Thalapathy Vijay Last Film Heroine: ಕಾಲಿವುಡ್‌ನ ಸ್ಟಾರ್‌ ನಟ ದಳಪತಿ' ವಿಜಯ್‌ಗೆ ದೊಡ್ಡ ಅಭಿಮಾನಿಗಳ ಬಳಗವಿರುವುದರಿಂದ ತಮ್ಮ  ಸಿನಿಮಾಗಳಿಗೆ ದೊಡ್ಡಮಟ್ಟದ ಓಪನಿಂಗ್ ಪಡೆದೊಕೊಳ್ಳುತ್ತುದ್ದರು. ಇದೀಗ ಈ ನಟನ ಮನಸ್ಸು ರಾಜಕೀಯದ ಕಡೆಗೆ ವಾಲಿ ‘ತಮಿಳಗ ವೆಟ್ರಿ ಕಳಗಂ’ ಎಂಬ ಪಕ್ಷಕ್ಕೆ ಚಾಲನೆ ನೀಡಿದ್ದಾರೆ. ಆದರಿಂದ ಈ ನಟ ಸಂಪೂರ್ಣ ಗಮನ ಸದ್ಯ 2026ರ ವಿಧಾನಸಭಾ ಚುನಾವಣೆ ಮೇಲಿದೆ. ಇನ್ಮೇಲೆ ಈ ನಟ ಚಿತ್ರರಂಗದಿಂದ ದೂರ ಸರಿಯಲಿದ್ದಾರೆ.


COMMERCIAL BREAK
SCROLL TO CONTINUE READING

ನಟ ದಳಪತಿ ವಿಜಯ್‌ ಇನ್ಮುಂದೆ ನಟನೆಯಿಂದ ದೂರ ಉಳಿಯುತ್ತಾರೆಂಬ ವಿಷಯ ಹೊರಬರುತ್ತಿದ್ದಂತೆ ಫ್ಯಾನ್ಸ್‌ ಈ ನಟನ ಕೊನೆಯ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆ ಶುರುಮಾಡಿದ್ದಾರೆ. ಇತ್ತೀಚಿನ ಬೆಳವಣಿಗೆ ಪ್ರಕಾರ ತಿಳಿದು ಬಂದ ವಿಷಯವೇನೆಂದರೆ ವಿಜಯ್‌ ಕೊನೆಯ ಚಿತ್ರದಲ್ಲಿ ನಟಿನ ಸಮಂತಾ ಬಣ್ಣ ಹಚ್ಚಲಿದ್ದಾರೆ. ಇದಕ್ಕೂ ಮುನ್ನ ನಟಿ ಸಮಂತಾ ವಿಜಯ್‌ ಜೊತೆಗೆ ಮೂರು ಬಾರಿ ತೆರೆಹಂಚಿಕೊಂಡಿದ್ದರು.


ಇದನ್ನೂ ಓದಿ: Sagar Biligowda:ಪತ್ನಿಯ ಸೀಮಂತವನ್ನು ಅದ್ದೂರಿಯಾಗಿ ನೆರೆವೇರಿಸಿದ ಸತ್ಯ ಸೀರಿಯಲ್‌ ಅಮೂಲ್‌ ಬೇಬಿ!


ಸದ್ಯ ನಟಿ ಸಮಂತಾ ಆರೋಗ್ಯ ಸಮಸ್ಯೆಗಳ ಕಾರಣದಿಂದ ಸಿನಿಮಾಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡವರು, ಮತ್ತೆ ಈ ನಟಿ ಚಿತ್ರಗಳತ್ತ ಮುಖ ಮಾಡಿದ್ದಾರೆ.ಆದರಿಂದ ವಿಜಯದ ಕೊನೆಯ ಸಿನಿಮಾದಲ್ಲಿ ಸಮಂತಾ ನಾಯಕಿಯಾಗುತ್ತಿದ್ದಾರೆಂಬುದು ಅಭಿಮಾನಿಗಳ ಲೆಕ್ಕಾಚಾರವಾಗಿದೆ. ಇದೀಗ ನಟ ವಿಜಯ್‌ ವೆಂಕಟ್‌ ಪ್ರಭು ಡೈರೆಕ್ಷನ್‌ನ ತಮ್ಮ 68ನೇ ಚಿತ್ರ 'ದಿ ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್' ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಮೇಲೆ ತಮ್ಮ 69 ನೇ ಸಿನಿಮಾವನ್ನು  ಕೈಗೆತ್ತಿಕೊಳ್ಳಲಿದ್ದಾರೆ.


ದಳಪರಿ ವಿಜಯ್‌ 69ನೇ ಸಿನಿಮಾಗೆ 'ಜವಾನ್' ಖ್ಯಾತಿಯ ಅಟ್ಲೀ ಕುಮಾರ್‌ ಆಕ್ಷನ್‌ ಕಟ್‌ ಹೇಳಲಿದ್ದಾರೆ ಎನ್ನಲಾಗಿದೆ. ಹಾಎಯೇ ಇದೊಂದು ಹೈಬಜೆಟ್‌ ಚಿತ್ರವೆಂದು ಕೇಳಿಬಂದಿವೆ. ಈ ಸಿನಿಮಾಗಾಗಿ ಸನ್‌ ಪಿಕ್ಚರ್ಸ್ ಹಣ ಹೂಡಲಿದ್ದಾರೆಂಬ ವಿಷಯ ಹರಿದಾಡುತ್ತಿದ್ದು, ದರ ನಡುವೆ ಕಾರ್ತಿಕ್ ಸುಬ್ಬರಾಜು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಹಾಗೆಯೇ ಈ ಸಿನಿಮಾಗೆ 'ಆರ್‌ಆರ್‌ಆರ್' ಚಿತ್ರದ ನಿರ್ಮಾಪಕರು ನಿರ್ಮಾಣ ಮಾಡಲಿದ್ದಾರೆಂಬ ಗುಸುಗುಸು ಕಾಲಿವುಡ್‌ ಅಂಗಳದಲ್ಲಿ ಇದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ