ನವದೆಹಲಿ: ಖ್ಯಾತ ಬಾಲಿವುಡ್ ಗಾಯಕ ಅದನಾನ್ ಸಾಮಿ ಅವರಿಗೆ ಭಾರತ ಸರ್ಕಾರ 'ಪದ್ಮಶ್ರೀ' ಪ್ರಶಸ್ತಿ ನೀಡಲಾಗುವುದು ಎಂದು ಘೋಷಿಸಿದೆ. ಈ ಘೋಷಣೆಯಾದ ಬಳಿಕ ಅದನಾನ್ ಸಾಮಿ ಇದೀಗ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಸರ್ಕಾರದ ವತಿಯಿಂದ ಅದನಾನ್ ಸಾಮಿಗೆ ನೀಡಲಾಗುತ್ತಿರುವ ಈ ಭಾರತದ 4ನೇ ಅತಿ ದೊಡ್ಡ ನಾಗರಿಕ ಸನ್ಮಾನ ಕೆಲವರಿಗೆ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಇದೀಗ ವ್ಯಾಪಕ ಪ್ರಶ್ನೆಗಳು ಏಳಲಾರಂಭಿಸಿವೆ. ಅದನಾನ್ ಸಾಮಿ ಪಾಕಿಸ್ತಾನದ ಜೊತೆಗೆ ಸಂಪರ್ಕ ಹೊಂದಿದ್ದು, ಅವರಿಂದ ಈ ಪ್ರಶಸ್ತಿಯನ್ನು ಸರ್ಕಾರ ಮರಳಿ ಪಡೆಯಬೇಕು ಎಂಬ ಕೂಗುಗಳು ಕೇಳಿ ಬರಲಾರಂಭಿಸಿವೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಅನ್ನು ಕಪೂರ್ ಅವರ ಹೆಸರೂ ಕೂಡ ಸೇರ್ಪಡೆಯಾಗಿದೆ. ಅನ್ನು ಕಪೂರ್ ಅವರ ಅಪ್ಪಟ ಅಭಿಮಾನಿಯಾಗಿರುವ ವೀರಪಾಲ್ ಸಿಂಗ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಅನ್ನು ಕಪೂರ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಟ್ವೀಟ್ ಮಾಡಿರುವ ವೀರಪಾಲ್ ಸಿಂಗ್, "ಚಿತ್ರೋದ್ಯೋಮದ ಖ್ಯಾತ ಹಾಸ್ಯ ನಟ, ನಿರ್ಮಾಪಕ, ನಿರ್ದೇಶಕ ಹಾಗೂ ರೇಡಿಯೋ ಹೋಸ್ಟ್ ಪರಮ ಆದರಣೀಯ ಅನ್ನು ಕಪೂರ್ ಸಾಹಬ್ ಅವರಲ್ಲಿನ ಅದ್ಭುತ ಪ್ರತಿಭೆಗಾಗಿ ಪದ್ಮ ಪ್ರಶಸ್ತಿ ನೀಡಬಹುದೇ? ದಯವಿಟ್ಟು ವೋಟ್ ಮಾಡಿ" ಎಂದು ಬರೆದುಕೊಂಡಿದ್ದಾರೆ. ಅವರು ಮಾಡಿರುವ ಈ ಟ್ವೀಟ್ ಇದೀಗ ಭಾರಿ ವೈರಲ್ ಆಗಿದೆ. ಅಷ್ಟೇ ಅಲ್ಲ ತಮ್ಮ ಅಭಿಮಾನಿಯ ಈ ಟ್ವೀಟ್ ಗೆ ಅನ್ನು ಕಪೂರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.


ತಮ್ಮ ಅಭಿಮಾನಿಯ ಟ್ವೀಟ್ ಗೆ ರೀಟ್ವೀಟ್ ಮಾಡಿರುವ ಅನ್ನು ಕಪೂರ್, "ಧನ್ಯವಾದಗಳು ಭಾಯಿ ಆದರೆ, ಪದ್ಮ ಪ್ರಶಸ್ತಿ ಕೇವಲ ಯೋಗ್ಯ ಹಾಗೂ ಅರ್ಹ ವ್ಯಕ್ತಿಗಳಿಗೆ ಮಾತ್ರ ನೀಡಲಾಗುತ್ತದೆ. ನನ್ನತಹ ಅಯೋಗ್ಯ ಹಾಗೂ ನಾಲಾಯಕ್ ವ್ಯಕ್ತಿಗಳಿಗೆ ಅಲ್ಲ.. ಆದರೂ, ಸಹಿತ ನೀವು ನನ್ನನ್ನು ನೆನಪಿಸಿಕೊಂಡಿದ್ದಕ್ಕೆ ನಿಮಗೆ ಅಭಾರಿಯಾಗಿದ್ದೇನೆ" ಎಂದಿದ್ದಾರೆ. ಬಾಲಿವುಡ್ ನ ದಿಗ್ಗಜ ನಟರಲ್ಲಿ ಅನ್ನು ಕಪೂರ್ ಕೂಡ ಶಾಮೀಲಾಗಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾದ 'ಡ್ರೀಮ್ ಗರ್ಲ್' ಚಿತ್ರದಲ್ಲಿ ಅನ್ನು ಕಪೂರ್ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಮುಖ್ಯ ಭೂಮಿಕೆಯಲ್ಲಿ ಕಂಡುಬಂದಿದ್ದರು. ಅನ್ನು ಕಪೂರ್ ಈ ಚಿತ್ರದಲ್ಲಿ ಆಯುಷ್ಮಾನ್ ಅವರ ತಂದೆಯ ಪಾತ್ರ ನಿರ್ವಹಿಸಿದ್ದರು. ಈ ಚಿತ್ರದಲ್ಲಿನ ಅವರ ಅಭಿನಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.