ನವದೆಹಲಿ: ಶತ್ರುಘ್ನ ಸಿನ್ಹಾ ಅವರು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಬಿಟ್ಟು ಕಾಂಗ್ರೆಸ್ ಗೆ ಎಪ್ರಿಲ್ 6 ರಂದು ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ.ಈಗ ತಂದೆ ನಿರ್ಧಾರಕ್ಕೆ ಮಗಳು ಸೋನಾಕ್ಷಿ ಸಿನ್ಹಾ ಈಗ ಬೆಂಬಲ ವ್ಯಕ್ತಪಡಿಸಿದ್ದಾಳೆ.



COMMERCIAL BREAK
SCROLL TO CONTINUE READING

ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಪ್ರತಿಕ್ರಿಯಿಸಿದ ಸೋನಾಕ್ಷಿ ಸಿನ್ಹಾ "ಇದು ಅವರ ಆಯ್ಕೆ, ನಿಮಗೆ ಎಲ್ಲಿ ಸಂತಸದಿಂದ ಇರಲು ಆಗುವುದಿಲ್ಲವೋ ಆಗ ಬದಲಾವಣೆಯನ್ನು ತರಬೇಕು,ಈಗ ಅವರು ಕೂಡ ಅದನ್ನೇ ಮಾಡಿದ್ದಾರೆ.ಕಾಂಗ್ರೆಸ್ ಜೊತೆಗಿನ ಈ ಹೊಸ ಸಾಂಗತ್ಯದೊಂದಿಗೆ ಅವರು ಇನ್ನು ಹೆಚ್ಚು ಕೆಲಸ ನಿರ್ವಹಿಸಲಿದ್ದಾರೆ ಎಂದು ನಾನು ಆಶಿಸುತ್ತೇನೆ" ಎಂದು ತಂದೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದರು.


ಬಿಜೆಪಿ ಯಾವಾಗ ಶತ್ರುಘ್ನ ಸಿನ್ಹಾ ಅವರಿಗೆ ಟಿಕೆಟ್ ನಿರಾಕರಿಸಿತೋ ಆಗ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಇಚ್ಛೆ ವ್ಯಕ್ತಪಡಿಸಿದರು.ಇದಾದನಂತರ ಸುದ್ದಿಗಾರೊಂದಿಗೆ ಮಾತನಾಡುತ್ತಾ " ನಾನು ಸದ್ಯದಲ್ಲೇ  ಪಕ್ಷಕ್ಕೆ ಸೇರ್ಪಡೆ ಆಗಲಿದ್ದೇನೆ, ನವರಾತ್ರಿ ವೇಳೆ ನಾನು ನಿಮಗೆ ಸಕಾರಾತ್ಮಕ ಸುದ್ದಿಯನ್ನು ನೀಡುತ್ತೇನೆ ಎಂದು ಸಿನ್ಹಾ ಹೇಳಿದರು.