Juhi Chawla: 90 ರ ದಶಕದ ಪ್ರಸಿದ್ಧ ನಟಿ, ಜೂಹಿ ಚಾವ್ಲಾ ತಮ್ಮ ವೃತ್ತಿಜೀವನದಲ್ಲಿ ಅನೇಕ ಸೂಪರ್ಹಿಟ್ ಚಲನಚಿತ್ರಗಳನ್ನು ನೀಡಿದ್ದಾರೆ. ಆದರೆ ನಟಿಯ ವೃತ್ತಿಜೀವನವು ಉತ್ತುಂಗದಲ್ಲಿದ್ದಾಗ, ಅವರು 1995 ರಲ್ಲಿ ಉದ್ಯಮಿ ಜೈ ಮೆಹ್ತಾ ಅವರನ್ನು ರಹಸ್ಯವಾಗಿ ವಿವಾಹವಾದರು. ಈಗ ವರ್ಷಗಳ ನಂತರ ಜೂಹಿ ತಾನು ಗುಟ್ಟಾಗಿ ಮದುವೆಯಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಹೌದು ಜೂಹಿ ಚಾವ್ಲಾ ಅವರು ಜೈ ಮೆಹ್ತಾ ಅವರೊಂದಿಗೆ ರಹಸ್ಯ ವಿವಾಹವನ್ನು ಮಾಡಿಕೊಂಡಿದ್ದರು.. ಇದರಲ್ಲಿ ಇಬ್ಬರ ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು. ಆದರೆ, ಆ ಸಮಯದಲ್ಲಿ ಮೊಬೈಲ್ ಫೋನ್ ಇರಲಿಲ್ಲ, ಇದರಿಂದಾಗಿ ನಟಿಯ ಮದುವೆಯ ಸುದ್ದಿ ಬಹಳ ದಿನಗಳ ನಂತರ ಬೆಳಕಿಗೆ ಬಂದಿದೆ. ಹೀಗಿರುವಾಗ ಇದರ ಹಿಂದಿನ ಕಾರಣವನ್ನು ಸ್ವತಃ ಜೂಹಿ ಹೇಳಿದ್ದಾರೆ.


ಇದನ್ನೂ ಓದಿ-ಪ್ರೆಸ್ ಕ್ಲಬ್ ಆಫ್ ಬೆಂಗಳೂರು 2024-25ನೇ ಚುನಾವಣೆ ಫಲಿತಾಂಶ ಪ್ರಕಟ..!


ಈ ಬಗ್ಗೆ ಮಾತನಾಡಿದ ಜೂಹಿ ಚಾವ್ಲಾ, "ಆ ಸಮಯದಲ್ಲಿ ನಾನು ನನ್ನ ವೃತ್ತಿಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೆ ಮತ್ತು ನನ್ನ ಬಹುತೇಕ ಚಿತ್ರಗಳು ಸೂಪರ್‌ಹಿಟ್ ಆಗುತ್ತಿದ್ದವು. ಜೈ ನನ್ನ ಜೀವನದಲ್ಲಿ ಬಂದ ಸಮಯ ಇದು. ನಾನು ಮುಂದೆ ಹೋಗಬೇಕೆಂದು ಬಯಸಿದ್ದೆ,.. ಆದರೆ ಮದುವೆಯ ನಂತರ ನನ್ನ ವೃತ್ತಿಜೀವನ ಕೊನೆಗೊಳ್ಳಬಹುದು ಎಂದು ನಾನು ಹೆದರುತ್ತಿದ್ದೆ. ಹೀಗಾಗಿ ನಾನು ಈ ಮದುವೆಯನ್ನು ರಹಸ್ಯವಾಗಿಡುವ ಮತ್ತು ನನ್ನ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸುವ ಮಾರ್ಗವನ್ನು ಆರಿಸಿದೆ.. ಈ ಕಾರಣಕ್ಕಾಗಿ ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ತನ್ನ ಮದುವೆಯನ್ನು ಮರೆಮಾಡಲು ನಿರ್ಧರಿಸಿದೆ" ಎಂದು ಜೂಹಿ ಚಾವ್ಲಾ ಹೇಳಿದ್ದಾರೆ.  


ಇನ್ನು ರಾಕೇಶ್ ರೋಷನ್ ಮತ್ತು ಉದ್ಯಮಿ ಜೈ ಮೆಹ್ತಾ ನಡುವೆ ಉತ್ತಮ ಸ್ನೇಹ ಇತ್ತು.. ಹೀಗಿರುವಾಗ ವ್ಯಾಪಾರ್ ಚಿತ್ರದ ಶೂಟಿಂಗ್ ವೇಳೆ ಇಬ್ಬರೂ ಭೇಟಿಯಾಗಿ ನಂತರ ಈ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತ್ತು. ಇದಾದ ಬಳಿಕ 1995ರಲ್ಲಿ ಇಬ್ಬರೂ ವಿವಾಹವಾದರು. ಇಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ, ಮಗಳು ಜಾನ್ವಿ ಮತ್ತು ಮಗ ಅರ್ಜುನ್.  


 ಇದನ್ನೂ ಓದಿ-ನಿವೃತ್ತಿ ನಿರ್ಧಾರದ ಶಾಕ್ ಬೆನ್ನಲ್ಲೇ ಅಚ್ಚರಿಯ ಸಂಗತಿ ರಿವೀಲ್! ಈ ಕಾರಣಕ್ಕೆ ಭಾರತ ತೊರೆದು ಲಂಡನ್’ನಲ್ಲಿ ಸೆಟಲ್ ಆಗ್ತಿದ್ದಾರೆ ವಿರಾಟ್-ಅನುಷ್ಕಾ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.