ಕೆಲವೊಂದು ನಿಜ ಜೀವನದ ಕಥೆಗಳು ಯಾವ ಸಿನಿಮಾಗೂ (Cinema) ಕಡಿಮೆಯಿರಲ್ಲ. ಅಂತಹದ್ದೊಂದು ನೈಜ ಬದುಕಿನ ಕಹಾನಿಯನ್ನ (real life story) ಇಂದು ನಾವು ನಿಮಗೆ ಹೇಳಲಿದ್ದೇವೆ. ಇದು ಬಾಲಿವುಡ್ ನಲ್ಲಿ ನಟಿಯಾಗಿ ಮಿಂಚಬೇಕೆಂಬ ಆಸೆ ಹೊತ್ತು ಬಂದು ಬಳಿಕ ಮಾಫಿಯಾ ಕ್ವೀನ್ ಆಗಿ ಬೆಳೆದ ಓರ್ವ ಮಹಿಳೆಯ ಕಥೆ. 


COMMERCIAL BREAK
SCROLL TO CONTINUE READING

ಇತ್ತೀಚೆಗಷ್ಟೇ ಬಿಡುಗಡೆಯಾದ ಗಂಗೂಬಾಯಿ ಕಥಿಯಾವಾಡಿ (Gangubai Kathiawadi) ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ನಿರ್ದೇಶನದ ಈ ಸಿನಿಮಾದಲ್ಲಿ ನಟಿ ಆಲಿಯಾ ಭಟ್ (Alia Bhat) ಗಂಗೂಬಾಯಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಸಲಿಗೆ ಈ ಗಂಗೂಬಾಯಿ ಕಥಿಯಾವಾಡಿ ಎಂಬ ಮಹಿಳೆ ಯಾರು? ಈಕೆಯ ಜೀವನ ಬೆಳ್ಳಿತೆರೆಯ ಮೇಲೆ ಬರಲು ಕಾರಣವೇನು? ಎಂಬ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. 


ಗಂಗೂಬಾಯಿ ಕಥಿಯಾವಾಡಿ ಯಾರು? 


ಗಂಗೂಬಾಯಿ ಕಥಿಯಾವಾಡಿ ಯಾರು? ಎಂಬ ಪ್ರಶ್ನೆ ಸಿನಿಮಾ ನೋಡಿದ ಪ್ರತಿಯೊಬ್ಬರಲ್ಲೂ ಮೂಡದೇ ಇರದು. ಗಂಗೂಬಾಯಿ ಗುಜರಾತಿನ (Gujarat) ಕಥಿಯಾವಾಡಿಯ ನಿವಾಸಿ. ಈ ಕಾರಣದಿಂದ ಆಕೆಯನ್ನು ಗಂಗೂಬಾಯಿ ಕಥಿಯಾವಾಡಿ ಎಂದು ಕರೆಯಲಾಗುತ್ತಿತ್ತು. ಆದರೆ ಆಕೆಯ ನಿಜವಾದ ಹೆಸರು ಗಂಗಾ ಹರ್ಜಿವಂದಾಸ್ ಕಥಿಯಾವಾಡಿ. ಓರ್ವ ಸ್ಪುರುದ್ರೂಪಿ ಹೆಣ್ಣುಮಗಳು.


ಇದನ್ನೂ ಓದಿ: ಪವರ್‌ ಸ್ಟಾರ್‌ ಪುನೀತ್‌ ಅಭಿನಯದ ಕೊನೆಯ ಸಿನಿಮಾಗೆ ಕೋಟಿ ಕೋಟಿ ಆಫರ್..!‌


ನೋಡಿದರೆ ಚಂದ್ರನಿಗೂ ನಾಚಿಕೆಯಾಗುವಂತಹ ಬಣ್ಣ. ನವಿಲಿಗೂ ನಾಚಿಕೆಯಾಗುವ ಮೈಮಾಟ ಹೊಂದಿದ್ದ ಗಂಗೂಬಾಯಿ, 16 ನೇ ವಯಸ್ಸಿನಲ್ಲಿ ತನ್ನ ತಂದೆಯ ಲೆಕ್ಕಪರಿಶೋಧಕನನ್ನು (Accountant) ಪ್ರೀತಿಸುತ್ತಿದ್ದಳು. ಪ್ರೇಮದ ಅಮಲಿನಲ್ಲಿ ಪ್ರಿಯತಮನನ್ನು ಮದುವೆಯಾಗುವ ನಿರ್ಧಾರಕ್ಕೆ ಬಂದಳು. ಮನೆಯವರನ್ನು ಬಿಟ್ಟು, ಗೆಳೆಯನೊಂದಿಗೆ ಮುಂಬೈಗೆ (Mumbai) ಓಡಿಹೋದಳು. ಅಲ್ಲಿ ಇನಿಯನನ್ನು ವರಿಸಿದಳು.


ತನ್ನ ಸೌಂದರ್ಯದ ಬಗ್ಗೆ ಅರಿವು ಹೊಂದಿದ್ದ ಗಂಗೂಬಾಯಿ ನಟಿಯಾಗಬೇಕೆಂಬ (Bollywood Actress) ಮಹದಾಸೆ ಹೊಂದಿದ್ದಳು. ಆಶಾ ಪಾರೇಖ್ ಮತ್ತು ಹೇಮಾ ಮಾಲಿನಿ ಅವರ ದೊಡ್ಡ ಅಭಿಮಾನಿಯಾಗಿದ್ದ ಗಂಗೂಬಾಯಿ ತಾನು ಮುಂದೊಂದು ದಿನ ಬಾಲಿವುಡ್ ತಾರೆಯಾಗುವ ಕನಸು ಕಂಡಿದ್ದಳು. ಆದರೆ ಆ ಹೆಬ್ಬಯಕೆಗೆ ಸೌಂದರ್ಯವೇ ಮುಳುವಾಗುತ್ತದೆ ಎಂದು ಆಕೆ ಊಹಿಸಿಯೂ ಇರಲಿಲ್ಲ. ಏಕೆಂದರೆ ಆಕೆಯ ಪತಿಯೇ ಅವಳನ್ನು ವೇಶ್ಯಾಗೃಹಕ್ಕೆ ಮಾರಾಟ ಮಾಡಿದ. ಅದು ಕೇವಲ 500 ರೂಪಾಯಿಗೆ. ಇದೇ ಗಂಗೂಬಾಯಿ ಕಥಿಯಾವಾಡಿ ಜೀವನದ ಟರ್ನಿಂಗ್ ಪಾಯಿಂಟ್. 


ಪ್ರತಿನಿತ್ಯ ಹೆಣ್ಣುಬಾಕರಿಗೆ ಆಹಾರವಾಗುತ್ತಿದ್ದ ಗಂಗೂಬಾಯಿ:


ಹುಸೇನ್ ಎಂಬುವವರು ಬರೆದ ಪುಸ್ತಕದ ಪ್ರಕಾರ, ವೇಶ್ಯಾಗೃಹದಲ್ಲಿ ನಿತ್ಯ ಹಲವು ಜನರು ಬಕಪಕ್ಷಿಯಂತೆ ಗಂಗೂಬಾಯಿಯನ್ನು ಕಿತ್ತು ತಿನ್ನುತ್ತಿದ್ದರು. ಆ ನರಕದಲ್ಲಿ ಆಕೆ ತನ್ನ ನಟಿಯಾಗುವ ಕನಸನ್ನೇ ಮರೆತು ಮರಗುವಂತಾಯಿತು. ಇದೆ ವೇಳೆಗೆ ಮಾಫಿಯಾ ಡಾನ್ ಕರೀಂಲಾಲಾ (Kareemlala) ಅವರ ಗ್ಯಾಂಗ್‌ನ ಸದಸ್ಯನೊಬ್ಬ ಗಂಗೂಬಾಯಿಯ ಮೇಲೆ ಅತ್ಯಾಚಾರವೆಸಗಿದ. ಹಣವನ್ನು ನೀಡದೆ ಆಕೆಯನ್ನು ಅನುಭವಿಸುತ್ತಿದ್ದ. ಈ ವೇದನೆ ತಾಳಲಾರದೆ ಗಂಗೂಬಾಯಿ ಕರೀಂಲಾಲಾ ಅವರನ್ನೇ ಭೇಟಿಯಾದಳು. ನ್ಯಾಯಕ್ಕಾಗಿ ಮನವಿಯಿಟ್ಟಳು. 


ಮಹಿಳಾ ಡಾನ್‌ಗಳಲ್ಲಿ ಒಬ್ಬಳಾಗಿ ಗಂಗೂಬಾಯಿ:


ನೀನೆ ನನ್ನ ಅಣ್ಣ ಇಂದಿನಿಂದ ನನ್ನನ್ನು ಈ ರಾಕ್ಷಸರಿಂದ ನೀನೇ ರಕ್ಷಿಸಬೇಕು ಎಂದು ಹೇಳಿ ರಾಖಿ ಕಟ್ಟಿದಳು. ಅವನನ್ನು ತನ್ನ ಸಹೋದರನನ್ನಾಗಿ ಮಾಡಿಕೊಂಡಳು. ಇದಕ್ಕೆ ಸರಿ ಎಂದ ಕರೀಂಲಾಲಾ.. ಆಕೆಯನ್ನು ತನ್ನ ತಂಗಿ ಎಂದು ಘೋಷಿಸಿದ. ಇದು ಆಕೆಯ ಜೀವನ ಎರಡನೆ ಟರ್ನಿಂಗ್ ಪಾಯಿಂಟ್. 


ಇದನ್ನೂ ಓದಿ: Pooja Hegde: ಆಲಿಯಾ ಭಟ್ ಬಾಯ್‌ ಫ್ರೆಂಡ್‌ ಬಗ್ಗೆ ಪೂಜಾ ಹೆಗ್ಡೆ ಹೇಳಿದ್ದೇನು ಗೊತ್ತಾ..?


ಕರೀಂಲಾಲಾ ಸಹೋದರಿಯಾದ ಬಳಿಕ ಗಂಗೂಬಾಯಿಯನ್ನು (Gangubai) ಯಾರೊಬ್ಬರು ಮುಟ್ಟುವ ಧೈರ್ಯ ಮಾಡಲಿಲ್ಲ. ಕೆಲವೇ ಕೆಲವು ದಿನಗಳಲ್ಲಿ ಆಕೆಯ ಕೈಗೆ ಅಧಿಕಾರವೂ ಬಂತು. ಅತ್ಯಂತ ಯಶಸ್ವಿ ಮಹಿಳಾ ಡಾನ್‌ಗಳಲ್ಲಿ ಒಬ್ಬಳಾಗಿ ಗಂಗೂಬಾಯಿ ಹೆಸರಾದಳು. ಅಲ್ಲದೆ ಮುಂಬೈನ ಹೇರಾ ಮಂಡಿ ರೆಡ್ ಲೈಟ್ ಏರಿಯಾದಲ್ಲಿ ಸೆಕ್ಸ್ ರಾಕೆಟ್ ಸಹ ನಡೆಸುತ್ತಿದ್ದಳು. ಈ ವ್ಯವಹಾರದಲ್ಲಿ ಗಂಗೂಬಾಯಿ ಅವರ ಒಪ್ಪಿಗೆಯಿಲ್ಲದೆ ಯಾರೂ ಯಾವುದೇ ಹುಡುಗಿಯನ್ನು ತನ್ನ ವೇಶ್ಯಾಗೃಹದಲ್ಲಿ ಇಟ್ಟುಕೊಂಡಿರಲಿಲ್ಲ ಎಂದು ಹೇಳಲಾಗುತ್ತದೆ. ಹೀಗೆ ಬಾಲಿವುಡ್ ನಟಿಯಾಗಲು ಬಂದ ಗಂಗೂಬಾಯಿ ಕಥಿಯಾವಾಡಿ ಮುಂದೊಂದು ದಿನ ಮಾಫಿಯಾ ಕ್ವೀನ್ (Mafia Queen) ಆಗಿ ಮಿಂಚಿದ ನಿಜ ಜೀವನದ ಕಥೆಯಿದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.