Naga Chaitanya :  ಸಮಂತಾ ರುತ್ ಪ್ರಭು ಅವರು ಇತ್ತೀಚೆಗೆ  ಮೈಯೋಸಿಟಿಸ್‌ನಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದರು. ಆಕೆಯ ಮಾಜಿ ಮಾವ ನಾಗಾರ್ಜುನ್ ಅವರನ್ನು ಭೇಟಿಯಾಗಬಹುದು ಎಂಬ ವದಂತಿಗಳು ಹಬ್ಬುತ್ತಿವೆ. ಈ ನಡುವೆ ನಾಗ ಚೈತನ್ಯ  ಕೂಡ ತಮ್ಮ ಮಾಜಿ ಪತ್ನಿ ಸಮಂತಾ ರುತ್ ಪ್ರಭು ಅವರನ್ನು ಭೇಟಿ ಮಾಡಬಹುದು ಎಂಬ ಸುದ್ದಿಗಳು ಹರಿದಾಡುತ್ತಿವೆ. ಇತ್ತಿಚೆಗೆ ಸಮಂತಾ ಅವರಿಗೆ ಮೈಯೋಸಿಟಿಸ್ ಕಾಯಿಲೆ ಇರುವುದು ಪತ್ತೆಯಾಯಿತು. ಕಳೆದ ವಾರ, ಸಮಂತಾ ಅವರು ಮೈಯೋಸಿಟಿಸ್‌ನೊಂದಿಗೆ ಹೋರಾಡುತ್ತಿದ್ದಾರೆಂದು ಬಹಿರಂಗಪಡಿಸಿದರು. ಇದನ್ನು ತಿಳಿದು ಅಪಾರ ಅಭಿಮಾನಿಗಳಿಗೆ ಆಘಾತವುಂಟಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Pathaan Teaser: ಶಾರುಖ್ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸಿಕ್ತು ಭಾರಿ ಗಿಫ್ಟ್, 


ಇಂಡಿಯಾ ಹೆರಾಲ್ಡ್ ವರದಿಯ ಪ್ರಕಾರ ನಾಗಾರ್ಜುನ ಅವರು ಸಮಂತಾ ಅವರ ರೋಗದ ಬಗ್ಗೆ ತಿಳಿದ ನಂತರ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಬಯಸುತ್ತಿದ್ದಾರಂತೆ. ಕುಟುಂಬದೊಂದಿಗಿನ ಸಂಬಂಧವನ್ನು ಲೆಕ್ಕಿಸದೆ ನಾಗಾರ್ಜುನ್ ಅವರು ಸಮಂತಾ ಅವರೊಂದಿಗಿನ ನಿಕಟ ಬಾಂಧವ್ಯದ ಬಗ್ಗೆ ಮುಕ್ತವಾಗಿ ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಸಮಂತಾ ಅವರನ್ನು ಭೇಟಿ ಮಾಡಲು ಯೋಜಿಸುತ್ತಿದ್ದರೂ, ನಾಗ ಚೈತನ್ಯ ಅವರೊಂದಿಗೆ ಬರುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಯಾವುದೇ ಸತ್ಯಾಸತ್ಯತೆಯನ್ನು Zee Kannada News ಖಚಿತ ಪಡಿಸುವುದಿಲ್ಲ. 


ಶುಕ್ರವಾರ, ಸಮಂತಾ ಸುದೀರ್ಘ ವಿರಾಮದ ನಂತರ Instagram ಗೆ ಮರಳಿದರು ಮತ್ತು ಅವರು ಮೈಯೋಸಿಟಿಸ್‌ಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಬಹಿರಂಗಪಡಿಸಿದರು. ತನ್ನ ಚಿಕಿತ್ಸೆಯ ಚಿತ್ರವನ್ನು ಹಂಚಿಕೊಂಡಿರುವ ಸಮಂತಾ, "ಕೆಲವು ತಿಂಗಳ ಹಿಂದೆ ನನಗೆ ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಸ್ಥಿತಿ ಇರುವುದು ಪತ್ತೆಯಾಯಿತು. ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಆದರೆ ನಾನು ನಿರೀಕ್ಷಿಸಿದ್ದಕ್ಕಿಂತ ಸ್ವಲ್ಪ ಸಮಯ ಹೆಚ್ಚು ತೆಗೆದುಕೊಳ್ಳುತ್ತಿದೆ. ಈ ದುರ್ಬಲತೆಯನ್ನು ಒಪ್ಪಿಕೊಳ್ಳುವುದು ನಾನು ಇನ್ನೂ ಹೋರಾಡುತ್ತಿದ್ದೇನೆ. ಶೀಘ್ರದಲ್ಲೇ ನಾನು ಸಂಪೂರ್ಣ ಗುಣಮುಖನಾಗುತ್ತೇನೆ ಎಂದು ವೈದ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ" ಎಂದು ತಿಳಿಸಿದ್ದರು.


ಇದನ್ನೂ ಓದಿ : Indian 2 ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಖ್ಯಾತ ಕ್ರಿಕೆಟರ್‌ ತಂದೆ.. ಶೂಟಿಂಗ್‌ ಸೆಟ್ ಫೋಟೋ ವೈರಲ್‌!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.