ನವದೆಹಲಿ: ಅಂತರರಾಷ್ಟ್ರೀಯ ಗಾಯಕಿ ರಿಹಾನ್ನಾ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ರೈತರ ಹೋರಾಟದ ಕುರಿತಾಗಿ ಮಾಡಿರುವ ಟ್ವೀಟ್ ಈಗ ಜಗತ್ತಿನಾಧ್ಯಂತ ಸಾಕಷ್ಟು ಸದ್ದು ಮಾಡುತ್ತಿದೆ.


COMMERCIAL BREAK
SCROLL TO CONTINUE READING

ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ದೆಹಲಿ ಮತ್ತು ನೆರೆಯ ಹರಿಯಾಣದ ಪ್ರದೇಶದಲ್ಲಿ ಪ್ರತಿಭಟನೆ (Farmers protest) ನಡೆಸುತ್ತಿರುವ ಹಿನ್ನಲೆಯಲ್ಲಿ ಇಂಟರ್ನೆಟ್ ನ್ನು ಸ್ಥಗಿತಗೊಳಿಸಲಾಗಿತ್ತು ನಂತರ ಈ ವಿಷಯ ಇನ್ನಷ್ಟು ಭುಗಿಲೆದ್ದಿದೆ.ಈ ವಿಚಾರವಾಗಿ ರಿಹಾನ್ನ ಟ್ವೀಟ್ ಮಾಡಿರುವುದು ಈಗ ರೈತರ ಪ್ರತಿಭಟನೆ ಜಾಗತಿಕ ಸುದ್ದಿಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.


Rihanna)?


ರಿಹಾನ್ನಾ(Rihanna)ಳ ಅವರ ಪೂರ್ಣ ಹೆಸರು ರಾಬಿನ್ ರಿಹಾನ್ನಾ ಫೆಂಟಿ. ಅವರು ಫೆಬ್ರವರಿ 20, 1988 ರಂದು ಬಾರ್ಬಡೋಸ್ನಲ್ಲಿ ಜನಿಸಿದರು. ರಿಹಾನ್ನಾ ತನ್ನ ಬಾಲ್ಯದ ದಿನಗಳಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ್ದಾಳೆ. ಆಕೆಯ ತಂದೆ ಕುಡುಕನಾಗಿದ್ದು ತಾಯಿಗೆ ಕಿರುಕುಳವನ್ನು ನೀಡುತ್ತಿದ್ದರು.ರಿಹಾನ್ನಾ ಅನೇಕ ಮಲ-ಸಹೋದರರು ಮತ್ತು ಮಲ-ಸಹೋದರಿಯರನ್ನು ಹೊಂದಿದ್ದಾರೆ.ತನ್ನ ಬಾಲ್ಯದ ದಿನಗಳಲ್ಲಿ ಕುಟುಂಬಕ್ಕೆ ಸಹಾಯ ಮಾಡಲು ಅವಳು ತನ್ನ ತಂದೆಯೊಂದಿಗೆ ಬಟ್ಟೆಗಳನ್ನು ಮಾರುತ್ತಿದ್ದಳು.


ಗಾಯಕಿಯಾಗಿ ಖ್ಯಾತಿ ಪಡೆದದ್ದು


ರಿಹಾನ್ನಾ ತನ್ನ 16 ನೇ ವಯಸ್ಸಿನಲ್ಲಿ ಗಾಯಕಿಯಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು.16 ನೇ ವಯಸ್ಸಿನಲ್ಲಿ, ರೆಕಾರ್ಡ್ ನಿರ್ಮಾಪಕ ಇವಾನ್ ರೋಜರ್ಸ್ ಯುಎಸ್ನಲ್ಲಿ ರೆಕಾರ್ಡಿಂಗ್ಗಾಗಿ ಅವರನ್ನು ಕರೆದರು. 2005 ರಲ್ಲಿ, ರಿಹಾನ್ನಾ ತನ್ನ ಮೊದಲ ಸ್ಟುಡಿಯೋ ಆಲ್ಬಂ 'ಮ್ಯೂಸಿಕ್ ಆಫ್ ದಿ ಸನ್' ಅನ್ನು ಬಿಡುಗಡೆ ಮಾಡಿದಳು, ಅದು ನಂತರ ಬಿಲ್ಬೋರ್ಡ್ 200 ಪಟ್ಟಿಯಲ್ಲಿ ಮೊದಲ 10 ಸ್ಥಾನಗಳನ್ನು ಗಳಿಸಿತು.


ಒಂದು ವರ್ಷದೊಳಗೆ ಅವರು 2006 ರಲ್ಲಿ ತನ್ನ ಎರಡನೇ ಸ್ಟುಡಿಯೋ ಆಲ್ಬಂ 'ಎ ಗರ್ಲ್ ಲೈಕ್ ಮಿ' ಅನ್ನು ಬಿಡುಗಡೆ ಮಾಡಿದರು, ಇದು ಬಿಲ್ಬೋರ್ಡ್ನ ಆಲ್ಬಂಗಳ ಪಟ್ಟಿಯಲ್ಲಿ ಮೊದಲ ಐದು ಸ್ಥಾನಗಳನ್ನು ಗಳಿಸಿತು. ಫೋರ್ಬ್ಸ್ ಪಟ್ಟಿ 2019 ರಿಹಾನ್ನಾ ಅವರನ್ನು ಶ್ರೀಮಂತ ಸಂಗೀತಗಾರನನ್ನಾಗಿ ಮಾಡಿದೆ. ಫೋರ್ಬ್ಸ್ ರಿಹಾನ್ನಾ ಅವರ ನಿವ್ವಳ ಮೌಲ್ಯ 600 ಮಿಲಿಯನ್ ಡಾಲರ್ ಅಥವಾ 4400 ಕೋಟಿ ರೂ ಎಂದು ನಿಮಗೆ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.


ರಿಹಾನ್ನಾ ಟ್ವಿಟರ್‌ನಲ್ಲಿ 100 ಮಿಲಿಯನ್ ಅಥವಾ 10 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಟ್ವಿಟ್ಟರ್ನಲ್ಲಿ, ರಿಹಾನ್ನಾ 100 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ವಿಶ್ವದ ನಾಲ್ಕನೇ ವ್ಯಕ್ತಿಯಾಗಿದ್ದಾರೆ.'ಡೂ ನಾಟ್ ಸ್ಟಾಪ್ ದಿ ಮ್ಯೂಸಿಕ್,ಲವ್ ದಿ ವೇ ಯು ಲೈ,ಅಂಬ್ರೆಲಾ,ದಂತಹ ಮುಂತಾದ ಕೆಲವು ದೊಡ್ಡ ಹಿಟ್‌ಗಳನ್ನು ಅವರು ನೀಡಿದ್ದಾರೆ.ಗಾಯಕಿಯಾಗಿರುವುದಲ್ಲದೆ, ರಿಹಾನ್ನಾ ನಟಿ ಕೂಡ ಹೌದು. ಓಷಿಯನ್ಸ್ 8 ಮತ್ತು ಗುವಾ ಐಲ್ಯಾಂಡ್ ದಂತಹ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ನಟನೆ ಮತ್ತು ಹಾಡಿನ ಜೊತೆಗೆ, ರಿಹಾನ್ನಾ ತನ್ನ ಹೆಸರಿನಲ್ಲಿ 'ಫೆಂಟಿ' ಎಂಬ ಫ್ಯಾಶನ್ ಬ್ರಾಂಡ್ ಅನ್ನು ಸಹ ಹೊಂದಿದ್ದಾಳೆ.


ಈಗ ಸುದ್ದಿಯಲ್ಲಿರುವುದೇಕೆ?


ಜನವರಿ 26 ರ ರೈತರು ಆಯೋಜಿಸಿದ್ದ 'ಟ್ರಾಕ್ಟರ್ ರ್ಯಾಲಿ' ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ನವದೆಹಲಿಗೆ ಪ್ರವೇಶಿಸಲು ಬ್ಯಾರಿಕೇಡ್‌ಗಳನ್ನು ಮುರಿದು ರಾಷ್ಟ್ರ ರಾಜಧಾನಿಯ ಹಲವಾರು ಭಾಗಗಳಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ ನಂತರ 32 ವರ್ಷದ ಪಾಪ್ ತಾರೆ ದೆಹಲಿಯ ನೆರೆಯ ರಾಜ್ಯ ಹರಿಯಾಣದ ಹಲವಾರು ಜಿಲ್ಲೆಗಳಲ್ಲಿ ಅಂತರ್ಜಾಲ ಸ್ಥಗಿತಗೊಳಿಸುವ ಕುರಿತು ಸಿಎನ್‌ಎನ್ ಸುದ್ದಿ ಹಂಚಿಕೊಂಡಿರುವುದು ಈಗ ಜಾಗತಿಕ ಸುದ್ದಿಯಾಗಿ ಸದ್ದು ಮಾಡುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.