ಮುಂಬೈ: ಭಾರತೀಯ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಗೆ ವಿಶಿಷ್ಟ ಸ್ಥಾನವಿರುವುದು ನಮಗೆಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇತ್ತೀಚಿಗೆ ಬಾಲಿವುಡ್ ನಟ ಫರಾನ್ ಅಕ್ತರ್ ಸೈರಾ ಸಿನಿಮಾ ಬಿಡುಗಡೆಗೂ ಮುನ್ನ ಅಮಿತಾಬ್ ಮತ್ತು ಚಿರಂಜೀವಿ ಜೊತೆ ನಡೆಸಿದ ಸಂದರ್ಶನದಲ್ಲಿ ಬಿಗ್ ಬಿ ಅಚ್ಚರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಸಂದರ್ಶನದಲ್ಲಿ ಅಮಿತಾಬ್ ಬಚ್ಚನ್ ಅವರು ಚಿರಂಜೀವಿ ಹಾಗೂ ರಜನಿಕಾಂತ್ ಅವರಿಗೆ ರಾಜಕೀಯ ಬರಬೇಡಿ ಎಂದೂ ವಿನಂತಿಸಿಕೊಂಡಿದ್ದರಂತೆ, ಆದರೆ ಅವರ ಮನವಿಯನ್ನು ಇಬ್ಬರು ನಟರೂ ಸಾರಾಸಗಟಾಗಿ ತಿರಸ್ಕರಿಸಿರುವ ವಿಷಯವನ್ನು ಬಿಗ್ ಬಿ ಬಹಿರಂಗಪಡಿಸಿದ್ದಾರೆ.


ಸಂದರ್ಶನದಲ್ಲಿ ಅಮಿತಾಬ್ ಈ ವಿಚಾರವಾಗಿ ಮಾತನಾಡಿ 'ನಾನು ಅವನಿಗೆ ಆಗಾಗ ಅವರಿಗೆ( ಚಿರಂಜೀವಿಗೆ) ಸಲಹೆ ಕೊಡುತ್ತಲೇ ಇರುತ್ತೇನೆ, ಆದರೆ ಅವರು ಕೇಳುವುದಿಲ್ಲ... ಅವರು ರಾಜಕೀಯಕ್ಕೆ ಸೇರಬೇಕು ಎಂದು ಹೇಳಿದಾಗ ನಾನು ಅವರಿಗೆ ಅಂತಹ ತಪ್ಪು ಮಾಡಲಿಕ್ಕೆ ಹೋಗಬೇಡ ಎಂದು ಹೇಳಿದ್ದೆ, ರಜನಿಕಾಂತ್ ಗೂ ಕೂಡ ಇದೇ ಮಾತನ್ನು ಹೇಳಿದ್ದೆ... ಆದರೆ ಯಾರೂ ಕೇಳುವ ಸ್ಥಿತಿಯಲ್ಲಿರಲಿಲ್ಲ.. ಆದರೆ ಅವರು ರಾಜಕೀಯಕ್ಕೆ ಹೋಗಿ ಬಂದರು, ಅವರ ಸಹೋದರ ಪವನ್ ಕಲ್ಯಾಣ ಕೂಡ ರಾಜಕೀಯ ಹೋಗಿದ್ದಾರೆ, ಅದರ ಬಗ್ಗೆ ಅವರಿಗೆ ಅತಿಯಾದ ಉತ್ಸುಕತೆ ಇದೆ' ಎಂದು ತಮ್ಮ ಸಲಹೆಯನ್ನು ತಿರಸ್ಕರಿಸಿರುವ ಬಗ್ಗೆ ಅಮಿತಾಬ್ ಹೇಳಿದ್ದಾರೆ.