Veena Nagda : ಬಹುತೇಕ ಎಲ್ಲಾ ಹೆಣ್ಣುಮಕ್ಕಳು ಮೆಹಂದಿ ಹಚ್ಚಿಕೊಳ್ಳಲು ಇಷ್ಟ ಪಡುತ್ತಾರೆ.. ಅದಕ್ಕಂತಲೇ ಮೆಹಂದಿ ಕಲಾವಿದರಿದ್ದು, ಅವರನ್ನು ಕರೆಯಿಸಿ ಇಲ್ಲವೇ ಅವರಿರುವಲ್ಲಿ ತಾವೇ ಹೋಗಿ ಹಣ ಕೊಟ್ಟು ಕೈಗೆ ತಮಗಿಷ್ಟವಾದ ಡಿಸೈನ್‌ನಲ್ಲಿ ಮೆಹಂದಿ ಹಚ್ಚಿಸಿಕೊಂಡು ಬರುತ್ತಾರೆ.. ಹಾಗಿದ್ರೆ, ಬಾಲಿವುಡ್‌ ತಾರೆಯರು, ಶ್ರೀಮಂತ ಉದ್ಯಮಿಗಳು, ರಾಜಕಾರಣಿಗಳು ಇಷ್ಟ ಪಡುವ ಮೆಹಂದಿ ಕಲಾವಿದೆ ಯಾರು..? ಅವರ ಫೀ ಎಷ್ಟು..? ಬನ್ನಿ ತಿಳಿಯೋಣ.. 


COMMERCIAL BREAK
SCROLL TO CONTINUE READING

ಅಂಬಾನಿ ಕುಟುಂಬಕ್ಕೆ ಮತ್ತು ಬಾಲಿವುಡ್ ಸ್ಟಾರ್‌ಗಳಿಗೂ ಮೆಹಂದಿ ಹಚ್ಚುವ ಏಕೈಕ ಮಹಿಳೆ ಯಾರು ಅಂತ ಬಹುಷಃ ನಿಮಗೆ ಗೊತ್ತಿಲ್ಲ ಅನಿಸುತ್ತೆ.. ತಮ್ಮ ವಿಭಿನ್ನ ಮತ್ತು ಆಕರ್ಷಕ ವಿನ್ಯಾಸಗಳಿಂದ ಬಿಟೌನ್‌ ತಾರೆಯರ ಕೈ, ಕಾಲು ಅಂದಗೊಳಿಸುವ ಮೆಹಂದಿ ಕಲಾವಿದೆಯ ಹೆಸರು ವೀಣಾ ನಾಗ್ಡಾ.


ಇದನ್ನೂ ಓದಿ:'ಆತ ತನ್ನ ಪ್ಯಾಂಟ್ ತೆಗೆದು.. ನನ್ನ ಕೈಯನ್ನು...' ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ಖ್ಯಾತ ನಟಿ!!


ಇತ್ತೀಚೆಗಷ್ಟೇ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಇಡೀ ದೇಶದ ಗಮನ ಸೆಳೆದಿತ್ತು. ಅವರ ಪ್ರತಿಯೊಂದು ಮದುವೆಗೆ ಸಂಬಂಧಿಸಿದ ಆಚರಣೆಗಳ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು.. ಅವರ ಉಡುಪುಗಳು, ಆಭರಣಗಳು, ಮೆಹಂದಿ ಮತ್ತು ಆಚರಣೆಯಲ್ಲಿ ಭಾಗವಹಿಸಿದ ತಾರೆಯರ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆಯಾಗಿತ್ತು. 


ವೀಣಾ ನಗ್ದಾ ಮೆಹಂದಿ ಕಲಾವಿದೆಯಾಗಿದ್ದು, ಬಾಲಿವುಡ್‌ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಮೆಹಂದಿ ಕಲಾವಿದೆ ತನ್ನ ಸುಂದರ ವಿನ್ಯಾಸಗಳಿಂದ ಬಿ-ಟೌನ್ ತಾರೆಯರ ಮನಗೆದ್ದಿದ್ದಾರೆ ಅಂದರೆ ತಪ್ಪಾಗಲ್ಲ. ಅದಕ್ಕಾಗಿಯೇ ಅವರನ್ನು ಮೆಹಂದಿಯ ರಾಣಿ ಎಂದು ಕರೆಯಲಾಗುತ್ತದೆ. 


ಇದನ್ನೂ ಓದಿ:ರೂಮರ್ಡ್‌ ಗರ್ಲ್‌ಫ್ರೆಂಡ್‌ ಜೊತೆ ಕಾಣಿಸಿಕೊಂಡ ಸಲ್ಮಾನ್‌ ಖಾನ್‌..ಯಾರಾಕೆ ಗೊತ್ತಾ..?ಜೊತೆಯಲ್ಲಿ ಪಾರ್ಟಿ, ಮೋಜು, ಮಾಸ್ತಿ..ಫೋಟೊಸ್‌ ಫುಲ್‌ ವೈರಲ್‌


ಅನೇಕ ಬಾಲಿವುಡ್ ತಾರೆಯರ ಮದುವೆಗೆ ವೀಣಾ ಅವರೇ ಮೆಹಂದಿ ಮಾಡಿದ್ದಾರೆ. ನಟಿಯರಾದ ಐಶ್ವರ್ಯಾ ರೈ ಬಚ್ಚನ್, ಕರಿಷ್ಮಾ ಕಪೂರ್, ಶಿಲ್ಪಾ ಶೆಟ್ಟಿ, ಸೋನಮ್ ಕಪೂರ್, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಆಲಿಯಾ ಭಟ್ ಮತ್ತು ನತಾಶಾ ದಲಾಲ್ ಸೇರಿದಂತೆ ಸಾಕಷ್ಟು ಸ್ಟಾರ್‌ಗಳಿಗೆ ಮೆಹಂದಿ ಹಚ್ಚಿದ್ದಾರೆ. ವಿಶ್ವದ ಅತಿ ವೇಗದ ಮೆಹಂದಿ ಕಲಾವಿದೆ ಎಂಬ ಬಿರುದು ಕೂಡ ವೀಣಾ ಅವರಿಗಿದೆ. 


2021 ರ ಸಂದರ್ಶನದಲ್ಲಿ ವೀಣಾ ಅವರು ತಮ್ಮ ಸಂಭಾವನೆ ಕುರಿತು ಮಾತನಾಡಿದ್ದರು.. ಸಾಮಾನ್ಯ ಶುಲ್ಕಕ್ಕೆ ಸಂಬಂಧಿಸಿದಂತೆ, ವಧುವಿಗೆ 3,000 ರೂ.ಗಳಿಂದ 7,000 ರೂಪಾಯಿಗಳವರೆಗೆ ದರ ಇದೆ. ಇದು ಎರಡೂ ಕೈಗಳು ಮತ್ತು ಪಾದಗಳನ್ನು ಒಳಗೊಂಡಿದೆ. ಮಧುವೆಗೆ ಬಂದ ಅತಿಥಿಗಳಿಗೆ, ಕೈಗೆ 50 ರಿಂದ 75 ರೂ. ನಾನು ಸೆಲೆಬ್ರಿಟಿಗಳ ಮದುವೆಗಳಿಗೆ ಶುಲ್ಕ ವಿಧಿಸುವುದಿಲ್ಲ. ಅವರು ತಮ್ಮ ಇಚ್ಛೆಗೆ ಅನುಗುಣವಾಗಿ ಪಾವತಿಸುತ್ತಾರೆ, ನಿರೀಕ್ಷೆಗಿಂತ ಹೆಚ್ಚಾಗಿ ನೀಡುತ್ತಾರೆ ಅಂತ ಹೇಳಿಕೊಂಡಿದ್ದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.