ನವದೆಹಲಿ : ಮುಂಬೈ ಡ್ರಗ್ಸ್‌ ಪಾರ್ಟಿ ಪ್ರಕರಣಕ್ಕೆ (Mumbai drugs party) ಸಂಬಂಧಿಸಿದಂತೆ,  ಮುಂಬೈ ನ  NCB ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan), ಸೇರಿದಂತೆ  ಅನೇಕರನ್ನು ಬಂಧಿಸಿತ್ತು. ಇದಾದ ನಂತರ ಆರೋಪಿಗಳ ಜಾಮೀನಿಗಾಗಿ ಹರಸಾಹಸ ಪಡುವಂತಾಯಿತು. ಈ ಮಧ್ಯೆ,   ಆರ್ಯನ್ ಖಾನ್‌ ಬಂಧನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ನಟ ಶಾರುಖ್ ಖಾನ್ (Shah rukh Khan) ಅವರಿಗೆ ಪತ್ರ ಬರೆದಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ಇಡೀ ದೇಶ ನಿಮ್ಮೊಂದಿಗಿದೆ ಎಂದ ರಾಹುಲ್ ಗಾಂಧಿ :
ಆ ಪತ್ರದಲ್ಲಿ ರಾಹುಲ್ ಗಾಂಧಿ (Rahul Gandhi) ಶಾರುಖ್ ಖಾನ್ ಅವರಿಗೆ ಸಾಂತ್ವನ ಹೇಳಿದ್ದು, ಇಡೀ ದೇಶವೇ ನಿಮ್ಮೊಂದಿಗಿದೆ ಎಂದು ಹೇಳಿದ್ದಾರೆ. ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಈ ಪತ್ರವನ್ನು ಆರ್ಯನ್ (Aryan Khan) ಕಸ್ಟಡಿಯಲ್ಲಿದ್ದ ವೇಳೆ ಬರೆಯಲಾಗಿದೆ. 


ಇದನ್ನೂ ಓದಿ : Vijay Sethupathi : ಬೆಂಗಳೂರು ಏರ್ಪೋರ್ಟ್ ನಲ್ಲಿ ತಮಿಳು ನಟ ವಿಜಯ್ ಸೇತುಪತಿ ಸಹಾಯಕನ ಮೇಲೆ ಹಲ್ಲೆ, Video ವೈರಲ್


ಮುಂದುವರಿದಿದೆ ಎನ್‌ಸಿಬಿ ತನಿಖೆ:
ಅಕ್ಟೋಬರ್ 2 ರಂದು, NCB ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್,  ಅರ್ಬಾಜ್ ಮತ್ತು ಮುನ್ಮುನ್ ಧನೋಚಾ ಅವರನ್ನು ವಶಕ್ಕೆ ಪಡೆದಿತ್ತು. ಸೆಷನ್ಸ್ ಕೋರ್ಟ್ ಆರ್ಯನ್ ಖಾನ್ ಅವರ ಜಾಮೀನು ಅರ್ಜಿಯನ್ನು ಎರಡು ಬಾರಿ ತಿರಸ್ಕರಿಸಿತ್ತು. ಈ ವಿಚಾರದಲ್ಲಿ ಕೇಂದ್ರ ಏಜೆನ್ಸಿಯ ತನಿಖೆಯೂ ಜಾರಿಯಲ್ಲಿತ್ತು. ಹಲವಾರು ಪ್ರಯತ್ನಗಳ ಬಳಿಕ, ಆರ್ಯನ್ ಖಾನ್ ಗೆ ಜಾಮೀನು ಕೊಡುವಲ್ಲಿ ಅವರ ವಕೀಲ ವರ್ಗ ಯಶಸ್ಸಾಗಿತ್ತು. 


ಆರ್ಯನ್‌ ಬೆಂಬಲಕ್ಕೆ ನಿಂತ ಬಾಲಿವುಡ್‌ :
ಡ್ರಗ್ಸ್ ಪ್ರಕರಣದಲ್ಲಿ (Mumbai drugs case) ಆರ್ಯನ್ ಹೆಸರು ಕೇಳಿ ಬಂದ ನಂತರ ಬಾಲಿವುಡ್ ನ ಖ್ಯಾತ ನಟರು ಆರ್ಯನ್ ಖಾನ್ ಬೆಂಬಲಕ್ಕೆ ನಿಂತಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್ ಮಲಿಕ್ ಮತ್ತು ರಾಜ್ಯದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ನಡುವೆ ಸಾಕಷ್ಟು ವಾಗ್ವಾದಗಳು ನಡೆದಿವೆ. 


ಇದನ್ನೂ ಓದಿ : Vishal : 'ಮುಂದಿನ ವರ್ಷದಿಂದ ಪುನೀತ್ ರಾಜಕುಮಾರ್ ನೋಡಿಕೊಳ್ಳುತ್ತಿದ್ದ 1800 ಮಕ್ಕಳ ಜವಾಬ್ದಾರಿ ನನ್ನದು'


ಮನ್ನತ್‌ ನಿವಾಸದ  ಹೊರಗೆ ಸಂಭ್ರಮಾಚರಣೆ : 
ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಅಕ್ಟೋಬರ್ 30 ರಂದು ಆರ್ಯನ್ ಖಾನ್ ಅವರ ನಿವಾಸಕ್ಕೆ ಮರಳಿದಾಗ ಶಾರುಖ್‌ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದರು.  ಆರ್ಥರ್ ರೋಡ್ ಜೈಲಿಗೆ ಬಂದಿದ್ದ ನಟ ಶಾರುಖ್‌ ಖಾನ್‌ (Shah rukh Khan),  ಬೆಂಗಾವಲು ಪಡೆಯೊಂದಿಗೆ ಪುತ್ರನನ್ನು ಕರೆದುಕೊಂಡು ಬಂದಿದ್ದರು. ಬಂಧನದ ಬಳಿಕ ಆರ್ಯನ್ ಖಾನ್ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ 22 ದಿನಗಳನ್ನು ಕಳೆಯಬೇಕಾಯಿತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ