ಮುಂಬೈ: ಇಂದು  ಅಯೋಧ್ಯೆ ವಿಚಾರವಾಗಿ ಸುಪ್ರೀಂಕೋರ್ಟ್ 1994 ರ ರಲ್ಲಿ ಇಸ್ಮೈಲ್ ಫಾರುಕಿ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.  


COMMERCIAL BREAK
SCROLL TO CONTINUE READING

ಈ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಬಾಲಿವುಡ್ ನಟ ಖ್ಯಾತ ನಟ ಅಮೀರ್ ಖಾನ್ ಈ ಬಗ್ಗೆ ನಾನೇಕೆ ಮಾತನಾಡುವುದಿಲ್ಲವೆಂದರೆ,ಸದ್ಯದಲ್ಲಿ ನಮ್ಮ ಚಿತ್ರ ಬಿಡುಗಡೆಯಾಗುವುದಿದೆ, ಈಗ ನಾನೇನಾದರು ಮಾತನಾಡಿದರೆ ಅದಕ್ಕೆ ತಡೆ ಬಿಳಲಿದೆ.ಆದ್ದರಿಂದ ಒಮ್ಮೆ ಚಿತ್ರ ಬಿಡುಗಡೆಯಾದ ನಂತರ ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವೆ ಎಂದು ತಿಳಿಸಿದ್ದಾರೆ.  


ಅಮೀರ್ ಖಾನ್ ಅಭಿನಯದ ಬಹುನಿರೀಕ್ಷಿತ ಥಗ್ಸ್ ಆಫ್ ಹಿಂದುಸ್ತಾನ್ ಬಿಡುಗಡೆಯಾಗಲಿದೆ.ಈ ಹಿನ್ನಲೆಯಲ್ಲಿ  ಅಮೀರ್ ಖಾನ್ ಪ್ರತಿಕ್ರಿಯಿಸಲು ನಿರಾಕರಿಸಿದರು.ಈ ಹಿಂದೆ 2015 ರಲ್ಲಿ ಅಸಹಿಷ್ಣತೆ ಬಗ್ಗೆ ಮಾತನಾಡಿ  ಬಲಪಂಥೀಯ ಸಂಘಟನೆಗಳಿಂದ  ಭಾರಿ ವಿರೋಧಕ್ಕೆ ಕಾರಣರಾಗಿದ್ದರು, 


ಥಗ್ಸ್ ಆಫ್ ಹಿಂದುಸ್ತಾನ್ ಚಿತ್ರದಲ್ಲಿ ಅಮಿತಾಬ್  ಬಚ್ಚನ್, ಕತ್ರಿನಾ ಕೈಫ್ ಫಾತಿಮಾ,ಜಾಕಿ ಶ್ರಾಫ್ ಶಶಾಂಕ್ ಆರೋರಾ ಮುಂತಾದವರು ತಾರಾಗಣದಲ್ಲಿ ಇದ್ದಾರೆ.