Toxic Movie: ಯಶ್‌19 ಸಿನಿಮಾ ಬರೀ ಟೈಟಲ್ ಅನೌನ್ಸ್‌ಮೆಂಟ್ ಟೀಸರ್‌ನಿಂದಲೇ  ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದು, ರಾಕಿಂಗ್ ಸ್ಟಾರ್ ಮುಂದಿನ ಚಿತ್ರಕ್ಕೆ 'ಟಾಕ್ಸಿಕ್' ಎನ್ನುವ ಟೈಟಲ್ ಕನ್ಫರ್ಮ್ ಆಗಿದೆ. ಗೀತು ಮೋಹನ್ ದಾಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಕೆವಿಎನ್ ಪ್ರೊಡಷನ್ಸ್ ಜೊತೆ ಸೇರಿ ಯಶ್ ಸಿನಿಮಾ ಬಂಡವಾಳ ಹೂಡುತ್ತಿದ್ದಾರೆ ಎನ್ನಲಾಗ್ತಿದೆ. 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಪಾತ್ರ ಏನು? ಕಥೆ ಏನು? ಎನ್ನುವ ಚರ್ಚೆ ನಡೆಯುತ್ತಿರುವ ನಡುವೆಯೇ ಸಿನಿಮಾದಲ್ಲಿ ಬೇರೆ ಯಾರೆಲ್ಲಾ ನಟಿಸುತ್ತಾರೆ? ಎನ್ನುವ ಬಗ್ಗೆಯೂ ಅಂತೆ ಕಂತೆ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ಸಾಯಿ ಪಲ್ಲವಿ, ಮೃಣಾಲ್ ಠಾಕೂರ್ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಹಾಗೆಯೇ, ಇನ್ನು ಚಿತ್ರದಲ್ಲಿ ಮೂವರು ನಟಿಯರು ಲೀಡ್ ರೋಲ್‌ಗಳಲ್ಲಿ ನಟಿಸುತ್ತಾರೆ ಎನ್ನುವ ಊಹಾಪೋಹ ಕೂಡ ಶುರುವಾಗಿದೆ.


COMMERCIAL BREAK
SCROLL TO CONTINUE READING

ಇಷ್ಟೆಲ್ಲಾ ಚರ್ಚೆಗಳ ಮಧ್ಯೆ, ಮಲಯಾಳಂ ನಟ ಟೊವಿನೋ ಥಾಮಸ್ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಾರೆ  ಸುದ್ದಿ ಕಳೆದ ಒಂದುವಾರದಿಂದ ಕೇಳಿಬರ್ತಿದೆ. ಕಾರಣವೇನೆಂದರೇ, 'ಟಾಕ್ಸಿಕ್‌' ಚಿತ್ರದ ಟೀಸರ್‌ ತುಣುಕನ್ನು ನಟ ಟೊವಿನೋ ಥಾಮಸ್ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿ, ವಾವ್ ಎಂದು ಬರೆದು ಟೀಸರ್‌ನ ಆರಂಭದ ಸಣ್ಣ ಝಲಕ್ ಪೋಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಬರೀ ಜೋಕರ್ ಝಲಕ್‌ನ ಮಾತ್ರ ಟೊವಿನೋ ಥಾಮಸ್ ಹಂಚಿಕೊಂಡಿರುವುದು ಅಭಿಮಾನಿಗಳ ಗಮನ ಸೆಳೆದಿದ್ದು, ಜೋಕರ್ ಆಗಿ ಟೊವಿನೋ ನಟಿಸುತ್ತಾರಾ? ಎನ್ನುವ ಊಹಾಪೋಹ ಶುರುವಾಗಿದೆ. 



ಇದನ್ನೂ ಓದಿ: Yash 19 : ಯಶ್‌ ʼಟಾಕ್ಸಿಕ್‌ʼ ಮೂಲಕ ಸ್ಯಾಂಡಲ್‌ವುಡ್‌ಗೆ ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ ಎಂಟ್ರಿ ಪಕ್ಕಾ..! 


4 ವರ್ಷಗಳ ಹಿಂದೆ ಟೊವಿನೋ ಥಾಮಸ್ 'ಲುಕಾ' ಎನ್ನುವ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ಸಿನಿಮಾ ನೋಡಿ ಗೀತು ಮೋಹನ್ ದಾಸ್ ಮೆಚ್ಚಿಕೊಂಡಿದ್ದರು. ಮುಖ್ಯವಾಗಿ ಟೊವಿನೋ ಅಭಿನಯವನ್ನು ಹಾಡಿ ಕೊಂಡಾಡುವುದರ ಜೊತೆಗೆ, ನಿರ್ದೇಶಕಿ ಗೀತಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ನಟನನ್ನು ಫಾಲೋ ಮಾಡಲು ಆರಂಭಿಸಿದ್ದರಿಂದ, ಇದೆಲ್ಲವೂ ಯಶ್‌19 ಚಿತ್ರದಲ್ಲಿ ಟೊವಿನೋ ನಟಿಸೋ ಬಗ್ಗೆ ಸುಳಿವು ನೀಡಿತ್ತು. 
ಇತ್ತೀಚೆಗೆ ಸೂಪರ್ ಹಿಟ್ ಸಿನಿಮಾಗಳಿಂದ ಟೊವಿನೋ ಥಾಮಸ್ ಮಾಲಿವುಡ್‌ನಲ್ಲಿ ಸದ್ದು ಮಾಡುತ್ತಿದ್ದು, 'ಮಿನ್ನಲ್ ಮುರಳಿ' ಸಿನಿಮಾ ದಾಖಲೆ ಬರೆದಿತ್ತು. ಈ ಚಿತ್ರ ಕನ್ನಡಕ್ಕೂ ಡಬ್ ಆಗಿ ಓಟಿಟಿಗೆ ಬಂದಿತ್ತು. 'ಫೋರೆನ್ಸಿಕ್' ಸಿನಿಮಾ ಕೂಡ ಗೆಲ್ಲುವುದರ ಜೊತೆಗೆ, ಇತ್ತೀಚೆಗೆ ಬಂದ '2018' ಚಿತ್ರ ಅಂತೂ ಮಲಯಾಳಂ ಚಿತ್ರರಂಗದಲ್ಲಿ ಹೊಸ ದಾಖಲೆ ಬರೀತು.


ಸದ್ಯ ಟೊವಿನೋ ಥಾಮಸ್ ಇನ್‌ಸ್ಟಾ ಸ್ಟೋರಿ ಸಖತ್ ವೈರಲ್ ಆಗುತ್ತಿದ್ದು, ಯಶ್ ಫ್ಯಾನ್ಸ್‌ ಅದರ ಸ್ಕ್ರೀನ್‌ಶಾಟ್ ತೆಗೆದು ವೈರಲ್ ಮಾಡುತ್ತಿದ್ದಾರೆ. ಥಾಮಸ್, ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆಗಿನ ಒಡನಾಟದ ಕಾರಣಕ್ಕೆ ಶುಭ ಕೋರಿ 'ಟಾಕ್ಸಿಕ್' ಟೀಸರ್ ಹಂಚಿಕೊಂಡಿದ್ದಾರಾ? ಅಥವಾ ಚಿತ್ರದಲ್ಲಿ ನಿಜಕ್ಕೂ ನಟಿಸುತ್ತಿದ್ದಾರಾ? ಎನ್ನುವ ಪ್ರಶ್ನೆಗಳಿಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಯಶ್- ಗೀತು ಜೋಡಿ ಕಥೆ, ಚಿತ್ರಕಥೆ, ಸ್ಟಾರ್‌ಕಾಸ್ಟ್, ಶೂಟಿಂಗ್ ಶೆಡ್ಯೂಲ್ ಎಲ್ಲಾ ಫೈನಲ್ ಮಾಡಿಕೊಂಡು 'ಟಾಕ್ಸಿಕ್' ಸಿನಿಮಾ ಘೋಷಣೆ ಮಾಡಿರುವಂತೆ ಕಾಣುತ್ತಿದೆ. ಹಾಗಾಗಿ ಚಿತ್ರದ ಬಗ್ಗೆ ಒಂದೊಂದೇ ಸುದ್ದಿ ಲೀಕ್ ಆಗುತ್ತಿದೆ. ಜನವರಿಯಿಂದಲೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದ್ದು 2025ರ ಏಪ್ರಿಲ್ 10ರಂದು ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಿಸಲಾಗಿದೆ. ಯಶ್ ಅಭಿಮಾನಿಗಳಂತೂ ಚಾತಕ ಪಕ್ಷಿಗಳಂತೆ ಚಿತ್ರಕ್ಕಾಗಿ ಕಾಯುವಂತಾಗಿದೆ.
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.