'ರಾಕಿ'.. ಈ ಹೆಸರು ಕಿವಿಗೆ ಬೀಳುತ್ತಿದ್ದಂತೆ ಬಹುತೇಕರಿಗೆ ಯಶ್‌ ಮೊಗವೇ ಪರಿಚಯವಾಗುತ್ತದೆ. ಏಕೆಂದರೆ 'ಕೆಜಿಎಫ್'‌ ಸಿನಿಮಾ ಮೂಲಕ ಕನ್ನಡದ ನಟ ಯಶ್‌ 'ರಾಕಿ (Rocking Star Yash) ಭಾಯ್‌' ಎಂದೇ ಟ್ರೆಂಡ್‌ ಆಗಿದ್ದಾರೆ. ಆದರೆ 1981ರಲ್ಲಿ 'ರಾಕಿ' ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ಹಿಂದಿ ಸಿನಿರಂಗದ ಲೆಜೆಂಡ್‌ ಸಂಜಯ್‌ ದತ್‌, ಕನ್ನಡ ಸಿನಿಮಾಗಾಗಿ ದೊಡ್ಡ ತ್ಯಾಗ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Yash Father : ಆ ಘಟನೆ ನಡೆದಾಗ ಯಶ್‌ ತಂದೆ ಗಳಗಳನೆ ಅತ್ತುಬಿಟ್ರಂತೆ!


ಹೌದು, ಇಲ್ಲಿ ಸಂಜಯ್‌ ದತ್‌ ಮಾಡಿದ ತ್ಯಾಗ ಏನೆಂದರೆ 'ಕೆಜಿಎಫ್'‌ ಚಿತ್ರದ ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು.ಇದುವರೆಗೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸದ ಸಂಜಯ್‌ ದತ್‌ ಅವರು, 'ಕೆಜಿಎಫ್'‌ ಸಿನಿಮಾ ಟೀಂ ಮಾಡಿದ ಮನವಿಗೆ ಒಪ್ಪಿದ್ದರು.1981ರಲ್ಲಿ 'ರಾಕಿ' ಆಗಿ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದ ಸಂಜಯ್‌ ದತ್‌ ಬರೋಬ್ಬರಿ 40 ವರ್ಷಗಳ ಬಳಿಕ ತಮ್ಮ ಟೈಟಲ್‌ ಬಿಟ್ಟುಕೊಟ್ಟು, 'ಅಧೀರ'ನ ಪಾತ್ರ ಮಾಡಿದ್ದಾರೆ. ಅಲ್ಲದೆ ಕನ್ನಡ ಸಿನಿಮಾ ಮತ್ತು ಕನ್ನಡಿಗರ ಬಗ್ಗೆ ಹೆಮ್ಮೆಯ ಮಾತುಗಳನ್ನ ಆಡಿದ್ದಾರೆ.


ಇದನ್ನೂ ಓದಿ: "ಬೆಲ್ ಬಟನ್" ಗೆ ಚಾಲನೆ ನೀಡಿದ ಸುನೀಲ್ ಕುಮಾರ್ ದೇಸಾಯಿ 


ಸಂಜಯ್‌ ದತ್‌ಗಾಗಿ ಹಠ..!


'ಕೆಜಿಎಫ್'‌ ಸಿನಿಮಾ ಟೀಂ ಸಂಜಯ್‌ ದತ್‌ ಅವರನ್ನು ಕರೆತರಲು ಅದೆಷ್ಟರ ಮಟ್ಟಿಗೆ ಡಿಸೈಡ್‌ ಆಗಿತ್ತು ಎಂದರೆ, 'ಅಧೀರ'ನ ಪಾತ್ರಕ್ಕೆ ಸಂಜಯ್‌ ದತ್‌ ಅವರನ್ನೇ ಫಿಕ್ಸ್‌ ಮಾಡಲಾಗಿತ್ತು.ಸಂಜಯ್‌ ದತ್‌ ಅವರು ಈ ಪಾತ್ರವನ್ನು ಮಾಡಿದರೆ ಮಾತ್ರ ಅದಕ್ಕೆ ಯಶಸ್ಸು ಎಂದು ಫಿಕ್ಸ್‌ ಆಗಿದ್ದರು ಡೈರೆಕ್ಟರ್‌ ಪ್ರಶಾಂತ್‌ ನೀಲ್.‌ 'ಕೆಜಿಎಫ್'‌ ಸಿನಿಮಾ ಟೀಂ‌ ಆಸೆ ಕಡೆಗೂ ಈಡೇರುವ ಮೂಲಕ, ಸಂಜಯ್‌ ದತ್‌ ಇದೇ ಮೊದಲ ಬಾರಿಗೆ ದಕ್ಷಿಣದ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.


ಇದೀಗ 'ಕೆಜಿಎಫ್-2'‌ (KGF Chapter 2) ಪ್ರಚಾರದ ಸಂದರ್ಭದಲ್ಲೂ ಕನ್ನಡ ಸಿನಿಮಾ ಕುರಿತು ಹೆಮ್ಮೆಯಿಂದಲೇ ಮಾತನಾಡಿರುವ ಬಾಲಿವುಡ್‌ ಲೆಜೆಂಡ್‌ ಸಂಜಯ್‌ ದತ್‌, ತಮಗೆ ನೀಡಿರುವ ಅಧೀರನ ಪಾತ್ರದ ಕುರಿತು ಸಂತಸ ವ್ಯಕ್ತಪಡಿಸುತ್ತಿದ್ದಾರೆ.ಅಲ್ಲದೆ ಯಶ್‌ ಅವರ ಬಗ್ಗೆಯೂ ಹೆಮ್ಮೆಯ ಮಾತುಗಳನ್ನಾಡಿದ್ದ ದತ್. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಉತ್ತರ ಭಾರತದಲ್ಲಿ ಪ್ರಚಾರ ನಡೆಸುತ್ತಿರುವ 'ಕೆಜಿಎಫ್-2'‌ ತಂಡ, ಫ್ಯಾನ್ಸ್‌ ಅಬ್ಬರ ಕಂಡು ಫುಲ್‌ ಖುಷ್‌ ಆಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.