ನವದೆಹಲಿ: ಇತ್ತೀಚಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಟಲಿಯಲ್ಲಿ ಮದುವೆ ಎಲ್ಲರಿಗೂ ಹೊತ್ತಿರುವ ಸುದ್ದಿ. ಅಲ್ಲದೆ ಇವರ ಮದುವೆಯ ಚಿತ್ರಗಳು ಸಹಿತ ಕೆಲವು ದಿನ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದವು.


COMMERCIAL BREAK
SCROLL TO CONTINUE READING

ಈಗ ಈ ಜೋಡಿ ಮತ್ತೆ ಸುದ್ದಿಯಲ್ಲಿದೆ! ಅದೇನಪ್ಪಾ ಎಂದರೆ ಬಿಜೆಪಿಯ ಶಾಸಕ ಪನ್ನಾಲಾಲ್ ಶಾಸಕ ಎನ್ನುವವರು  ಈ ಜೋಡಿ  ವಿದೇಶದ ಇಟಲಿಯಲ್ಲಿ ಮದುವೆಯಾಗಿರುವುದರ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.



ರಾಮ,ಕೃಷ್ಣ ,ಯುಧಿಸ್ಥಿರೆಲ್ಲರೂ ಸಹಿತ ಭಾರತದಲ್ಲಿಯೇ ಮದುವೆಯಾಗಿದ್ದಾರೆ. ಇಲ್ಲಿಯವರೆಗೆ ನೀವೆಲ್ಲಾ ಇಲ್ಲಿಯೇ ಮದುವೆ ಯಾಗಿದ್ದಿರಿ,ಯಾರು ಕೂಡಾ ಕೊಹ್ಲಿ ಅಥವಾ ಅನುಷ್ಕಾ ರೀತಿಯಲ್ಲಿ ವಿದೇಶದಲ್ಲಿ ಮದುವೆಯಾಗುವುದಿಲ್ಲ ಎಂದು ಈ ಜೋಡಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊಹ್ಲಿ ಭಾರತದಲ್ಲಿಯೇ ಹೆಸರು ಐಶ್ವರ್ಯವೆಲ್ಲವನ್ನು  ಸಂಪಾಧಿಸಿ ವಿದೇಶಕ್ಕೆ ತೆಗೆದುಕೊಂಡು ಹೋಗಿರುವುದು ಸರಿಯಲ್ಲ ಎಂದು ಈ ಜೋಡಿಗಳ ನಡೆಯನ್ನು ಖಂಡಿಸಿದ್ದಾರೆ. ಆದರೆ ಬಿಜೆಪಿ ಶಾಸಕರ ಮಾತನ್ನು ಸಾಮಾಜಿಕ ಜಾಲತಾಣದಲ್ಲಿ  ಟ್ರೋಲ್ ಮಾಡಲಾಗಿದೆ. 


ಇದೆ 21 ಮತ್ತು 26 ರಂದು ನವದೆಹಲಿ ಮತ್ತು ಮುಂಬೈನಲ್ಲಿ ಬಾಲಿವುಡ್ ಮತ್ತು ಕ್ರಿಕೆಟ್ ಹಾಗೂ ಇನ್ನಿತರ ರಂಗದ ಮಹಾನ್ ವ್ಯಕ್ತಿಗಳಿಗೆ ಔತಣಕೂಟವನ್ನು ಏರ್ಪಡಿಸಿದ್ದಾರೆ ಎಂದು ತಿಳಿದುಬಂದಿದೆ.