Puneeth Rajkumar granite business: ನಟ ಪವರ್‌ಸ್ಟಾರ್ ಪುನೀತ್ ರಾಜ್​ಕುಮಾರ್ ಕೇವಲ ನಟಾಗಿರಲಿಲ್ಲ. ಉದ್ಯಮದ ಕಡೆಗೂ ಅವರಿಗೆ ಬಹುದೊಡ್ಡ ಆಸಕ್ತಿ ಇತ್ತು. ʼಅಪ್ಪುʼಗೆ ನಟನಾಗಬೇಕೆನ್ನುವ ಆಸೆಯೇ ಇರಲಿಲ್ಲವಂತೆ. ಅವರು ಉದ್ಯಮದ ಕಡೆ ಹೆಚ್ಚು ಗಮನ ಹರಿಸಬೇಕು ಎಂದುಕೊಂಡಿದ್ದರಂತೆ. ಆರಂಭದಲ್ಲಿ ಅವರು ಗ್ರಾನೈಟ್ ಬಿಸ್ನೆಸ್ ಮಾಡುತ್ತಿದ್ದರು. ಇದನ್ನು ಸ್ವತಃ ಪುನೀತ್‌ ಅವರೇ ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಆರಂಭದಲ್ಲಿ ನಟನಾಗಬೇಕೆನ್ನುವ ಆಸೆ ಹೊಂದಿರದ ಪುನೀತ್‌ ಅವರಿಗೆ ಏನಾದರೂ ದೊಡ್ಡ ಬ್ಯುಸಿನೆಸ್‌ ಮಾಡಬೇಕು ಅನ್ನೋ ಆಸೆ ಇತ್ತು. ಹೀಗಾಗಿಯೇ ಅವರು ಗ್ರಾನೈಟ್‌ ಬಿಸ್ನೆಸ್‌ಗೆ ಕೈಹಾಕಿದ್ದರು. ಆದರೆ ಆ ಬ್ಯುಸಿನೆಸ್‌ ಹೇಳಿಕೊಳ್ಳುವ ಲಾಭ ನೀಡಿರಲಿಲ್ಲ. ಪುನೀತ್‌ ರಾಜ್‌ಕುಮಾರ್‌ ಅವರ ಈ ಗ್ರಾನೈಟ್‌ ಬ್ಯುಸಿನೆಸ್‌ ವಿಚಾರದಲ್ಲಿ ವರನಟ ಡಾ.ರಾಜ್‌ಕುಮಾರ್‌ ಅವರ ನಿಲುವು ಏನಿತ್ತು..? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...


COMMERCIAL BREAK
SCROLL TO CONTINUE READING

ನಟ ಪುನೀತ್ ರಾಜ್​ಕುಮಾರ್ ಅವರು ಇಂದು ನಮ್ಮೊಂದಿಗಿಲ್ಲ. ಅವರನ್ನು ಕಳೆದುಕೊಂಡು 3 ವರ್ಷಗಳು ಕಳೆದಿವೆ. ಅವರನ್ನು ಲಕ್ಷಾಂತರ ಅಭಿಮಾನಿಗಳು ಇಂದಿಗೂ ನೆನಪಿಸಿಕೊಳ್ಳುತ್ತಿರುತ್ತಾರೆ. ಪುನೀತ್ ಅವರು ಅಕ್ರಮವಾಗಿ ಗ್ರ್ಯಾನೇಟ್ ಬಿಸ್ನೆಸ್ ಮಾಡುತ್ತಿದ್ದರಂತೆ. ಈ ಕಾರಣಕ್ಕೆ ಅವರ ತಂದೆ ರಾಜ್​ಕುಮಾರ್‌ರನ್ನು ಕಿಡ್ನಾಪ್ ಮಾಡಲಾಗಿತ್ತು ಅನ್ನೋ ಆರೋಪ ಇತ್ತು. ಇದಕ್ಕೆ ಸ್ವತಃ ಪುನೀತ್ ಅವರೇ ಅನೇಕ ಬಾರಿ ಸ್ಪಷ್ಟನೆ ನೀಡಿದ್ದರು.


ಇದನ್ನೂ ಓದಿ: ಅಪ್ಪು ಸಿನಿಮಾಗೆ ಪುನೀತ್‌ ರಾಜ್‌ಕುಮಾರ್‌ ಪಡೆದಿದ್ದ ಸಂಭಾವನೆ ಎಷ್ಟು? ಆ ಹಣವನ್ನು ಅವರು ಏನ್‌ ಮಾಡಿದ್ರು ಗೊತ್ತಾ?


ಪುನೀತ್ ರಾಜ್‌ಕುಮಾರ್‌ ಅವರು ನಟನೆ ಬದಲು ಉದ್ಯಮದ ಕಡೆ ಹೆಚ್ಚು ಗಮನ ಹರಿಸಬೇಕು ಎಂದುಕೊಂಡಿದ್ದರಂತೆ. ಅವರೇ ಆರಂಭಿಸಿದ 'PRK' ನಿರ್ಮಾಣ ಸಂಸ್ಥೆ ಈಗಲೂ ಕಾರ್ಯನಿರ್ವಹಿಸುತ್ತಿದೆ. ತಮ್ಮ ವಿರುದ್ಧ ಕೇಳಿಬಂದಿದ್ದ ಗಂಭೀರ ಆರೋಪದ ಬಗ್ಗೆ ಪುನೀತ್ ಮಾತನಾಡಿದ್ದರು. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್‌ ಆಗುತ್ತಿದೆ. ಪುನೀತ್ ಅವರು ಗ್ರಾನೈಟ್ ಬಿಸ್ನೆಸ್ ಮಾಡುತ್ತಿದ್ದರು. ಹೀಗಾಗಿ ರಾಜ್​ಕುಮಾರ್​ ಅವರನ್ನು ಕಾಡುಗಳ್ಳ ವೀರಪ್ಪನ್ ಕಿಡ್ನಾಪ್‌ ಮಾಡಿದ್ದರು ಅಂತಾ ಆರೋಪಿಸಲಾಗಿತ್ತು.


ಈ ಬಗ್ಗೆ ಮಾತನಾಡಿದ್ದ ನಟ ಪುನೀತ್‌ ಅವರು, ʼನಮ್ಮ ತಂದೆಯವರು ಅರೆಸ್ಟ್ ಆದಾಗ ಅನೇಕ ಸುದ್ದಿಗಳು ಹರಿದಾಡಿದ್ದವು. ನಾನು ಗ್ರಾನೈಟ್ ಬಿಸ್ನೆಸ್ ಮಾಡುತ್ತಿದ್ದೆ. ಅದಕ್ಕಾಗಿ ನಮ್ಮ ತಂದೆಯನ್ನು ವೀರಪ್ಪನ್ ಹಿಡಿದುಕೊಂಡು ಹೋದರು ಎಂಬ ಸುದ್ದಿ ಹರಿದಾಡಿತ್ತು. ಇದೇ ರೀತಿಯ ಹಲವಾರು ಗಾಳಿಸುದ್ದಿಗಳು ಬಂದಿದ್ದವುʼ ಎಂದಿದ್ದರು. ʼನಾನು ಗ್ರಾನೈಟ್ ಬಿಸ್ನೆಸ್ ಮಾಡಲು ಮುಂದಾಗಿದ್ದೆ. ಆಗ ಇದು ಅಕ್ರಮ ಗ್ರಾನೈಟ್ ಬಿಸ್ನೆಸ್ ಎಂದು ನನ್ನ ಫೋಟೋ ಪೇಪರ್​ನಲ್ಲಿ ಸಹ ಬಂದಿತ್ತು. ಏಕೆ ಈ ರೀತಿ ಹಾಕುತ್ತಿದ್ದಾರೆ ಎಂದುಕೊಳ್ಳುತ್ತಿದ್ದೆ. ನನ್ನ ಬಿಸ್ನೆಸ್ ಅದು, ಅದು ಅಕ್ರಮವೇ ಆಗಿದ್ದರೆ ಕಾನೂನಿದೆ. ಹೊರಗಡೆ ಇದ್ದವರು ಕಾಮೆಂಟ್‌ ಮಾಡುವುದು ಏಕೆ ಅಂತಾ ನನ್ನ ಮನಸ್ಸಿಗೆ ಅನಿಸಿತ್ತುʼ ಎಂದು ಪುನೀತ್‌ ಬೇಸರ ವ್ಯಕ್ತಪಡಿಸಿದ್ದರು.


ಇದನ್ನೂ ಓದಿ: ಬಾಲನಟನಾಗಿ ಜಗಮೆಚ್ಚುವ ಸಾಧನೆ..ಹತ್ತನೇ ವಯಸ್ಸಿನಲ್ಲಿಯೇ ನ್ಯಾಷನಲ್‌ ಅವಾರ್ಡ್‌ ಗೆದ್ದುಕೊಂಡಿದ್ದರು ಅಪ್ಪು..ಯಾವ ಸಿನಿಮಾಗೆ ಗೊತ್ತಾ..?


ʼಯಾರೋ ಹೀಗೆ ಹೇಳಿದ್ರೂ ತೊಂದರೆ ಇಲ್ಲ. ಆದರೆ ನನ್ನ ತಂದೆಯವರ ಅಪಹರಣ ಆದಾಗ ಅನೇಕರು ಇದನ್ನು ಅದಕ್ಕೆ ಲಿಂಕ್ ಮಾಡಿದಾಗ ನನಗೆ ಸಿಕ್ಕಾಪಟ್ಟೆ ನೋವಾಗಿತ್ತು. ನಾನು ಬಿಸ್ನೆಸ್ ಮಾಡ್ತಾ ಇದ್ದಿದ್ದು ಕನಕಪುರದಲ್ಲಿ. ನನಗೇನು ಬುದ್ಧಿ ಇಲ್ವಾ. ಕುಟುಂಬದವರಿಗೆ ಸತ್ಯ ಏನು ಎಂಬುದು ಗೊತ್ತಿತ್ತು' ಅಂತಾ ಪುನೀತ್‌ ಹೇಳಿದ್ದರು. ಈ ರೀತಿಯ ಸುದ್ದಿಯಿಂದ ಬೇಸರಗೊಂಡಿದ್ದ ರಾಜ್​ಕುಮಾರ್ ಅವರು ಇದೆಲ್ಲವನ್ನೂ ನಿಲ್ಲಿಸುವಂತೆ ಒಮ್ಮೆ ಪುನೀತ್​ ಅವರಿಗೆ ಕೋರಿಕೊಂಡಿದ್ದರಂತೆ.


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.