sonakshi sinha: ಬಾಲಿವುಡ್ ಹೀರೋಯಿನ್ ಸೋನಾಕ್ಷಿ ಸಿನ್ಹಾ ಶೀಘ್ರದಲ್ಲೇ ಹೊಸ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಸೋನಾಕ್ಷಿ ಹಾಗೂ ಜಹೀರ್ ಇಕ್ಬಾಲ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಜೂನ್ 23 ರಂದು ಅವರ ಮದುವೆಯ ಆರತಕ್ಷತೆ ನಡೆಯಲಿದೆ ಎನ್ನಲಾಗಿದೆ.. ಸೋನಾಕ್ಷಿ ಹಿಂದೂ ಆಗಿದ್ದರೆ ಜಹೀರ್ ಇಕ್ಬಾಬ್ ಮುಸ್ಲಿಂ. ಸೋನಾಕ್ಷಿ ಯಾವ ಸಂಪ್ರದಾಯದಲ್ಲಿ ಮದುವೆಯಾಗುತ್ತಾರೆ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.. 


COMMERCIAL BREAK
SCROLL TO CONTINUE READING

ಸೋನಾಕ್ಷಿ ಸಿನ್ಹಾ ಮದುವೆಗೂ ಮುನ್ನ ಮತಾಂತರಗೊಳ್ಳುತ್ತಾರಾ ಎಂಬ ಪ್ರಶ್ನೆಯೂ ಎದ್ದಿದೆ. ಆದರೆ ಮದುವೆಯ ನಂತರ ಸೋನಾಕ್ಷಿ ಧರ್ಮ ಬದಲಾಯಿಸಲಿದ್ದಾರೆ ಎನ್ನಲಾಗಿದೆ. ಇಡೀ ಇಂಡಸ್ಟ್ರಿ ಚಿತ್ತ ಸೋನಾಕ್ಷಿ ಮದುವೆಯ ಮೇಲಿದೆ. ಹಿಂದೂ ಅಥವಾ ಮುಸ್ಲಿಂ ಯಾವುದೋ ಒಂದು ಸಂಪ್ರದಾಯದ ಪ್ರಕಾರ ಸೋನಾಕ್ಷಿ ಮದುವೆಯಾಗಲಿದ್ದಾರೆ ಎಂದು ಸೋನಾಕ್ಷಿ ಆಪ್ತರು ಹೇಳಿದ್ದಾರೆ. ಆದರೆ ಮದುವೆ ಹೇಗೆ ನಡೆಯುತ್ತದೆ? ಯಾವ ಧಾರ್ಮಿಕ ಸಂಪ್ರದಾಯವನ್ನು ನಡೆಸಲಾಗುವುದು ಎಂಬುದು ಸ್ಪಷ್ಟವಾಗಿಲ್ಲ. 


ಇದನ್ನೂ ಓದಿ-ಕಿಲ್ಲರ್ಸ್ ʼಡಿ ಗ್ಯಾಂಗ್ʼಗೆ ಪೊಲೀಸರಿಂದ ರಾಜಾತಿಥ್ಯ..!? ಇತಿಹಾಸದಲ್ಲೇ ಮೊದಲ ಬಾರಿಗೆ ಠಾಣೆ ಸುತ್ತಮುತ್ತ ನಿಷೇಧಾಜ್ಞೆ..!


ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ತನ್ನ ಬಹುಕಾಲದ ಗೆಳೆಯ ನಟ ಜಹೀರ್ ಇಕ್ಬಾಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾಳೆ. ಜೂನ್ 23 ರಂದು ಹಸೆಮನೆ ಏರಲು ಸಿದ್ಧವಾಗಿದ್ದಾರೆ.. ಕೆಲವು ದಿನಗಳಿಂದ ಅವರ ಮದುವೆಯ ಬಗ್ಗೆ ವದಂತಿಗಳು ಹರಿದಾಡುತ್ತಿದ್ದವು.. 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮದುವೆಯನ್ನು ಮುಂದೂಡಲಾಗಿತ್ತು.. 


ಆದರೆ ಈ ಮದುವೆ ಬಗ್ಗೆ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಎಕ್ವಾಲ್ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಸೋನಾಕ್ಷಿ ಅವರ ತಂದೆ (ನಟ-ಸಂಸದ) ಶತ್ರುಘ್ನ ಸಿನ್ಹಾ ಅವರು ಟಿಎಂಸಿ ಪಕ್ಷದಿಂದ ಪಶ್ಚಿಮ ಬಂಗಾಳದ ಅಸನ್ಸೋಲ್‌ನಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದಾರೆ..  


ಇದನ್ನೂ ಓದಿ-ಎನ್‌ಸಿಸಿ ಡ್ರೆಸ್‌ನಲ್ಲಿರುವ ಈ ಹುಡುಗ ಈಗ ಸ್ಟಾರ್ ಹೀರೋ..! ಯಾರು ಅಂತ ಗೆಸ್‌ ಮಾಡಿ ನೋಡೋಣ..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ