸೀರಿಯಲ್‌ ಖ್ಯಾತಿಯ, ರಂಗಭೂಮಿ ಕಲಾವಿದೆ ಮಧುಮಿತ ಕಾಣಿಸಿಕೊಂಡಿದ್ದಾರೆ. ಬಿಗ್ ಸ್ಕ್ರೀನ್ ಮೇಲೆ ದಿಗ್ಗಜ ನಟರ ಜೊತೆ ನಟಿಸಿದ ಅನುಭವ ಇರುವ ನಟಿ ಸುಮನಾ ಪಾತ್ರಕ್ಕೆ ಜೀವ ತುಂಬುವ ನಿರೀಕ್ಷೆ ಹೆಚ್ಚಿದೆ. ಮಧುಮಿತ ಪುನೀತ್ ರಾಜ್ ಕುಮಾರ್ ನಟನೆಯ ‘ಯುವರತ್ನ’ ಚಿತ್ರದಲ್ಲಿ  ಕಾಣಿಸಿಕೊಂಡಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.