Big Exclusive Story: ಬಿಗ್ ಬಾಸ್ ಮನೆಯಿಂದ ಸುದೀಪ್ ಅವರೇ ಔಟ್ ಆಗ್ತಾರಾ? ಹಾಗಾದರೆ ಮುಂದಿನ ‘ಬಿಗ್ ಬಾಸ್’ ಯಾರು?
Big Exclusive Story On BBK: ಆಗ ಅಳೆದು ತೂಗಿ ಕಿಚ್ಚ ಸುದೀಪ್ ಅವರಿಗೆ ನಿರೂಪಣೆಯ ಹೊಣೆ ನೀಡಲಾಗಿತ್ತು. ಸುದೀಪ್ ತಮ್ಮ ವಿಶೇಷ ಮ್ಯಾನರಿಸಂ ಮೂಲಕ ಕಾರ್ಯಕ್ರಮಕ್ಕೆ ಕಳೆ ತಂದುಕೊಟ್ಟರು. ಹಾಗಾಗಿ ಅಭಿಮಾನಿಗಳ ಪಾಲಿನ ಕಿಚ್ಚ ಕನ್ನಡದ ಬಿಗ್ ಬಾಸ್ ಕಾರ್ಯಕರ್ಮದಲ್ಲಿ ಅನಭಿಷಕ್ತ ದೊರೆಯಂತೆಯೇ ಇದ್ದರು. ಆದರೆ, ಬದಲಾವಣೆ ಜಗದ ನಿಯಮ…
Big Exclusive Story On Bigg Boss Kannada: ಕನ್ನಡದ ಸಿನಿಮಾ, ಕಿರುತೆರೆ ಮತ್ತು ಮನೋರಂಜನಾ ಕ್ಷೇತ್ರದಲ್ಲೀ ಇದು ಅತ್ಯಂತ ದೊಡ್ಡ Exclusive ಸುದ್ದಿ. ರಾಜ್ಯದ ಪ್ರಮುಖ ಜಿಇಸಿ ವಾಹಿನಿ ಕಲರ್ಸ್ ಕನ್ನಡ (Colours Kannada)ದ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ (Bigg Boss) ಷೋದಿಂದ ಹೆಸರಾಂತ ನಟ, ನಿರ್ದೇಶಕ ಮತ್ತು ಇದೇ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಖ್ಯಾತ ನಿರೂಪಕ ಎನ್ನುವ ಪಟ್ಟವನ್ನೂ ಗಿಟ್ಟಿಸಿಕೊಂಡಿದ್ದ ಕಿಚ್ಚ ಸುದೀಪ್ ಹೊರಗೆ ಹೋಗುವ ಸಾಧ್ಯತೆಗಳು ಕಂಡುಬರುತ್ತಿವೆ.
[[{"fid":"429823","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]
ಬಿಗ್ ಬಾಸ್ ಶೋ (Bigg Boss Show) ಎಂದರೆ ಸುದೀಪ್, ಸುದೀಪ್ ಎಂದರೆ ಬಿಗ್ ಬಾಸ್ ಕಾರ್ಯಕ್ರಮ ಎನ್ನುವಂತೆ ಇತ್ತು. ಬಿಗ್ ಬಾಸ್ ಶೋ ಮತ್ತು ಸುದೀಪ್ ಅಷ್ಟು ಮನೆಮಾತಾಗಿದ್ದರು. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಳ್ಳೆಯ ಟಿಆರ್‌ಪಿ ಕೂಡ ಬರುತ್ತಿತ್ತು. ಅಂಥದ್ದರಲ್ಲಿ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮ ಬಿಡುವರೇ ಅಥವಾ ಕಲರ್ಸ್ ಕನ್ನಡ ವಾಹಿನಿ ಸುದೀಪ್ ಅವರಿಗೆ ಗೇಟ್ ಪಾಸ್ ಕೊಡುವುದೇ ಎನ್ನುವ ಅನುಮಾನ ಮುಡುವುದು ಸಹಜ. ಆದರೆ ಕನ್ನಡ ಚಿತ್ರರಂಗದ ಉನ್ನತ ಮೂಲಗಳ ಪ್ರಕಾರ ಇಷ್ಟು ದಿನ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಯಾರು ಉಳಿದುಕೊಳ್ಳುತ್ತಾರೆ? ಯಾರು ಔಟ್ ಆಗ್ತಾರೆ ಅಂತಾ ಘೋಷಣೆ ಮಾಡುತ್ತಿದ್ದ ಕಿಚ್ಚ ಸುದೀಪ್ ಅವರೇ ಹೊರಗೆ ಹೋಗುತ್ತಿದ್ದಾರೆ.
[[{"fid":"429819","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಬಿಗ್ ಬಾಸ್ ಕಾರ್ಯಕ್ರಮದ ಅನಭಿಷಕ್ತ ದೊರೆಯಾಗಿದ್ದ 'ಕಿಚ್ಚ'!
ಕಲರ್ಸ್ ಕನ್ನಡ (Colours Kannada) ವಾಹಿನಿ ಮಾಡಿದ ಅಪರೂಪದ ಪ್ರಯೋಗ ಬಿಗ್ ಬಾಸ್ ಷೋ. ಆಗ ಅಳೆದು ತೂಗಿ ಕಿಚ್ಚ ಸುದೀಪ್ (Kiccha Sudeepa) ಅವರಿಗೆ ನಿರೂಪಣೆಯ ಹೊಣೆ ನೀಡಲಾಗಿತ್ತು. ಸುದೀಪ್ ತಮ್ಮ ವಿಶೇಷ ಮ್ಯಾನರಿಸಂ ಮೂಲಕ ಕಾರ್ಯಕ್ರಮಕ್ಕೆ ಕಳೆ ತಂದುಕೊಟ್ಟರು. ಹಾಗಾಗಿ ಅಭಿಮಾನಿಗಳ ಪಾಲಿನ ಕಿಚ್ಚ ಕನ್ನಡದ ಬಿಗ್ ಬಾಸ್ ಕಾರ್ಯಕರ್ಮದಲ್ಲಿ ಅನಭಿಷಕ್ತ ದೊರೆಯಂತೆಯೇ ಇದ್ದರು. ಬದಲಾವಣೆ ಜಗದ ನಿಯಮ… Colours Kannada ವಾಹಿನಿ ಬಿಗ್ ಬಾಸ್ ಕಾರ್ಯಕ್ರಮದಿಂದ ಸುದೀಪ್ ಅವರನ್ನೇ ಬದಲಾಯಿಸಲು ನಿರ್ಧರಿಸಿದೆ.
ಇದನ್ನೂ ಓದಿ- ಬಿಗ್ ಬಾಸ್ ಪ್ರಾರಂಭಕ್ಕೆ ಎಲ್ಲಾ ರೆಡಿ..! ಸ್ಪರ್ಧಿಗಳೂ ಸಹ ಸಿದ್ಧ.. ಶೋ ಯಾವಾಗ ಶುರು ಗೊತ್ತೆ..?
[[{"fid":"429825","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"4":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"4"}}]]
ಸುದೀಪ್ ಬದಲಾವಣೆಯ ಸೂಚನೆ!
Colours ವಾಹಿನಿ ಹಿಂದೆ ಬಿಗ್ ಬಾಸ್ ರೀತಿಯ ಕಾರ್ಯಕ್ರಮವನ್ನು ಪರಿಚಯಿಸಿದ್ದೇ ಒಂದು ಪ್ರಯೋಗವಾಗಿ.. ಕನ್ನಡ ಮಾತ್ರವಲ್ಲದೆ ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಮಾಡಿತ್ತು. ಹಿಂದಿಯಲ್ಲಿ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಷೋ ನಡೆಸಿಕೊಟ್ಟಿದ್ದರು. ಹಿಂದಿಯಲ್ಲಿ ಕೂಡ ಬಿಗ್ ಬಾಸ್ ಕಾರ್ಯಕ್ರಮ ಮನೆಮಾತಾಗಿತ್ತು. ಟಿಆರ್‌ಪಿಯಲ್ಲೂ ಬಿಗ್ ಬಾಸ್ ಷೋ ಮುಂಚೂಣಿಯಲ್ಲಿತ್ತು. ಆದರೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹೊಸತನ ತರಬೇಕು ಎಂದು ಬಯಸಿದ Colours ವಾಹಿನಿಯ ಮ್ಯಾನೇಜ್ಮೆಂಟ್ ಸಲ್ಮಾನ್ ಖಾನ್ ಅವರ ಸ್ಥಾನಕ್ಕೆ ಅನಿಲ್ ಕಪೂರ್ (Anil Kapoor) ಅವರನ್ನು ತಂದಿತ್ತು.
[[{"fid":"429827","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"5":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"5"}}]]
ಅನಿಲ್ ಕಪೂರ್ ಬಂದ ಬಳಿಕ ಬಿಗ್ ಬಾಸ್ ಕಾರ್ಯಕ್ರಮ ಇನ್ನಷ್ಟು ಜನಪ್ರಿಯವಾಗಿದೆ. ಈಗ ಇದೇ ರೀತಿಯ ಹೊಸತನವನ್ನು ಕನ್ನಡದಲ್ಲೂ ತರಬೇಕೆಂದು ವಾಹಿನಿ ಬಯಸಿದೆ. ಅದರಿಂದಾಗಿ ಕಿಚ್ಚ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರಗೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸುದೀಪ್ ಸ್ಥಾನ ತುಂಬುವವರು ಯಾರು?
ಕಿಚ್ಚ ಸುದೀಪ್ ಅವರನ್ನು ಬಿಗ್ ಬಾಸ್ ಷೋದಿಂದ ಹೊರಗೆ ಕಳುಹಿಸಲು ನಿರ್ಧರಿಸಿರುವ Colours Kannada ವಾಹಿನಿ ಅವರ ಜಾಗಕ್ಕೆ ಯಾರನ್ನು ತರಬೇಕು ಎಂದು ತಲೆಕೆಡಿಸಿಕೊಂಡಿದೆ. Bigg Boos ಕಾರ್ಯಕ್ರಮಕ್ಕೆ ಬೇಕಾದ ಮ್ಯಾನರಿಸಂ ಹೊಂದಿರುವ ನಾಯಕ ನಟನಿಗಾಗಿ ಹುಡುಕಾಟ ನಡೆಸಿದೆ. ಈಗಾಗಲೇ ಕೆಲ ನಾಯಕ ನಟರನ್ನು ಸಮರ್ಕಿಸಿದೆ ಎಂದು ಕನ್ನಡ ಚಿತ್ರರಂಗದ ಮೂಲಗಳು ತಿಳಿಸುತ್ತಿವೆ.
[[{"fid":"429828","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"6":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"6"}}]]
ಇದನ್ನೂ ಓದಿ- ಈ ಬಾರಿಯ ಬಿಗ್‌ಬಾಸ್‌ಗೆ ಎಂಟ್ರಿ ಕೊಡಲಿದ್ದಾರೆ ಈ ಖ್ಯಾತ ಜ್ಯೋತಿಷಿ.. ದುಪ್ಪಟ್ಟು ಸಂಭಾವನೆ.. ಇತಿಹಾಸದಲ್ಲಿ ಇದೇ ಮೊದಲು!
ರಿಷಬ್ ಶೆಟ್ಟಿ ಆಗುವರೇ ‘ಬಿಗ್ ಬಾಸ್?’
ಗಾಂಧಿ ನಗರದ ಮೂಲಗಳ ಪ್ರಕಾರ ಎಲ್ಲವೂ ಬದಲಾವಣೆ ಬಯಸಿರುವ Colours Kannada ವಾಹಿನಿ ಅಂದುಕೊಂಡಂತೆ ನಡೆದರೆ ಬಿಗ್ ಬಾಸ್ 11ನೇ ಸೀಸನ್ ಅನ್ನು ಖ್ಯಾತ ನಟ ರಿಷಬ್ ಶೆಟ್ಟಿ ನಡೆಸಿಕೊಡುವ ಸಾಧ್ಯತೆ ಇದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.