ನವದೆಹಲಿ: ಬಾಲಿವುಡ್ ನಲ್ಲಿ ಶಾರುಕ್ ಖಾನ್ ಹಾಗೂ ಕಾಜೋಲ್ ಜೋಡಿ ಹಲವು ಹಿಟ್ ಚಿತ್ರಗಳನ್ನು ನೀಡಿದೆ. ಈ ಸೂಪರ್ ಹಿಟ್ ಜೋಡಿಗೆ ಅಭಿಮಾನಿಗಳ ಸಂಖ್ಯೆಯೂ ಕೂಡ ಅಪಾರ. ರೀಲ್ ಲೈಫ್ ಜೊತೆಗೆ ರಿಯಲ್ ಲೈಫ್ ನಲ್ಲಿಯೂ ಕೂಡ ಕಾಜೋಲ್ ಹಾಗೂ ಶಾರುಖ್ ಉತ್ತಮ ಸ್ನೇಹಿತರಾಗಿದ್ದಾರೆ. ಇಂದು ಕಾಜೋಲ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ತನ್ನ ಅಭಿಮಾನಿಗಳಿಗಾಗಿ #AskKajol ಶೇಷನ್ ಆಯೋಜಿಸಿದ್ದರು. ತನ್ಮೂಲಕ ಅಭಿಮಾನಿಗಳು ಕೇಳಿರುವ ಪ್ರತಿಯೊಂದು ಪ್ರಶ್ನೆಗಳಿಗೂ ಲೈವ್ ಆಗಿ ಉತ್ತರ ನೀಡಿದ್ದಾಳೆ. ಅಷ್ಟೇ ಅಲ್ಲ ಅಭಿಮಾನಿಗಳೂ ಕೂಡ ತಮ್ಮ ನೆಚ್ಚಿನ ನಟಿಗೆ ಖಾಸಗಿ ಜೀವನಕ್ಕೆ ಸಂಬಂಧಿಸಿದಂತೆ ಹಲವು ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ವೇಳೆ ಕಾಜೋಲ್ ಅವರ ಅಭಿಮಾನಿಯೊಬ್ಬ ಶಾರುಕ್ ಖಾನ್ ಅವರಲ್ಲಿ ನಿಮಗೆ ಹೆಚ್ಚು ಇಷ್ಟವಾಗುವ ಸಂಗತಿ ಯಾವುದು? ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರ ನೀಡಿರುವ ಕಾಜೋಲ್, " ಶಾರುಕ್ ಅವರ ಎನರ್ಜಿ ನನಗೆ ಹೆಚ್ಚು ಇಷ್ಟ" ಎಂದು ಹೇಳಿದ್ದಾಳೆ.



ಮತ್ತೋರ್ವ ಅಭಿಮಾನಿ ಕಾಜೋಲ್ ಗೆ ಅಡುಗೆ ಮಾಡುವುದರ ಕುರಿತು ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ತುಂಬಾ ಜಾಣ್ಮೆಯಿಂದ ಉತ್ತರಿಸಿರುವ ಕಾಜೋಲ್, "ನನಗೆ ಅಡುಗೆ ಮಾಡಲು ಬರುವುದಿಲ್ಲ ಆದರೆ, ನನಗೆ ಊಟ ಮಾಡುವುದು ಇಷ್ಟ. ನಾನು ಇಷ್ಟ ಪಡುವ ಮತ್ತು ಪ್ರೀತಿಸುವ ಕೆಲಸಗಳನ್ನು ಮಾಡುತ್ತೇನೆ ಮತ್ತು ಪ್ರತಿನಿತ್ಯ ಮಾಡುತ್ತೇನೆ" ಎಂದು ಹೇಳಿದ್ದಾಳೆ.




ಟ್ವಿಟ್ಟರ್ ಖಾತೆಯಲ್ಲಿ ಕಾಜೋಲ್ ನಡೆಸಿಕೊಟ್ಟ ಈ ಪ್ರಶ್ನೋತ್ತರ ಶೇಷನ್ ಬಳಿಕ ಟ್ವಿಟ್ಟರ್ ನಲ್ಲಿ #AskKajol ಭಾರಿ ಟ್ರೆಂಡ್ ಹುಟ್ಟುಹಾಕಿದೆ. ಇದರಿಂದ ಕಾಜೋಲ್ ಅವರ ಅಭಿಮಾನಿಗಳು ಅವರ ಜೊತೆಗೆ ಮಾತನಾಡಲು ಎಷ್ಟೊಂದು ಇಷ್ಟ ಪಡುತ್ತಾರೆ ಎಂಬುದನ್ನು ನೀವು ಇದರಿಂದ ಅಂದಾಜಿಸಬಹುದು.